ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೀರಾ ನಾಯರ್


 ಮೀರಾ ನಾಯರ್


ಮೀರಾ ನಾಯರ್ ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ.  ಇವರು ಅಮೆರಿಕದಲ್ಲಿ ನೆಲೆಸಿದ್ದು ಭಾರತೀಯ ಕಥಾ ಹಂದರಗಳನ್ನು ಇಂಗಿಷಿನಲ್ಲಿ ಮೂಡಿಸಿ ಹೆಸರಾದವರು.

ಮೀರಾ ನಾಯರ್ 1957ರ ಅಕ್ಡೋಬರ್ 17ರಂದು ಒರಿಸ್ಸಾದ ರೂರ್ಕೆಲದಲ್ಲಿ ಜನಿಸಿದರು. ತಂದೆ ಸರ್ಕಾರಿ ಉದ್ಯೋಗಿ. ಈಕೆಯ ತಾಯಿ ಸಮಾಜ ಸೇವಕರು. ಪಂಜಾಬ್ ಮೂಲದ ಈ ಕುಟುಂಬ ಅಮೃತಸರದಿಂದ ಬಿಹಾರಕ್ಕೆ ವಲಸೆಬಂತು. ಸಿಮ್ಲಾದ ವಸತಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಮೀರಾ ನಾಯರ್ ದೆಹಲಿ ಮಿರಾಂದಾ ಹೌಸ್‌ನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು.

ಮೀರಾ ನಾಯರ್ ಕೆಲವೊಂದು ಬೀದಿ ನಾಟಕಗಳ ತಂಡದಲ್ಲಿ 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮುಂದೆ ತಮ್ಮ 19ನೇ ವಯಸ್ಸಿನಲ್ಲಿ ಸ್ಕಾಲರ್ಶಿಪ್ ಪಡೆದು ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಛಾಯಾಗ್ರಾಹಕ ಮಿಚ್‌ಎಪ್‌ಸ್ಟೇನ್‌ ಪರಿಚಯವಾಯಿತು.  ನಿರ್ದೇಶನದಲ್ಲಿ ಸಾಧನೆ ಮಾಡಿದ್ದ ಸೂನಿ ತರಪೋರೆವಾಲಾ ಪರಿಚಯ ಕೂಡ ಆಯ್ತು. ಈ ನಂಟು ಅವರನ್ನು ಡಾಕ್ಯುಮೆಮಟರಿಗಳ ನಿರ್ಮಾಣದತ್ತ  ಪ್ರೇರಿಸಿದವು. ನಾಲ್ಕು ಟೆಲಿವಿಷನ್ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.ಇದೇ ಸಂದರ್ಭದಲ್ಲಿ ಅವರು ನಿರ್ಮಿಸಿದ ಚಿತ್ರ 'ಇಂಡಿಯಾ ಕ್ಯಾಬರೇಟ್'.   ಇದು ರಾತ್ರಿ ಕ್ಲಬ್‌ಗಳಲ್ಲಿ ಹೊಟ್ಟೆ ಪಾಡಿಗಾಗಿ ಕುಣಿಯುವ ನರ್ತಕಿಯರ ಜೀವನವನ್ನು ಆಧರಿಸಿದ್ದು.‍ ಈ ಚಿತ್ರ 1986ರ ಅಮೇರಿಕನ್ ಚಲನಚಿತ್ರೋತ್ಸವದಲ್ಲಿ ಬ್ಲೂ ರಿಬ್ಬನ್ ಪ್ರಶಸ್ತಿ ಗಳಿಸಿತು.   ಇವರು ಸೂನಿ ತಾರಾಪೊರೆವಾಲಾ ಜೊತೆಗೆ ಚಿತ್ರಿಸಿದ 1988ರ ಚಿತ್ರ 'ಸಲಾಂ ಬಾಂಬೆ' ಕೇನ್ಸ್  ಚಲನಚಿತ್ರೋತ್ಸವದಲ್ಲಿ  ಗೋಲ್ಡನ್ ಕ್ಯಾಮೆರಾ ಪ್ರಶಸ್ತಿಯನ್ನು ಗಳಿಸಿತಲ್ಲದೆ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಲಾಂಗ್ವೇಜ್ ಫಿಲಂಗೆ ಸ್ಪರ್ಧಿಸುವ ಅವಕಾಶ ಗಳಿಸಿತು. 

1981ರಲ್ಲಿ ಮೀರಾ ಅವರ ಡೆಂಜೆಲ್ ವಾಶಿಂಗ್ಟನ್ ಮತ್ತು ಸರಿತಾ ಚೌಧರಿ ನಟಿಸಿದ 'ಮಿಸ್ಸಿಸ್ಸಿಪಿ ಮಸಾಲಾ' ಚಿತ್ರಗಳು ಬಿಡುಗಡೆಯಾದವು. ಉದ್ಯೋಗಕ್ಕಾಗಿ ಸ್ಥಳಾಂತರಗೊಂಡ ಉಗಾಂಡಾ-ಭಾರತೀಯ ಕುಟುಂಬ,  ಮಿಸ್ಸಿಸ್ಸಿಪ್ಪಿಯಲ್ಲಿ ಹೇಗೆ ಬದುಕುತ್ತಿದ್ದಾರೆ ಮತ್ತು ಅವರ ಜೀವನ ರೀತಿಗಳ ಕುರಿತು ಈ ಚಿತ್ರ ಮೂಡಿತು. ಇದು ಮತ್ತೊಮ್ಮೆ ಸೂನಿ ತಾರಾಪೊರೆವಾಲಾರವರ ಚಿತ್ರಕಥೆ ಹಾಗೂ ಸಂಬಾಷಣೆಯನ್ನೊಳಗೊಂಡ ಚಿತ್ರವಾಗಿತ್ತು.   

ಮುಂದೆ ಮೀರಾ ನಾಯರ್ 'ಕಾಮಸೂತ್ರ: ಎ ಟೇಲ್ ಆಫ್ ಲವ್'ಎಂಬ ಸಿನಿಮಾ ನಿರ್ದೇಶಿಸಿದರು. ಇದು 16ನೇ ಶತಮಾನದ ಭಾರತದ ಕಥಾನಕದ ಚಿತ್ರಣ. ಮುಂದೆ 1998ರಲ್ಲಿ ಅವರು ನವೀನ್ ಆಂಡ್ರ್ಯೂಸ್ ಅಭಿನಯದ ‘ಮೈ ಓನ್ ಕಂಟ್ರಿ’ ಚಿತ್ರ ನಿರ್ದೇಶಿಸಿದರು. ಇದರಲ್ಲಿ ಸ್ನೇಹಿತೆ ಸೂನಿ ತಾರಾಪೊರೆವಾಲಾ ಹಾಗೂ ಅಬ್ರಹಾಂ ವರ್ಗೀಸ್ ಅವರ ನೆನಪುಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಹೆಚ್‌ಬಿಒ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. 2001ರಲ್ಲಿ ಅವರು ಸಬ್ರಿನಾ ಧವನ್‍ರ ಚಿತ್ರಕಥೆ ಹೊಂದಿರುವ 'ಮಾನ್ಸೂನ್ ವೆಡ್ಡಿಂಗ್'  ನಿರ್ದೇಶಿಸಿದರು. ಇದೊಂದು ಅಸ್ತವ್ಯಸ್ತವಾಗಿರುವ ಪಂಜಾಬಿ ಭಾರತೀಯ ಮದುವೆಯ ಬಗೆಗಿನ ಚಿತ್ರ, ಇದು ನಾಯರ್‌ ಅವರಿಗೆ ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಮಾನ್ಸೂನ್ ವೆಡ್ಡಿಂಗ್ ಯಶಸ್ಸಿನ ನಂತರ, ನಾಯರ್ ರೀಸ್ ಅಭಿನಯದ ಠಾಕ್ರೆಯವರ ವ್ಯಾನಿಟಿ ಫೇರ್ ಕಾದಂಬರಿಯನ್ನು ಜೂಲಿಯಾನ್ ಫೆಲೋವೆಸ್ ಸಹಯೋಗದೊಂದಿಗೆ ನಿರ್ದೇಶಿಸಿದರು. 

2007ರಲ್ಲಿ ಮೀರಾ ಅವರಿಗೆ ಹ್ಯಾರಿಪಾಟರ್ ಸರಣಿಯ ಚಿತ್ರ ನಿರ್ದೇಶಿಸಲು ಆಹ್ವಾನವಿತ್ತು.  ಅದನ್ನು ಸ್ವೀಕರಿಸದೆ 'ದ ನೇಮ್‍ಸೇಕ್' ಚಿತ್ರ ನಿರ್ದೇಶಿಸಿದರು. ಇದು ಪುಲಿಟ್ಜರ್ ಪ್ರಶಸ್ತಿ ವಿಜೇತ ಜುಂಪಾ ಲಹಿರಿ ಅವರ ಕೃತಿ ಆಧಾರಿತ.

ಮುಂದೆ ಅಮೆಲಿಯಾ, ದ ರೆಲಕ್ಟಂಟ್ ಫಂಡಮೆಂಟಲಿಸ್ಟ್, ವರ್ಡ್ಸ್ ವಿಥ್ ಗಾಡ್ಸ್, ಕ್ವೀನ್ ಆಫ್ ಕಟ್ವೆ,  ಎ ಸ್ಯೂಟಬಲ್ ಬಾಯ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲದೆ ಮೀರಾ ನಾಯರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿದೆ.

On the birth day of film director and producer Mira Nair

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ