ಯುವರಾಜ್ ಸಿಂಗ್
ಯುವರಾಜ್ ಸಿಂಗ್
ಕ್ರಿಕೆಟ್ ಆಟಕ್ಕೆ ನಲಿವಿನ ಶೋಭೆ ತಂದ ಪ್ರಮುಖ ಆಟಗಾರ ಯುವರಾಜ್ ಸಿಂಗ್.
ಯುವರಾಜ್ ಸಿಂಗ್ 1981 lರ ಡಿಸೆಂಬರ್ 12ರಂದು ಜನಿಸಿದರು.
ಯುವರಾಜ್ ಸಿಂಗ್ ಈ ಹಿಂದಿನ ದಶಕದ ಕ್ರಿಕೆಟ್ಟಿನಲ್ಲಿ ಭಾರತದ ತಂಡದ ಪ್ರಮುಖ ಸಾಧನೆಗಳಾದ ‘2002ರ ವರ್ಷದ ಇಂಗ್ಲೆಂಡಿನಲ್ಲಿ ಸಾಧಿಸಿದ್ ನಾಟ್ ವೆಸ್ಟ್ ಟ್ರೋಫಿ ಗೆಲುವು’, ‘2003ರ ವಿಶ್ವಕಪ್ ಕ್ರಿಕೆಟ್ ಫೈನಲ್ ಪ್ರವೇಶ’, ‘2005, 2006 ರ ವರ್ಷಗಳಲ್ಲಿನ ದಕ್ಷಿಣ ಆಫ್ರಿಕ, ಪಾಕಿಸ್ತಾನ, ಇಂಗ್ಲೆಂಡಿನಲ್ಲಿನ ಸಾಧನೆಗಳು’, ’2007ರ 20 – 20 ಕ್ರಿಕೆಟ್ಟಿನಲ್ಲಿ ಭಾರತದ ವಿಜಯ’, ‘2007-2008ರ ಹಲವು ಪ್ರಮುಖ ಗೆಲುವುಗಳು’ , 2011ರ ವಿಶ್ವಕಪ್ ವಿಜಯ ಮುಂತಾದುವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು.
ಯುವರಾಜ್ ಸಿಂಗ್ ಅಷ್ಟು ಆಕರ್ಷಕ ಕ್ರಿಕೆಟ್ ಆಡಿದವರು, ಸೊಗಸಿನ ರನ್ನುಗಳ ಮಳೆ ಸುರಿಸಿದವರು, ಪಂದ್ಯಗಳ ಗತಿಯನ್ನು ಬದಲಿಸಿದವರು, ಸಿಕ್ಸರ್ ಬಾರಿಸಿದವರು, ಉತ್ತಮ ಕ್ಷೇತ್ರರಕ್ಷಣೆ, ವೈವಿಧ್ಯತೆಯ ಅಗತ್ಯವಿದ್ದಾಗ ಬೌಲಿಂಗ್ ಹೀಗೆ ಭಾರತದ ಕ್ರಿಕೆಟ್ಟಿಗೆ ಬಣ್ಣ ತಂದವರು ವಿರಳ.
ಸುದೀರ್ಘ ಕಾಲದ ಅನಾರೋಗ್ಯದ ನಂತರದಲ್ಲಿ 2012ರಲ್ಲಿ ಕ್ರೀಡಾ ಜಗತ್ತಿಗೆ ಮತ್ತೊಮ್ಮೆ ದೃಢತೆಯಿಂದ ಮರಳಿ ತನ್ನ ಯುವ ತೇಜಸ್ಸನ್ನು ಮತ್ತೊಮ್ಮೆ ಭವ್ಯವಾಗಿ ತೆರೆದಿಟ್ಟ ಯುವರಾಜ್ ಸಿಂಗ್ ಅಂದು ಸಿಕ್ಸರ್ ಬಾರಿಸಿದಾಗ ಆತನ ಆಟ ನೋಡಲು ಬಂದಿದ್ದ ಅವರ ತಾಯಿ ಕುಣಿದು ಕುಪ್ಪಳಿಸಿದ್ದು, ಆತನ ಹೃದಯ ಕ್ರಿಕೆಟ್ಟಿಗಾಗಿ ಎಷ್ಟೊಂದು ಮಿಡಿಯುವಂತದ್ದು ಎಂಬುದರ ಸಂಕೇತಿಸುವಂತಿತ್ತು ಮಾತ್ರವಲ್ಲ ಆತನ ಆಟಕ್ಕೆ ಮನಸೋತ ಹೃದಯಗಳ ವಿಶಾಲ ವೈಶಾಲ್ಯತೆಯನ್ನು ಕೂಡಾ ಪ್ರಾತಿನಿಧಿಸುವಂತಿತ್ತು.
ಬರಿಕಿನ ಒಂದೇ ರೀತಿಯ ಸುಂದರ ಆಟ ಯಾರಿಗೂ ಸಾಧ್ಯವಿಲ್ಲ. ಇತ್ತೀಚಿನ ವರ್ಷದಲ್ಲಿ ಯುವರಾಜ್ ಸಿಂಗ್ ಅವರಿಗೂ ಆಗಲಿಲ್ಲ ಅಷ್ಟೇ!
ಕಳೆದ ಜೂನ್ 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕಟ್ಟಿಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಅವರಿಗೆ ಬದುಕು, ಆರೋಗ್ಯ, ಕ್ರೀಡೆ ಸಕಲವೂ ಯಶಸ್ವಿಯಾಗಿರಲಿ ಎಂದು ನಮ್ಮ ಆತ್ಮೀಯ ಹಾರೈಕೆ.
On the birth day of lovely cricket player Yuvaraj Singh
ಕಾಮೆಂಟ್ಗಳು