ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಾಥ ಮಕ್ಕಳಿಗೊಂದು ಕಾರ್ಯಕ್ರಮ


ಅನಾಥ ಮಕ್ಕಳಿಗಾಗಿ ‘ಅನಾವರಣ’

ದಿನಾಂಕ 30.08.2015ರಂದು ಬೆಂಗಳೂರಿನ ಹನುಮಂತನಗರದ ಕೆಂಗಲ್ ಹನುಮಂತಯ್ಯ ಸೌಧದಲ್ಲಿ ಸುರಭಿ ಪ್ರತಿಷ್ಠಾನದ ಅನಾಥ ಮಕ್ಕಳ ಸಲುವಾಗಿ 'ಅನಾವರಣ' ಎಂಬ ಸುಂದರ ಕಾರ್ಯಕ್ರಮ ಏರ್ಪಾಡಾಗಿತ್ತು.  ಯುವ ವಿದುಷಿ ಹಿರಣ್ಮಯಿ ಅವರ ಭಕ್ತಿಗೀತೆಗಳ ಸುಶ್ರಾವ್ಯ ಗಾಯನ,   ನೃತ್ಯ ಗುರು ಸೌಮ್ಯ ಸುಧೀಂದ್ರ ಮತ್ತು ತಂಡದಿಂದ ಕಣ್ಮನ, ಹೃದಯ ತಣಿಸುವ ಸುಂದರ ನೃತ್ಯ ಕಾರ್ಯಕ್ರಮ, ಮನೋಹರ ಪ್ರಸಾದರ ಉತ್ಕೃಷ್ಟ ಕನ್ನಡ ನಿರೂಪಣೆಶರ್ಮಿಳ ಮತ್ತವರ ಮಕ್ಕಳ ಸೇನೆಯ ಕುಶಲ ಕಾಯಕ, ಸುರಭಿ ಪ್ರತಿಷ್ಠಾನದ ಮಕ್ಕಳ ಹೃದಯ ಮುಟ್ಟುವ ಪ್ರಾರ್ಥನೆ, ಎಂ. ಎಸ್. ಪ್ರಸಾದ್ ಮತ್ತು ಗೆಳೆಯರ ಸಾಮಾಜಿಕ ಕಳಕಳಿಯ ಉತ್ಸಾಹ ಇವುಗಳೆಲ್ಲದರಿಂದ ಈ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದಾಗಿದೆ.

Tag: Anaavarana, Soumya Sudheendra, Sharmila, Surabhi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ