ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾರಾಣಿ ಎಲಿಜಬೆತ್


 

ಮಹಾರಾಣಿ ಎಲಿಜಬೆತ್
 Queen Elizabeth 

ಬ್ರಿಟಿಷ್ ಸಾಮ್ರಾಜ್ಯವೆಂದರೆ ಮಹಾರಾಣಿಯದೇ ಆಡಳಿತ. ವಿಶ್ವದೆಲ್ಲೆಡೆ ಅದಕ್ಕೊಂದು ಗೌರವಯುತ ಸ್ಥಾನ.  ಪ್ರಧಾನಿ, ಬಗೆ ಬಗೆಯ ಆಡಳಿತಾಧಿಕಾರಿಗಳು, ಹಲವು ಮಂತ್ರಿಗಳ, ರಾಜಕೀಯ ಪಕ್ಷಗಳ ರಾಜಕಾರಣ ಇವೆಲ್ಲದರ ನಡುವೆಯೂ ಎಲಿಜಬೆತ್ ರಾಣಿ ಅಂದರೆ ಎದ್ದು ಕಾಣುವ ವರ್ಚಸ್ಸು ಗೋಚರಿಸುತ್ತಿತ್ತು.

1952ರ  ವರ್ಷದಿಂದ ಮೊದಲುಗೊಂಡು ಅವರು ನಿಧನರಾದ 2022ರ ಸೆಪ್ಟೆಂಬರ್ 8 ರವರೆಗೆ  ಗ್ರೇಟ್ ಬ್ರಿಟನ್ ಅಂದರೆ ನಮಗೆ ಮೊದಲು ಕಣ್ಮುಂದೆ ಬರುತ್ತಿದ್ದವರು ಎರಡನೇ ಕ್ವೀನ್ ಎಲಿಜಬೆತ್‍. ಅವರ ಅಧಿಕಾರಾವಧಿ 70  ವರ್ಷ 214 ದಿನಗಳಷ್ಟು ಸುದೀರ್ಘ ವ್ಯಾಪ್ತಿಯದ್ದು. 

ಎಲೆಜಬೆತ್ ಅಲೆಕ್ಸಾಂಡರಾ ಮೇರಿ ಹುಟ್ಟಿದ್ದು 1926 ಏಪ್ರಿಲ್ 21ರಂದು. ಲಂಡನ್‌ನ ಮೇಫೇರ್‌ನಲ್ಲಿ.  ಈಕೆ ಯಾರ್ಕ್‌ನ ಡ್ಯೂಕ್ ಮತ್ತು ಡಚೆಸ್ ಆಗಿದ್ದ 6ನೇ ಜಾರ್ಜ್ ಮತ್ತು ಒಂದನೇ ಎಲಿಜಬೆತ್ ದಂಪತಿಗಳಿಗೆ ಜನಿಸಿದರು.

1936ರಲ್ಲಿ ತಂದೆ 4ನೇ ಜಾರ್ಜ್ ಬ್ರಿಟನ್ ಅರಸರಾದಾಗ ಎಲಿಜಬೆತ್ ಅಲೆಕ್ಸಾಂಡರಾ ಮೇರಿ ಅವರ ವಾರಸುದಾರರಾಗಿ ಎಲ್ಲರ ಗಮನ ಸೆಳೆದರು. 1947ರಲ್ಲಿ 22ನೇ ವಯಸ್ಸಿನಲ್ಲಿ ಅವರು ಗ್ರೀಸ್ ಮತ್ತು ಡೆನ್ಮಾರ್ಕ್‌ನ ರಾಜಕುಮಾರರಾಗಿದ್ದ ಪ್ರಿನ್ಸ್ ಫಿಲಿಪ್‌ರನ್ನು ವಿವಾಹವಾದರು. 1952ರಲ್ಲಿ ಕಿಂಗ್ ಜಾರ್ಜ್ ಮೃತಪಟ್ಟ ಬಳಿಕ ಎಲಿಜಬೆತ್ ಕ್ವೀನ್ ಪಟ್ಟಕ್ಕೆ ಏರಿದರು.  ಎಲಿಜಬೆತ್ ರಾಣಿಯಾಗಿದ್ದಾಗ ಬ್ರಿಟನ್ ವಶದಲ್ಲಿದ್ದ ಅನೇಕ ಪ್ರದೇಶಗಳಿಗೆ ಬೇಗ ಸ್ವಾತಂತ್ರ್ಯ ಸಿಕ್ಕಿದ್ದವು. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಆಫ್ರಿಕಾ ಮತ್ತು ಕೆರಿಬಿಯನ್ ಪ್ರದೇಶಗಳ 20ಕ್ಕೂ ಹೆಚ್ಚು ದೇಶಗಳು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದವು.

ಎಲಿಜಬೆತ್ ಅಂದರೆ ಮೊದಲು ಗಮನ ಸೆಳೆಯುತ್ತಿದ್ದುದು ಆಕೆಯ ರಾಣಿ ಗಾಭೀರ್ಯದ ನಗೆ.  ಅಲ್ಲೊಂದು ಬೆಳಕಿನ ತೇಜಸ್ಸಿತ್ತು.  ಆ ತೇಜಸ್ಸು 2022ರ ಸೆಪ್ಟೆಂಬರ್ 8ರಂದು ಪ್ರಕೃತಿ ತೇಜಸ್ಸಿನಲ್ಲಿ ಲೀನವಾಯಿತು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ