ಹೃದಯಸಂಪನ್ನರು
ಹೃದಯಸಂಪನ್ನರು
ಡಿವಿಜಿ ಅವರ ಈ ಪುಸ್ತಕ ಓದುವಾಗ ನಾನೂ ಆ ಕಾಲದಲ್ಲಿ ಹುಟ್ಟಿದ್ದಿದ್ರೆ ಚೆನ್ನಾಗಿತ್ತು ಅನ್ನಿಸ್ತು. ಎಷ್ಟೊಂದು ಹೃದಯ ಸಂಪನ್ನರಿದ್ರು ಆಗ. ಏನೋ ಈಗ ಅದು ಇಲ್ಲ ಅನ್ನೋ ಭಾವ. ಆಗ ನಾ ಹುಟ್ಟಿದ್ರೂ ಪೆದ್ಮುಂಡೇಗಂಡ ಆಗಿದ್ನೇನೋ. ದೊಡ್ಡವರು ಬದುಕಿದ್ದ ಕಾಲದಲ್ಲಿದ್ದವರೆಲ್ಲ ದೊಡ್ಡವರಾಗಿದ್ದಿರಲೇಬೇಕು ಅಂತ ಅಲ್ಲ. ಈಗಲೂ ಒಳ್ಳೆಯವರಿಲ್ಲ ಅಂತ ಹೇಳಲಾಗದು. ಹೃದಯ ಸಂಪನ್ನತೆ ಹೊರಗೆ ಬೀಸುವ ತಂಗಾಳಿಯಿಂದಲೇ ಆಗುಲ್ಲ. ಅದಕ್ಕೆ ಹಲವು ಜನ್ಮಗಳ ತಪಸ್ಸಿರಬೇಕು. ಜನ್ಮಗಳಿವೆಯೇ? ಇದ್ದರೆ ಇನ್ನೆಷ್ಟು ಜನ್ಮಬೇಕೋ ಹೇಳುವವರಾರು. 🤔 ಈ ಪುಸ್ತಕ ಓದಿದ ಪುಣ್ಯ ಆದ್ರೂ ಇದೆಯೆಲ್ಲ. ಓದಬೇಕು ಅನಿಸಿ ಓದಿದ್ದೂ ಸೌಭಾಗ್ಯವೆ
ಕಾಮೆಂಟ್‌ಗಳು