ನಗುನಗುತಾ ನಲೀ ನಲೀ
ನಗುನಗುತಾ ನಲೀ ನಲೀ
ಎಲ್ಲಾ ದೇವನಾ ಕಲೆಯೆಂದೇ ನೀ ತಿಳಿ
ಅದರಿಂದಾ ನೀ ಕಲೀ,
ನಗುನಗುತಾ ನಲೀ ನಲೀ,
ಏನೇ ಆಗಲಿ
ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ,
ಹೂಗಳು ಬಿರಿದಾಗ
ನಗುನಗುತಾ ನಲೀ ನಲೀ,
ಏನೇ ಆಗಲಿ
ತಾಯಿ ಒಡಲಿನ
ಕುಡಿಯಾಗಿ ಜೀವನ
ಮೂಡಿ ಬಂದು ಚೇತನ,
ತಾಳಲೆಂದು ಅನುದಿನ
ಅವಳೆದೆ ಅನುರಾಗ
ಕುಡಿಯುತ ಬೆಳೆದಾಗ
ನಗುನಗುತಾ ನಲೀ ನಲೀ,
ಏನೇ ಆಗಲಿ
ಗೆಳೆಯರ ಜತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮುಂದೆ ಯೌವನಾ,
ಮದುವೇ ಬಂಧನಾ
ಎಲ್ಲೆಲ್ಲೂ ಹೊಸ ಜೀವನ,
ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ,
ಮೈಮನ ಮರೆತಾಗ
ನಗುನಗುತಾ ನಲೀ ನಲೀ,
ಏನೇ ಆಗಲಿ
ಏರು ಪೇರಿನ
ಗತಿಯಲ್ಲಿ ಜೀವನ
ಸಾಗಿಮಾಗಿ ಹಿರಿತನ,
ತಂದಿತಯ್ಯ ಮುದಿತನ
ಅದರೊಳು ಹೊಸದಾದ
ರುಚಿ ಇದೆ ಸವಿ ನೋಡ
ನಗುನಗುತಾ ನಲೀ ನಲೀ,
ಏನೇ ಆಗಲಿ
ಚಿತ್ರ: ಬಂಗಾರದ ಮನುಷ್ಯ.
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ಪಿ.ಬಿ. ಶ್ರೀನಿವಾಸ್
Tag: Nagunagutaa nalee nalee
ಕಾಮೆಂಟ್‌ಗಳು