ಕೆ. ಎಸ್. ವಿಶ್ವಂಭರ
ಕೆ. ಎಸ್. ವಿಶ್ವಂಭರ
ಕೆ. ಎಸ್. ವಿಶ್ವಂಭರ ಚಿತ್ರಕಲೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿವಂತರು.
ವಿಶ್ವಂಭರ ಅವರು 1940ರ ಸೆಪ್ಟೆಂಬರ್ 25ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಕೆ.ಎಸ್. ಸೂರ್ಯನಾರಾಯಣರಾವ್ ಮತ್ತು ತಾಯಿ ಲಕ್ಷ್ಮೀದೇವಿ. ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಯಿತು.
ವಿಶ್ವಂಭರ ಅವರು ಕೋಲ್ಕತ್ತದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದರು. ಸಂಗೀತದಲ್ಲಿ ಡಿಪ್ಲೊಮೊ ಗಳಿಸಿದರು. ಗದಗಿನ ಸ್ನಾತಕೋತ್ತರ ಕಾಲೇಜು, ಪಣಜಿಯ ಕಾಲೇಜು, ಬೆಂಗಳೂರಿನ ಚಿತ್ರಕಲಾ ಪರಿಷತ್ ಮುಂತಾದೆಡೆ ಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ವಿಶ್ವಂಭರ ಅವರು ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ದೆಹಲಿ, ತಮಿಳುನಾಡಿನ ಕಲಾಸ್ಪರ್ದೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ರಾಜಾಸ್ಥಾನದ ಲಲಿತಕಲಾ ಅಕಾಡೆಮಿ ಮುಂತಾದೆಡೆ ನಡೆದ ಕಲಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ದೆಹಲಿಯ ರಾಷ್ಟ್ರೀಯ ಕಲಾಭವನ, ಮುಂಬಯಿ, ಚಂಡಿಗರ್, ಲಕ್ನೋ, ಗೋವಾ, ಜಯಪುರ, ಬೆಂಗಳೂರು, ಭೂಪಾಲ್, ಕೊಚಿನ್, ಬರೋಡ, ಚೆನ್ನೈ ಮುಂತಾದೆಡೆ ಅವರ ಸಾಂಘಿಕ ಪ್ರದರ್ಶನಗಳು ನಡೆದವು. ಹೊರದೇಶಗಳಾದ ತೈವಾನ್, ಜಪಾನ್, ಅಮೆರಿಕಾ, ನ್ಯೂಯಾರ್ಕ್, ಕಾನ್ಸಾಸ್‌ಸ್ಟೇಟ್ ಯೂನಿರ್ವಸಿಟಿ ಮುಂತಾದೆಡೆಯಲ್ಲಿ ಅವರ ಏಕವ್ಯಕ್ತಿ ಪ್ರದರ್ಶನಗಳು ನಡೆದವು. ದೆಹಲಿಯ ಲಲಿತಕಲಾ ಅಕಾಡೆಮಿ, ಭೂಪಾಲ್, ಉದಯಪುರ, ರಾಜಾಸ್ಥಾನ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಗೋವಾ, ಅಮೆರಿಕಾ, ಪೋಲೆಂಡ್, ಜಪಾನ್, ಈಜಿಪ್ಟ್ ಮುಂತಾದ ಕಲಾಸಂಗ್ರಹಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹಿತಗೊಂಡಿವೆ.
ವಿಶ್ವಂಭರ ಅವರಿಗೆ ಜಪಾನ್ ಪ್ರತಿಭಾ ಪುರಸ್ಕಾರ, ರಾಜಾಸ್ಥಾನದ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ದೆಹಲಿಯ ಮಾನವ ಸಂಪನ್ಮೂಲ ಇಲಾಖೆ, ಬೆಂಗಳೂರಿನ ಚಿತ್ರಕಲಾ ಪರಿಷತ್, ದೆಹಲಿಯ ಗಾರ್ಕಿ ಲಲಿತಕಲಾ ಅಕಾಡೆಮಿ, ಗೋವಾ ಕಲಾ ಅಕಾಡೆಮಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
On the birthday of artiste K. S. Vishvambara
ಕಾಮೆಂಟ್‌ಗಳು