ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಬ್ಬರು ವಿಶಿಷ್ಟ ಪದ್ಮಶ್ರೀ ಪುರಸ್ಕೃತರು



ಇಬ್ಬರು ವಿಶಿಷ್ಟ ಪದ್ಮಶ್ರೀ ಪುರಸ್ಕೃತರು


ಕರ್ನಾಟಕದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹಾಗೂ ಹರೇಳ ಹಾಜಬ್ಬ ಈ ವರ್ಷ ಪದ್ಮಶ್ರೀ ಪುರಸ್ಕೃತರಲ್ಲಿ ಎದ್ದು ಕಾಣುವವರು. ಅರಣ್ಯ ರಕ್ಷಣೆಗೆ ತುಳಸಿ ಗೌಡ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶಿಕ್ಷಣದ ಸಹಾಯವಿಲ್ಲದೇ ಅರಣ್ಯದಲ್ಲಿ ಲಭ್ಯವಾಗುವ ಅನೇಕ ವಿಧದ ಗಿಡ, ಗಿಡಮೂಲಿಕೆಗಳ ಕುರಿತು ಅಪಾರವಾದ ಅರಿವನ್ನು ಹೊಂದಿರುವುದು ತುಳಸಿ ಗೌಡ ಅವರ ಹೆಗ್ಗಳಿಕೆ.  

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡದ ಹರೇಳ ಹಾಜಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕಿತ್ತಳೆ ಹಣ್ಣು ಮಾರುತ್ತಲೇ ಮಂಗಳೂರಿನ ಕೊಣಜೆಯ ಬಳಿ ತನ್ನೂರು ಹರೇಕಳದಲ್ಲಿ   ಶಾಲೆ ನಿರ್ಮಿಸಿ ಒಮ್ಮೆ  ‘ಕನ್ನಡ ಪ್ರಭ ವರ್ಷದ ವ್ಯಕ್ತಿ’ಯಾಗಿದ್ದೇ ಅಲ್ಲದೆ CNN IBN Real Heroes Award ಕೂಡಾ ಪಡೆದ  ಹರೇಕಳ ಹಾಜಬ್ಬ ಮುಂದೆ ಸೊಂಟದ ನೋವಿನಿಂದ ಕಿತ್ತಳೆ ಹಣ್ಣು ಮಾರಾಟ ಮಾಡಲಾಗಲಿಲ್ಲ.  ಹಾಗಂತ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳಲೂ ಇಲ್ಲ.

ತಮಗೆ ಬಂದ ಹಣ ರೂ 5 ಲಕ್ಷವನ್ನೇ ಶಾಲಾ ಕಟ್ಟಡಕ್ಕಾಗಿ ವಿನಿಯೋಗಿಸಿದ್ದೂ ಅಲ್ಲದೆ, ಸರ್ಕಾರ, ದಾನಿಗಳ ನೆರವಿನಿಂದ ರೂ 40 ಲಕ್ಷ ವೆಚ್ಚದ ಕಟ್ಟಡ ಮೈದಳೆಯುವಂತೆ ಮಾಡಿದರು. ಹೀಗೆ  ಹಾಜಬ್ಬರ ಶಾಲೆ ಕಟ್ಟುವ ಕನಸು ಸಾಕಾರಗೊಂಡಿತು. ಶಾಲೆ ಕಲಿಯದಿದ್ದರೆ ಏನಂತೆ ಅವರು 'ಅಕ್ಷರ ಸಂತ' ಎನಿಸಿದರು. ಈಗ ಪದ್ಮಶ್ರೀ ಗರಿ ಅವರನ್ನು ಅರಸಿ ಬಂದಿದೆ.

Two notable Padmashree Awardees Tulasi Gowda and Haja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ