ಬಿಳಿಗಿರೀ ರಂಗಯ್ಯಾs
ಬಿಳಿಗಿರೀ ರಂಗಯ್ಯಾs
ನೀನೇ ಹೇಳಯ್ಯಾs
ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ
ಮುತ್ತುಗದಾ ಹೂವು ಮಲ್ಲಿಗೆಯೇ
ಅತ್ತಿಯಾ ಹಣ್ಣು ಅಂಜೂರವೇ
ಚಿಟ್ಟೆಯಾ ಚಿಟ್ಟೇs,
ಚಿಟ್ಟೆಯಾ ಚಿಟ್ಟೇ ದುಂಬೀಯೇ
ವಕ್ತೂರೀ ಕಾಡಿಗೆ ಕಸ್ತೂರಿಯೇ
ಕಾಜಾಣ ಕಾಗೆ ಕೋಗಿಲೆಯೇ
ಬಣ್ಣದಾ ಕೆಂಬೂತ ಗಿರಿನವಿಲೇ
ಕಾಡಿನಾ ಮರವೆಲ್ಲಾs,
ಕಾಡಿನಾ ಮರವೆಲ್ಲಾ ಶ್ರೀಗಂಧವೇ
ನಾಡಿನ ಮಣ್ಣೆಲ್ಲ ಬಂಗಾರವೇ
ಬೆಟ್ಟದಾ ಕಾಡ್ಗಿಚ್ಚು ದೀಪವೇ
ಬಿರುಗಾಳೀ ಕೆಂಧೂಳಿ ಧೂಪವೇ
ಮೋಹದಾವೇದಾs
ಮೋಹದಾವೇದಾ ಭಕ್ತಿಯೇ
ಸವಿಯಾದುದೆಲ್ಲಾ ನೈವೇದ್ಯವೇ
ಚಿತ್ರ: ಶರಪಂಜರ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಸುಶೀಲ
ಕಾಮೆಂಟ್‌ಗಳು