ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಲೂರು ಕೃಷ್ಣಮೂರ್ತಿ


 ಬೇಲೂರು ಕೃಷ್ಣಮೂರ್ತಿ 


ಬೇಲೂರು ಕೃಷ್ಣಮೂರ್ತಿ ನಾಟಕ ರಚನಕಾರರಾಗಿ ಮತ್ತು ಕಥೆಗಾರರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ.

ಕೃಷ್ಣಮೂರ್ತಿಗಳು ಬೇಲೂರಿನಲ್ಲಿ ವೈಕುಂಠ ದಾಸರು ಇದ್ದ ಬೀದಿಯಲ್ಲಿ ವಾಸವಾಗಿದ್ದು ತಮ್ಮ ಅಭಿಮಾನಿಗಳ ಲೋಕದಲ್ಲಿ ಶತನಾಟಕ ಸಾರ್ವಭೌಮ ಎನಿಸಿಕೊಂಡವರು
      
ಬೇಲೂರು ಕೃಷ್ಣಮೂರ್ತಿ ಅವರು 
1931ರ ಆಗಸ್ಟ್ 8ರಂದು ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ದಂಪತಿಗಳ ಮಗನಾಗಿ ಜನಿಸಿದರು.  ಗಂಡಸಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹಾಸನದ ಉತ್ತರ ಬಡಾವಣೆ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. 

ಮಂದೆ ಕೃಷ್ಣಮೂರ್ತಿ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಬೇಲೂರು ಕೃಷ್ಣಮೂರ್ತಿಗಳು ಯಕ್ಷಿಣಿ ವಿದ್ಯೆಯಲ್ಲಿಯೂ ಪರಿಣತರಾಗಿದ್ದರು.  ಛಾಯಾಗ್ರಹಣ  ಇವರ ಮತ್ತೊಂದು ಹವ್ಯಾಸವಾಗಿತ್ತು. ಅವರು ಭಾರತ ಸೇವಾದಳದ ಚಟುವಟಿಕೆಗಳು   ಹಾಸನದಲ್ಲಿ ನಿರಂತರ ನಡೆಯುವಂತೆ ಆಸ್ಥೆ ವಹಿಸಿದ್ದರು.
       
ಬೇಲೂರು ಕೃಷ್ಣಮೂರ್ತಿ ನಾಟಕಕಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿಯೂ ಹೆಸರು ಮಾಡಿದ್ದರು.  ಅವರು ಬಲಿದಾನ, ಭಂಡಬಾಳು, ಅಸಲಿ-ನಕಲಿ, ಆಹುತಿ, ಸೇವೆ, ಬಲಿ, ಜ್ವಾಲೆ, ವಿಷ್ಣುವರ್ಧನ ಹೀಗೆ ನೂರಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದರು. ಇವರ ತ್ಯಾಗಿ ನಾಟಕ ಅನೇಕ ಮರು ಮುದ್ರಣಗಳನ್ನು ಕಂಡು ನಾಟಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿತ್ತು.  ದಾಹ, ಪುತ್ರವಾತ್ಸಲ್ಯ, ಬೆಟ್ಟದ ಬೈರಾಗಿ ಹೀಗೆ ಹತ್ತಾರು ಕಾದಂಬರಿಗಳನ್ನೂ ರಚಿಸಿದ್ದರು.
    
ಬೇಲೂರು ಕೃಷ್ಣಮೂರ್ತಿಗಳು ತೀರದ ಬಯಕೆ ಎಂಬ ಚಲನಚಿತ್ರವನ್ನು  ನಿರ್ಮಿಸಿ ನಿರ್ದೇಶಿಸಿದ್ದರು.

ವೈಕುಂಠ ಬೀದಿ ಎಂಬುದು ಬೇಲೂರು ಕೃಷ್ಣಮೂರ್ತಿಗಳ ಆತ್ಮಕಥೆ.
     
ಬೇಲೂರು ಕೃಷ್ಣಮೂರ್ತಿಗಳಿಗೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ಬೇಲೂರು ಕೃಷ್ಣಮೂರ್ತಿ ಅವರು 2020ರ ಸೆಪ್ಟೆಂಬರ್ 8ರಂದು ನಿಧನರಾದರು.

On remembrance day of Belur Krishnamurthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ