ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲ
ಪಟ ಪಟ ಹಾರೋ ಗಾಳಿಪಟ
ಪಟ ಪಟ ಓಡೋ ಧೂಳಿ ಪಟ
ಮತ್ತೆ ಆಷಾಡ ಮೂಡುತಿದೆ ಗಾಳೀನು
ಬೀಸುತಿದೆ ಆಹಾ...
ಪಟ ಭೂಮಿನಾ ದಾಟುತಿದೆ ದಾರಾನು ದೀಲೈತೆ
ಆಹಾ...
ಮಂಜಾ ಹಾಕೋಣ ಬಾ ಮಜಾ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ
ಪಟ ಪ್ರಗತಿಯಾ ಸಂಕೇತವೂ
ಪಟ ಪಟ ಹಾರೋ ಗಾಳಿ
ಪಟಪಟ ಪಟ ಓಡೋ ಧೂಳಿ ಪಟ
ಪಟ ಮೇಲೇರಿ ಬೀಗುವುದು ಒಮ್ಮೊಮ್ಮೆ
ಬಾಗುವುದು ಕೇಳು
ಇದೇ ಆಗಾಗ ಏರುವುದು ಆಗಾಗ ಇಳಿಯವುದೇ
ಬಾಳು
ಎಷ್ಟೇ ಮೇಲ್ಹೋದರೂ ಚಿಕ್ಕೋನಾಗೇ ಇರು
ಅನ್ನೋ ನೀತಿ ಪಾಠಾನ ಪಟ ಹೇಳ್ತು ಗುರು
ಇದ ಮರೆತೋರು ಗೋತಾ ಆದ್ರು
ಚಿತ್ರ: ಆಪ್ತಮಿತ್ರ
ಸಾಹಿತ್ಯ: ವಿ.ನಾಗೇಂದ್ರಪ್ರಸಾದ್
ಸಂಗೀತ: ಗುರುಕಿರಣ್
ಗಾಯನ: ಉದಿತ್ ನಾರಾಯಣ್, ಚಿತ್ರಾ
Tag: Idu Hakki Alla
ಕಾಮೆಂಟ್‌ಗಳು