ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರಿಧರ ಕೊಮರವಳ್ಳಿ


ಶ್ರಿಧರ ಕೊಮರವಳ್ಳಿ


ಶ್ರೀಧರ ಕೊಮರವಳ್ಳಿ ನಮ್ಮ ಕಾಲದ ಪ್ರಸಿದ್ಧ ರೇಖಾಚಿತ್ರಗಾರರು. ಇಂದು ಅವರ ಜನ್ಮದಿನ.

ಕರೂರಿನ ಮೂಲದವರಾದ ಶ್ರೀಧರರು, ಉಡುಪಿ, ಬೆಂಗಳೂರುಗಳಲ್ಲಿ ಓದಿ 1978ರಿಂದ 2010ರ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ರೇಖೆಗಳಲ್ಲಿ ಸುಲಲಿತರಾದ ಶ್ರೀಧರರು ನಮ್ಮೆದುರು ನಿಂತ ಕೆಲವೇ ಕ್ಷಣಗಳಲ್ಲೇ ನಮ್ಮನ್ನು ರೇಖೆಗಳಾಗಿ ಮಾರ್ಪಡಿಸಿ ಬಿಡುತ್ತಾರೆ. ವ್ಯಂಗ್ಯಚಿತ್ರ ಕಲೆಯನ್ನು ಸದಾ ಜೊತೆಗೂಡಿಸಿಕೊಂಡು ಬದುಕಲ್ಲಿ ತಾವೂ ನಕ್ಕು, ಲೋಕವನ್ನೂ ನಲಿವಿನಲ್ಲಿ ಕಂಡವರು ಶ್ರೀಧರ ಕೊಮರವಳ್ಳಿ.

ಶ್ರೀಧರ ಕೊಮರವಳ್ಳಿ ಅವರ ವ್ಯಂಗ್ಯಚಿತ್ರಗಳು ಕನ್ನಡ ಮತ್ತು ಇಂಗ್ಲಿಷಿನ ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಅನೇಕ ವರ್ಷಗಳಿಂದ ಮೂಡಿಬರುತ್ತಿವೆ.  ಅವರ ವ್ಯಂಗ್ಯಚಿತ್ರ ಪ್ರದರ್ಶನಗಳು ಮತ್ತು ಲೈವ್ ಪ್ರದರ್ಶನಗಳು ಕೂಡಾ ಆಸಕ್ತರನ್ನು ತಣಿಸಿವೆ.

ಛಾಯಾಗ್ರಹಣ ಮತ್ತು ಸಂಗೀತ ಶ್ರೀಧರರ ಮತ್ತೆರಡು ಸವಿ ಅಭಿರುಚಿಗಳು.  ಶ್ರೀಧರರ ಪತ್ನಿ ವೆಂಕಟಲಕ್ಷ್ಮಿ ಶ್ರೀಧರ್ ಸಂಗೀತ ವಿದುಷಿಯಾಗಿ ಸಂಗೀತ ಕಾರ್ಯಕ್ರಮ ನೀಡುವುದರ ಜೊತೆಗೆ ಆಸಕ್ತರಿಗೆ ಸಂಗೀತ ಶಿಕ್ಷಣವನ್ನೂ  ನೀಡುತ್ತಾ ಬಂದಿದ್ದಾರೆ.

ಅತ್ಯಂತ ಸ್ನೇಹಪರರಾದ ಸರಳ ಸಜ್ಜನಿಕೆಗಳ ಶ್ರೀಮಂತಿಕೆಯ ಶ್ರೀಧರ ಕೊಮರವಳ್ಳಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Sridhar Comaravalli Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ