ಜೆ. ಎಚ್. ಪಟೇಲ್
ಜೆ. ಎಚ್. ಪಟೇಲ್
ಹೆಸರಾಂತ ಸಮಾಜವಾದಿಗಳಾಗಿದ್ದ ಜೆ. ಎಚ್. ಪಟೇಲ್ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರು.
ಜಯದೇವಪ್ಪ ಹಾಲಪ್ಪ ಪಟೇಲ್ ಅವರು 1930ರ ಅಕ್ಟೋಬರ್ 1ರಂದು ದಾವಣಗೆರೆ ಜಿಲ್ಲೆಯ ಕಾರಿಗನೂರಿನಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಇಂಟರ್ ಮೀಡಿಯೆಟ್‌ವರೆಗೆ ದಾವಣಗೆರೆಯಲ್ಲಿ ನಡೆಯಿತು. ಇಂಟರ್‌ಮೀಡಿಯೆಟ್‌ನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಅವರು, ರಾಜಕೀಯ ಜೀವನ ಆಯ್ಕೆ ಮಾಡಿದ್ದರಿಂದ ಬಿಎ ತರಗತಿ ಓದುವುದು ಹೆಚ್ಚು ಸೂಕ್ತವೆಂದು ಭಾವಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅವರ ಮಹಾರಾಜ ಕಾಲೇಜಿನ ವ್ಯಾಸಂಗ ಬಹುಮಟ್ಟಿಗೆ ಅವರ ವ್ಯಕ್ತಿತ್ವವನ್ನು ರೂಪಿಸಿತು.
ಜೆ.ಎಚ್. ಪಟೇಲರು 1947ರ ಸೆಪ್ಟೆಂಬರ್ 1ರಂದು ಮೈಸೂರು ಮಹಾರಾಜರ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕರೆ ಕೊಟ್ಟಿದ್ದ 'ಮೈಸೂರು ಚಲೋ' ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರ ಊರಾದ ಕಾರಿಗನೂರು ಅಂದಿನ ಚಳವಳಿಗೆ ಒಂದು ಕೇಂದ್ರವಾಗಿತ್ತು. ಆ ಊರಿದ್ದ ಚನ್ನಗಿರಿ ತಾಲೂಕು ಆ ಚಳವಳಿಯಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಂಡಿತ್ತು. ಸೆಪ್ಟೆಂಬರ್ 3ರಂದು ಚನ್ನಗಿರಿಯಲ್ಲಿ ಸತ್ಯಾಗ್ರಹದ ನಾಯಕತ್ವ ವಹಿಸಿದ್ದ ಜೆ.ಎಚ್. ಪಟೇಲ್ ತಾಲೂಕು ಕಚೇರಿ ಮೇಲೆ ಬಾವುಟ ಹಾರಿಸಲು ಪ್ರಯತ್ನ ಮಾಡಿದರು. ಆಗ ಅವರನ್ನು ಸೆರೆ ಹಿಡಿದು ಕೈಗೆ ಕೋಳ ತೊಡಿಸಿ, ಇನ್ನೂ ಹಲವರನ್ನು ಕೂಡಿಸಿಕೊಂಡು ಶಿವಮೊಗ್ಗದ ಕಡೆಗೆ ಹೋದರು. ಶಿವಮೊಗ್ಗದಲ್ಲಿ ಅವರನ್ನು ಎರಡು ದಿನ ಜಿಲ್ಲಾ ಕಾರಾಗೃಹದಲ್ಲಿ ಇಟ್ಟು, ಮುಂದೆ ಮಂಡಗದ್ದೆ ಕಾರಾಗೃಹಕ್ಕೆ ರವಾನಿಸಿದರು. ಅವರಿಗೆ ಮೂರು ತಿಂಗಳು ಸೆರೆಮನೆ ವಾಸವನ್ನು ಕೋರ್ಟ್ ವಿಧಿಸಿತ್ತು. ಅವರ ರಾಜಕೀಯ ಜೀವನ ಸ್ವಾತಂತ್ರ್ಯ ಹೋರಾಟ ಮೈಸೂರು ಅರಸರ ವಿರುದ್ಧ ಕಾರಾಗೃಹವಾಸದಿಂದ ಪ್ರಾರಂಭವಾಯಿತು. ಆಗ ಅವರಿಗೆ 18 ವರ್ಷ ತುಂಬಿರಲಿಲ್ಲ.
ಮೊದಲನೆಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಸಮಾಜವಾದಿ ಪಕ್ಷದ ನಾಯಕರಾಗಿ, ಚುನಾವಣೆ ಪ್ರಚಾರಕ್ಕೆ ಮೈಸೂರಿಗೆ ಅಗಮಿಸಿದ್ದರು. ಅದು 1951ನೇ ಇಸವಿ. ಜೆ.ಎಚ್. ಪಟೇಲರ ಜೀವನದಲ್ಲಿ ಹೊಸ ತಿರುವು ನೀಡಿದ ಒಂದು ಕಾಲಘಟ್ಟವದು. ತದನಂತರದಲ್ಲಿ ಕಾಗೋಡು ಸತ್ಯಾಗ್ರಹ ಆರಂಭವಾಗಿ ಡಾ.ಲೋಹಿಯಾ ಅವರು ಕರ್ನಾಟಕಕ್ಕೆ ಬಂದು ಆ ಸತ್ಯಾಗ್ರಹದಲ್ಲಿ ಭಾಗಹಿಸಿದ್ದು, ಸಮಾಜವಾದಿ ತತ್ವದಲ್ಲಿ ವಿಶ್ವಾಸವಿಟ್ಟಿದ್ದ ಎಲ್ಲರಿಗೂ ಒಂದು ಹೊಸ ಹುರುಪು ನೀಡಿತು. ಈ ಸಮಾಜವಾದದ ಗುಂಗಿನಲ್ಲಿಯೇ ಪಟೇಲರು 1954ರವರೆಗೆ ಬೆಳಗಾವಿಯಲ್ಲಿ ಅಭ್ಯಾಸ ಮಾಡಿ ಎಲ್.ಎಲ್.ಬಿ. ಪದವಿ ಪಡೆದರು.
ಪಟೇಲರು 1955ರಲ್ಲಿ ಶಿವಮೊಗ್ಗದಲ್ಲಿ ತಮ್ಮ ಸಹಪಾಠಿ ಮಿತ್ರ ಶಂಕರನಾರಾಯಣ ಭಟ್ಟರ ಜತೆಗೆ ವಕೀಲಿ ವೃತ್ತಿ ಆರಂಭಿಸಿದರು. 1957ರ ನಂತರ ಸಮಾಜವಾದಿ ಪಕ್ಷದ ಹೋರಾಟದಲ್ಲಿ ಜನನಾಯಕ ಶಾಂತವೇರಿ ಗೋಪಾಲಗೌಡರ ಜತೆಗೂಡಿದರು. 1960ರ ತಾಲೂಕು ಬೋರ್ಡ್ ಚುನಾವಣೆ ಜೆ.ಎಚ್. ಪಟೇಲರನ್ನು ಚುನಾವಣಾ ರಾಜಕೀಯಕ್ಕೆ ಧುಮುಕಿಸಿತು. ಆಗ ಬಸವಪಟ್ಟಣ ಕ್ಷೇತ್ರದಿಂದ ಚನ್ನಗಿರಿ ತಾಲೂಕು ಬೋರ್ಡ್‌ಗೆ ಚುನಾಯಿತರಾದರು. ಈ ಮಧ್ಯೆ ಕಾಗೋಡು ಸತ್ಯಾಗ್ರಹ ಒಂದು ರಾಷ್ಟ್ರೀಯ ಸುದ್ದಿಯಾಗಿ, ಭಾರತದ ಎಲ್ಲ ಕಡೆಗೂ ಲೋಹಿಯಾ ಅವರು 'ಉಳುವವನಿಗೆ ಭೂಮಿ' ಚಳವಳಿ ಪ್ರಾರಂಭಿಸಿದ್ದರು. ರಾಜ್ಯದಲ್ಲಿ ಸಮಾಜವಾದಿ ಪಕ್ಷ ನಡೆಸಿದ ಭೂ ಚಳವಳಿಗಳಲ್ಲಿ ಜೆ.ಹೆಚ್. ಪಟೇಲರು 58ರಲ್ಲಿ ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು.
1962ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಎಚ್. ಪಟೇಲರು ಅತ್ಯಧಿಕ ಬಹುಮತದಿಂದ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅವರು ಲೋಕಸಭೆಯಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿದ್ದು, ನಂತರ ಗೃಹಮಂತ್ರಿಗಳಾಗಿದ್ದ ವೈ.ಬಿ. ಚವ್ಹಾಣ್ ಅವರೊಡನೆ ಮಹಾಜನ ಆಯೋಗದ ಸಂಬಂಧವಾಗಿ ಕರ್ನಾಟಕದ ಪರವಾಗಿ ವಾಗ್ಯುದ್ಧ ನಡೆಸಿದ್ದು, ಕರ್ನಾಟಕದಲ್ಲಿ ಮನೆಮಾತಾಗಿತ್ತು. ಅವರು ಬಹು ಜನಪ್ರಿಯ ಲೋಕಸಭಾ ಸದಸ್ಯರಾಗಿದ್ದರು. ಡಾ.ಲೋಹಿಯಾ ಅವರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದರು.
ಪಟೇಲರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಹುತೇಕ ಸೆರೆಮನೆವಾಸ ಅನುಭವಿಸಿದರು. 1978ರಲ್ಲಿ ಚನ್ನಗಿರಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. 1983ರಲ್ಲಿ ಎರಡನೇ ಅವಧಿಗೆ ಆಯ್ಕೆಯಾದ ಅವರು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು. ಮುಂದೆ ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರದಲ್ಲಿಯೂ ಸಚಿವರಾಗಿ ಸೇವೆ ಸಲ್ಲಿಸಿದರು. 1994 ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳವು ಮತ್ತೆ ಅಧಿಕಾರಕ್ಕೆ ಬಂದಾಗ ಉಪಮುಖ್ಯಮಂತ್ರಿಯಾದರು. 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿ ಹುದ್ದೆಗೆ ಏರಿದ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಯಾದರು. ಪಟೇಲರ ಸರ್ಕಾರದ ಅತ್ಯಂತ ಮಹತ್ವದ ಸಾಧನೆಯೆಂದರೆ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗಿದ್ದು. ಅವರ ಆಡಳಿತವು ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿತು ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಿತು. ಅವರ ಸರ್ಕಾರವು ರೂ. 4,800 ಕೋಟಿ ನೀರಾವರಿ ಯೋಜನೆಗಳಾದ ಘಟಪ್ರಭಾ, ಮಲಪ್ರಭಾ, ವಿಶ್ವೇಶ್ವರಯ್ಯ ಕಾಲುವೆಯ ಆಧುನೀಕರಣ, ವರುಣಾ ಕಾಲುವೆಯ ಕಾಮಗಾರಿ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಅಣೆಕಟ್ಟುಗಳ ಕಾರ್ಯವನ್ನು ಕೈಗೊಂಡಿತು.
ಪಟೇಲರು ತಮ್ಮ ಆಪ್ತರಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದ ಹೊರಹಾಕಿದ ನಂತರ, ಜನತಾದಳವು ವಿಭಜನೆಯಾದ ಕಾರಣದಿಂದ ಮುಖ್ಯಮಂತ್ರಿಯಾಗಿ ಪ್ರಕ್ಷುಬ್ಧ ದಿನಗಳನ್ನು ಕಂಡರು. ತಮ್ಮ ಅಧಿಕಾರಾವಧಿಯಲ್ಲಿ ಇದ್ದ ತೀವ್ರ ಭಿನ್ನಾಭಿಪ್ರಾಯಗಳನ್ನು ಸಹ ಕುಶಲವಾಗಿ ನಿಭಾಯಿಸಿದಾಗ ಅವರ ರಾಜಕೀಯ ಕುಶಾಗ್ರಮತಿ ಮುನ್ನೆಲೆಗೆ ಬಂದಿತು. ಪಕ್ಷದ ವ್ಯವಹಾರಗಳು ಹದಗೆಟ್ಟಾಗ, 1999ರಲ್ಲಿ ವಿಧಾನಸಭಾ ಚುನಾವಣೆಗೆ ಆರು ತಿಂಗಳ ಮುಂಚಿತವಾಗಿ ರಾಜ್ಯ ವಿಧಾನಸಭೆಯನ್ನು ವಿಸರ್ಜನೆ ಮಾಡಲು ಶಿಫಾರಸು ಮಾಡುವ ಮೂಲಕ ಪಟೇಲ್ ಅವರು ತಮ್ಮ ವಿರೋಧಿಗಳು ಸೇರಿದಂತೆ ಪ್ರತಿಯೊಬ್ಬರನ್ನು ದಿಗ್ಭ್ರಮೆಗೊಳಿಸಿದರು. ಅವರು ಹೆಗ್ಡೆಯವರ ಲೋಕಶಕ್ತಿಯೊಂದಿಗೆ ತಮ್ಮ ಬಣವನ್ನು ವಿಲೀನಗೊಳಿಸಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ತಮ್ಮ ಕೊನೆಯ ಚುನಾವಣೆಯಲ್ಲಿ ಯುವ ಅಭ್ಯರ್ಥಿ ವಡ್ನಾಳ್ ರಾಜಣ್ಣ ಅವರಿಂದ ಸೋಲು ಕಂಡರು. ಅವರ ಪಕ್ಷವೂ ಭಾರಿ ಸೋಲನ್ನು ಅನುಭವಿಸಿತು.
ಪಟೇಲ್ ಅವರು 12 ಡಿಸೆಂಬರ್ 2000 ರಂದು ನಿಧನರಾದರು.

J. H. Patel
ಕಾಮೆಂಟ್‌ಗಳು