ಜಾವೇದ್ ಅಕ್ತರ್
ಜಾವೇದ್ ಅಕ್ತರ್
ಜಾವೇದ್ ಅಕ್ತರ್ ಸಿನಿಮಾ ರಂಗದ ಮಹತ್ವದ ಗೀತರಚನಕಾರ, ಚಿತ್ರಕಥೆಗಾರ ಹಾಗೂ ಉರ್ದು ಕವಿ.
ಜಾವೇದ್ ಅಕ್ತರ್ ಅವರು 1945ರ ಜನವರಿ 17ರಂದು ಜನಿಸಿದರು. ಒಂದು ಕಾಲದಲ್ಲಿ ಹಿಂದಿಯ ಬಹುತೇಕ ಚಿತ್ರಗಳಿಗೆ ಚಿತ್ರಕತೆ ಮತ್ತು ಗೀತರಚನೆಗೆ ಹೆಸರಾಗಿದ್ದದ್ದು ಸಲೀಮ್-ಜಾವೇದ್ ಜೋಡಿ. ಮುಂದೆ ಜಾವೇದ್ ಅಖ್ತರ್ ತಾವೇ ಪ್ರತ್ಯೇಕವಾಗಿ ಸಹಾ ಬಹು ಜನಪ್ರಿಯ ಬೇಡಿಕೆಯ ಗೀತರಚನಕಾರರಾಗಿ, ಚತ್ರಕಥೆಗಾರರಾಗಿ ಮತ್ತು ಕವಿಯಾಗಿ ಮುನ್ನಡೆದಿದ್ದಾರೆ.
ಜಾವೇದ್ ಅಕ್ತರ್ ಅವರ ಊರು ಗ್ವಾಲಿಯರ್. ತಂದೆ ಚಲನ ಚಿತ್ರ ಗೀತರಚನಕಾರರಾಗಿದ್ದ ಜಾನ್ ನಿಸಾರ್ ಅಕ್ತರ್ ಮತ್ತು ತಾಯಿ ಸಫಿಯಾ ಅಕ್ತರ್.
ಕಿರಿಯ ವಯಸ್ಸಿನಲ್ಲಿದ್ದಾಗಲೇ ಅಕ್ತರ್ ತಮ್ಮ ತಾಯಿಯನ್ನು ಕಳೆದುಕೊಂಡರು,ಹೀಗಾಗಿ ಅವರ ತಂದೆ ಲಖ್ನೌ ಮತ್ತು ಮುಂಬೈಗಳಿಗೆ ಓಡಾಟ ನಡೆಸಬೇಕಾಗಿತ್ತು. ಇದರಿಂದ ಅವರು ತಮ್ಮ ಸಂಬಂಧಿಕರೊಂದಿಗೆ ಹೆಚ್ಚು ಸಮಯ ಕಳೆದರು. ಬಿಎ ಪದವಿ ಗಳಿಸಿದ ದಿನಗಳಲ್ಲೆ ಅವರು ಉತ್ತಮ ವಾಗ್ಮಿಯಾಗಿ ಹಲವಾರು ಬಹುಮಾನ ಗಳಿಸುತ್ತಿದ್ದರು.
ಅಕ್ತರ್ 1964ರಲ್ಲಿ ಮುಂಬೈಗೆ ಬಂದರು. ಕೆಲವು ಸಣ್ಣ ಪುಟ್ಟ ಕೆಲಸಮಾಡಿದ ನಮತರ ಯಕೀನ್ ಚಿತ್ರಕ್ಕಾಗಿ ಚಿತ್ರಕಥೆ ಬರೆದರು.ಆದರೆ ಇದು ಬಾಕ್ಸ್ ಆಫೀಸಿನಲ್ಲಿ ಯಶಸ್ವಿಯಾಗಲಿಲ್ಲ. ಅಕ್ತರ್ ನಂತರ ಅಧಿಕಾರ್ ಚಿತ್ರದ ಕಥೆ ವಿಸ್ತರಿಸುವ ಕೆಲಸಕ್ಕಾಗಿ ಸಲಿಮ್ ಖಾನ್ ಅವರೊಂದಿಗೆ ಸೇರಿಕೊಂಡರು. ಅವರಿಬ್ಬರೂ ನಂತರ ಜಿ.ಪಿ.ಸಿಪ್ಪಿಯವರ ಸಿಪ್ಪಿ ಫಿಲ್ಮ್ಸ್ ಸೇರಿ ಆ ಸಂಸ್ಥೆಯ ಯಶಸ್ವಿ ಚಿತ್ರಗಳಿಗೆ ಕೊಡುಗೆ ನೀಡಿದರು.
ಮೊದಮೊದಲು ಅಕ್ತರ್ ತನ್ನ ಚಿತ್ರಕಥೆಗಳನ್ನು ಉರ್ದುವಿನಲ್ಲಿ ಬರೆಯುತ್ತಿದ್ದರು.ಆತನ ಸಹಾಯಕರು ಅದನ್ನು ಹಿಂದಿಗೆ ಭಾಷಾಂತರಿಸುತ್ತಿದ್ದರು. ಜಾವೇದ್ ಅಕ್ತರ್ ಅವರು ಸಲಿಮ್ ಖಾನ್ ಅವರೊಂದಿಗೆ 1980ರವರೆಗೆ ಕಾಯಕ ಮುಂದುವರೆಸಿದರು. ನಂತರ ತಾವೇ ಸ್ವತಃ ಚಿತ್ರಕತೆಗಳನ್ನು ಬರೆಯಲು ಆರಂಭಿಸಿದರು.
ಜಾವೇದ್ ಅಕ್ತರ್ ಚಲನಚಿತ್ರಗಳಿಗೆ ಗೀತ ರಚನೆಯಲ್ಲದೇ ಉರ್ದು ಕವಿತೆಗಳನ್ನು ಸಹಾ ಬರೆದರು.ಅವರ ಬಹುಮುಖ್ಯ ಕೃತಿಗಳನ್ನು ತರ್ಕಾಶ್ ನಲ್ಲಿ ಸಂಕಲನಗೊಳಿಸಿ, ಅವರದೇ ಧ್ವನಿಯಲ್ಲಿ ಆಡಿಯೊ ತಯಾರಿಸಲಾಗಿದೆ. ಇವರ ಗೀತೆಗಳಿಗೆ ಪ್ರಸಿದ್ದ ಗಾಯಕರಾದ ಜಗಜೀತ್ ಸಿಂಗ್, ನುಸ್ರತ್ ಫತೆಹ್ ಅಲಿ ಖಾನ್ ಮತ್ತು ಇತರ ಅನೇಕ ಪ್ರಸಿದ್ಧರು ಧ್ವನಿ ನೀಡಿದ್ದಾರೆ.
ಜಾವೇದ್ ಅಕ್ತರ್ ಅವರಿಗೆ ಭಾರತ ಸರ್ಕಾರದಿಂದ 1999ರಲ್ಲಿ ಪದ್ಮಶ್ರೀ ಮತ್ತು 2007ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳು ದೊರಕಿವೆ. ಲೆಕ್ಕವಿಲ್ಲದಷ್ಟು ಬಾರಿಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದ್ದಾರೆ. ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
On the birth day of poet and lyricist Javed Akthar
ಕಾಮೆಂಟ್‌ಗಳು