ನಾದಿರಾ
ನಾದಿರಾ
ನಾದಿರಾ ಹಿಂದೀ ಚಲನಚಿತ್ರಗಳಲ್ಲಿ ಗಯ್ಯಾಳಿ ಪಾತ್ರಗಳಿಗೆ ಹೆಸರಾಗಿದ್ದವರು.
ಫ್ಲೋರೆನ್ಸ್ ಎಜೇಕೀಲ್ ನಾದಿರಾ 1932ರ ಡಿಸೆಂಬರ್ 5ರಂದು ಇರಾಖಿನ ಬಾಗ್ದಾದ್ನಲ್ಲಿ ಜನಿಸಿದರು.
ನಾದಿರಾ 1950ರಲ್ಲಿ 'ಆನ್' ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಆ ಚಿತ್ರದಲ್ಲಿ ಆಕೆ ದಿಲೀಪ್ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸಿದ್ದರು. ರಾಜ್ ಕಪೂರ್ ಅವರ 'ಶ್ರೀ 420' ಅವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರ. ಆ ಚಿತ್ರದಲ್ಲಿ ಅವರ ಅಭಿನಯದಲ್ಲಿ ಮೂಡಿಬಂದ 'ಮುಡ್ ಮುಡ್ಕೆ' ಹಾಡು ಇಂದಿಗೂ ಜನಪ್ರಿಯ.
ದಿಲ್ ಅಪ್ನಾ ಪ್ರೀತ್ ಪರಾಯಿ, ಪಾಕೀಜಾ, ಹಸ್ತೆ ಜಖ್ಮ್, ಜ್ಯೂಲಿ, ಅಮರ್ ಅಕ್ಬರ್ ಆ್ಯಂಥೋನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಅವರು, ತಮ್ಮ 50-60ರ ಪ್ರಾಯದಲ್ಲೂ ಸಾಗರ್, ಕಾಟನ್ ಮೇರಿ, ತಮನ್ನಾ, ಚಾಲ್ಬಾಜ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.
1975ರಲ್ಲಿ 'ಜ್ಯೂಲಿ' ಚಿತ್ರದ 'ಮ್ಯಾಗಿ' ಪಾತ್ರ ನಿರ್ವಹಣೆಗೆ ಅವರಿಗೆ ಫಿಲಂಫೇರ್ ಪ್ರಶಸ್ತಿ ಸಂದಿತು. 2000ದಲ್ಲಿ ಬಂದ 'ಜೋಷ್' ನಾದಿರಾ ಅವರ ಕಡೆಯ ಚಿತ್ರ.
ಚಿತ್ರರಂಗದಲ್ಲಿ ಅಪಾರ ಬೇಡಿಕೆ ಹೊಂದಿದ್ದ ನಾದಿರಾ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು ಕೊಂಡ ಮೊದಲ ನಟಿ ಎನಿಸಿದ್ದರು.
ನಾದಿರಾ 2009ರ ಫೆಬ್ರವರಿ 9ರಂದು ನಿಧನರಾದರು.
On the birth anniversary of actress Nadira
ಕಾಮೆಂಟ್ಗಳು