ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲ್ಯಾನ್ಸ್ ಡೇನ್



ಲ್ಯಾನ್ಸ್ ಡೇನ್

ಲ್ಯಾನ್ಸ್ ಡೇನ್ ಶ್ರೇಷ್ಠ ಛಾಯಾಗ್ರಾಹಕ, ಗ್ರಂಥ ರಚನಕಾರ, ವಿದ್ವಾಂಸ, ಅಪೂರ್ವ ಕಲಾತ್ಮಕ ವಸ್ತುಗಳ ಸಂಗ್ರಹಕಾರ ಮತ್ತು ಮಹತ್ವಪೂರ್ಣ ನಾಣ್ಯಸಂಗ್ರಹಕಾರರು. ಇವರು ಆಸ್ಟ್ರೇಲಿಯಾದ ಮೂಲ ನಿವಾಸಿಯಾದರೂ ಬಹುಕಾಲ ಭಾರತದಲ್ಲೇ ನೆಲೆ ನಿಂತರು. 

ಕೆಲವು ದಶಕಗಳಿಂದ ಮುಂಬೈನಲ್ಲಿ ನೆಲೆಸಿದ್ದ ಲ್ಯಾನ್ಸ್ ಡೇನ್ ಅವರು  ಮುಲ್ಕರಾಜ್  ಆನಂದ್ ಅವರ ಆಪ್ತ ಗೆಳೆಯರಾಗಿದ್ದರು. ಮುಲ್ಕರಾಜ್ ಆನಂದರ ಜೊತೆಗೆ 'ವಾತ್ಸಾಯನ ಕಾಮಸೂತ್ರ'ದ ಕುರಿತಾದ ಗ್ರಂಥ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.    ಇಷ್ಟೆಲ್ಲಾ ಅಪೂರ್ವತೆಯನ್ನು ಸಂಗ್ರಹಿಸಿದ ಈ ಭಾರತಪ್ರಿಯ ಲ್ಯಾನ್ಸ್ ಡೇನ್ ಮಹಾಶಯರು, ತಮ್ಮ 89ನೆಯ ವಯಸ್ಸಿನಲ್ಲಿ  ತಮ್ಮ ಶ್ರೀಮಂತ ಸಂಗ್ರಹಗಳನ್ನೊಳಗೊಂಡಂತೆ, ಸಮಸ್ತ ಶ್ರೀಮಂತಿಕೆಯನ್ನೂ ಈ ನೆಲದಲ್ಲೇ ಬಿಟ್ಟು  ಮೇ 16, 2012ರಂದು ಒಬ್ಬಂಟಿಯಾಗಿ ಈ ಲೋಕಬಿಟ್ಟು ಹೊರನಡೆದರು.   ಈ ಕಲಾ ಪ್ರಿಯ, ಭಾರತಪ್ರಿಯ  ಲ್ಯಾನ್ಸ್ ಡೇನ್ ಅವರಿಗೆ ನಮನ.

ಫೋಟೋ ಕೃಪೆ: ಎಸ್ ಸುಬ್ರಮಣ್ಯಂ. 'ದಿ ಹಿಂದೂ'

Lance Dane is a writer, photographer, renowned scholar, and the founder of the Sanskriti Museum of Every Day Art in Delhi.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ