ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿಷನ್ ಸಿಂಗ್ ಬೇಡಿ


ಬಿಷನ್ ಸಿಂಗ್ ಬೇಡಿ 


ಬಿಷನ್ ಸಿಂಗ್ ಬೇಡಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಎಡಗೈ ಸ್ಪಿನ್ ಬೌಲರ್ ಆಗಿ ಖ್ಯಾತರಾದವರು.  ಚಂದ್ರು-ಪ್ರಸನ್ನ-ಬೇಡಿ-ವೆಂಕಟ್ ಭಾರತದ ಸ್ಪಿನ್ ಚತುಷ್ಟಯರೆಂದೇ ಖ್ಯಾತರು.


ಬಿಷನ್ ಸಿಂಗ್ ಬೇಡಿ ಅವರು 1946ರ ಸೆಪ್ಟೆಂಬರ್ 25 ರಂದು ಅಮೃತಸರದಲ್ಲಿ ಜನಿಸಿದರು. ಶಾಲೆಯಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಇವರ ವಯಸ್ಸು ಕೇವಲ ಹದಿಮೂರು ವರ್ಷ. ಸುಭಾಷ್‍ ಗುಪ್ತೆ, ವಿನೂ ಮಂಕಡ್ ಇವರನ್ನು ಆದರ್ಶವಾಗಿರಿಸಿಕೊಂಡು ಸ್ಪಿನ್ ಬೌಲಿಂಗ್ ಅಭ್ಯಸಿಸತೊಡಗಿದರು. ಯಾರ ಬಳಿಯೂ ತರಬೇತಿ ಪಡೆಯದ ಇವರಿಗೆ ಬೌಲಿಂಗ್ ಕೌಶಲ ಸಹಜವಾಗಿ ಕರಗತವಾಯಿತು.


ಹದಿನೈದು ವರ್ಷಕ್ಕೆ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಭಾಗ್ಯ ಬಿಷನ್ ಸಿಂಗ್ ಬೇಡಿ ಅವರದಾಯಿತು. ಬೇಡಿ ಅವರು 1966-67ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ಏಕಪ್ರಕಾರವಾಗಿ, ಒಂದೇ ಮಟ್ಟದಲ್ಲಿ ಲೀಲಾಜಾಲವಾಗಿ ಬೌಲ್ ಮಾಡುವುದನ್ನು ಸಾಧಿಸಿದ ಬೇಡಿ,  ಬ್ಯಾಟ್ ಮಾಡುತ್ತಿದ್ದವರನ್ನು ತಲ್ಲಣಗೊಳಿಸುತ್ತಿದ್ದರು. ಚಂಡು ಯಾವ ರೀತಿ ಬರುವುದೆಂಬುದನ್ನು ಊಹಿಸಲಾಗದೆ ತಬ್ಬಿಬ್ಬಾಗುವುದು, ಔಟಾಗುವುದು ಬ್ಯಾಟ್ ಹಿಡಿದವರ ಪಾಲಿಗೆ ಬರುತ್ತಿತ್ತು. ಈ ರೀತಿಯ ಬೌಲಿಂಗ್ ಜಾಣ್ಮೆಯ ಫಲವಾಗಿ ವರ್ಲ್ಡ್ ಇಲವೆನ್‍ಗೆ ಆಯ್ಕೆಯಾದರು. 


ಬೇಡಿ ಅವರು 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್ ಗಳಿಸಿದರು.  22 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದರು. 


ಅನ್ಯಾಯ ಕಂಡಾಗ ಪ್ರತಿಭಟನೆ ವ್ಯಕ್ತಿ ಪಡಿಸುವುದು ಬೇಡಿಯವರ ರೀತಿ. ಬೇಡಿಯವರ ಕ್ರೀಡಾ ಪ್ರತಿಭೆ ಗುರುತಿಸಿ ಸರ್ಕಾರ ಇವರಿಗೆ 1969ರಲ್ಲಿ ಅರ್ಜುನ ಪ್ರಶಸ್ತಿಯನ್ನೂ 1970ರಲ್ಲಿ ಪದ್ಮಶ್ರೀ ಬಿರುದನ್ನೂ ನೀಡಿ ಗೌರವಿಸಿತು. 2004ರಲ್ಲಿ ಜೀವಮಾನ ಸಾಧನೆಗಾಗಿ  ಸಿ. ಕೆ. ನಾಯ್ಡು ಪ್ರಶಸ್ತಿ ಸಂದಿತು. 


ಬೇಡಿ ಅವರು 2023ರ ಅಕ್ಟೋಬರ್ 23ರಂದು ನಿಧನರಾಗಿದರು.


Bishan Singh Bedi


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ