ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ನೇಹಾ



ಸ್ನೇಹಾ


ಸ್ನೇಹಾ ಅವರು ಸುಂದರ ಮೊಗದ, ಸಹಜ ನಗೆಯ, ಆಕರ್ಷಕ ನಟಿ.  ಮೂಲತಃ ತೆಲುಗಿನವರಾದ ಸ್ನೇಹಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ನೇಹಾ ಅವರ ಮೂಲ ಹೆಸರು ಸುಹಾಸಿನಿ ರಾಜಾರಾಮ್ ನಾಯ್ಡು. ಅವರು 1982ರ ಅಕ್ಟೋಬರ್ 12ರಂದು ಮುಂಬೈನಲ್ಲಿ ಜನಿಸಿದರು. ತಂದೆ ರಾಜಾರಾಮ್.  ತಾಯಿ ಪದ್ಮಾವತಿ. ಅಕೆ ಜನಿಸಿದ ನಂತರದಲ್ಲಿ ಅವರ ಕುಟುಂಬದವರು ಹಲವು ವರ್ಷ ಯುಎಇ ದೇಶದ ಶಾರ್ಜಾದಲ್ಲಿ ನೆಲೆಸಿ,  ಮುಂದೆ ತಮಿಳುನಾಡಿನ ಪನ್ರುತಿ ಎಂಬಲ್ಲಿ ನೆಲೆಸಿದ್ದಾರೆ.  ಚೆನ್ನೈನಿಂದ ತಂಜಾವೂರು ಹೆದ್ದಾರಿಯಲ್ಲಿ ಈ ಕುಟುಂಬಕ್ಕೆ ಸೇರಿದ 'ಸ್ನೇಹಾ ಮಹಲ್' ಎಂಬ ಭವ್ಯ ಕಲ್ಯಾಣ ಮಂಟಪವಿದೆ.

2000ದ ವರ್ಷದಲ್ಲಿ ಸ್ನೇಹಾ ಅವರು 'ಇಂಗನೆ ಒರು ನೀಲಪಕ್ಷಿ' ಎಂಬ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಮುಂದೆ ಅವರು ಹೆಚ್ಚು ಖ್ಯಾತರಾದದ್ದು ತಮಿಳು ಚಿತ್ರರಂಗದಲ್ಲಿ.  ವಿರಂಬುಗಿರೇನ್, ಎನ್ನವಳೇ, ಆನಂದಮ್, ಕೆ. ಬಾಲಚಂದರ್ ಅವರ ಪಾರ್ತಾಳೆ ಪರವಶಂ ಮುಂತಾದ ಚಿತ್ರಗಳ ಯಶಸ್ಸಿನ ಜೊತೆಗೆ ಪ್ರತಿಭೆ ಮತ್ತು ಸೌಂದರ್ಯಗಳ ಸಂಗಮದಿಂದ 2001ರ ವೇಳೆಗೆ ಅವರು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದರು.  ಏಯ್ ನೀ ರೊಂಬಾ ಅಳಗಾ ಇರುಕ್ಕೆ, ಉನ್ನೈ ನಿನೈತ್ತು, ಏಪ್ರಿಲ್ ಮಾಸತ್ತಿಲ್, ಪಮ್ಮಲ್ ಕೆ ಸಂಬಂಧಂ, ವಸೀಗರ, ಪ್ರತಿಬನ್ ಕನವು, ಜಾನಾ, ಬೋಸ್, ಅದು, ವಸೂಲ್ ರಾಜಾ ಎಂಬಿಬಿಎಸ್, ಆಟೋಗ್ರಾಫ್ ಮುಂತಾದವು ಅವರಿಗೆ  ಪ್ರಸಿದ್ಧಿ ತಂದವು.

ತೆಲುಗಿನಲ್ಲೂ ಪ್ರಿಯಮೈನಾ ನೀಕು, ವೆಂಕಿ, ರಾಧಾ ಗೋಪಾಲಮ್, ಶ್ರೀ ರಾಮದಾಸು ಮುಂತಾದವು ಅವರ ಯಶಸ್ವೀ ಚಿತ್ರಗಳು. ಮಲಯಾಳದಲ್ಲಿ ತುರುಪ್ಪು ಗುಲನ್, ಶಿಕ್ಕರ್, ದ ಹಂಟ್, ಪ್ರಮಾಣಿ, ದ ಗ್ರೇಟ್ ಫಾದರ್ ಅವರ ಕೆಲವು ಯಶಸ್ವೀ ಚಿತ್ರಗಳು.

ಉನ್ನೈ ನೆನೈತ್ತು ಚಿತ್ರದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ, ತಮಿಳು ನಾಡು ರಾಜ್ಯದಿಂದ ಎರಡು ಬಾರಿ ಶ್ರೇಷ್ಟ ನಟಿ ಪ್ರಶಸ್ತಿ, ಆಂಧ್ರಪ್ರದೇಶದ ನಂದಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸ್ನೇಹಾ ಅವರಿಗೆ ಬಂದಿವೆ.

ಸ್ನೇಹಾ ಕನ್ನಡದಲ್ಲಿಯೂ ರವಿಶಾಸ್ತ್ರಿ, ಒಗ್ಗರಣೆ ಮತ್ತು ಕುರುಕ್ಷೇತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರ ಕಲಾವಿದ ಪ್ರಸನ್ನ ಅವರನ್ನು 2012ರಲ್ಲಿ ವರಿಸಿರುವ ಸ್ನೇಹಾ ಎರಡು ಮಕ್ಕಳ ತಾಯಿಯಾಗಿದ್ದಾರೆ.

ಸಿನಿಮಾ ಲೋಕದಲ್ಲಷ್ಟೇ  ಅಲ್ಲದೆ ಜಾಹೀರಾತು ಲೋಕದಲ್ಲೂ ಸ್ನೇಹಾ ಅವರ ನಗೆಮೊಗ ಜನಪ್ರಿಯವಾಗಿವೆ.


On the birth day of actress Sneha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ