ಅಂಕಿತ
ಅಂಕಿತ
ಅಂಕಿತ ಕನ್ನಡ ಕನ್ನಡ ನೆಲದ ಕಾಂತಿಯುತ ಬಾಲ ಪ್ರತಿಭೆ.
ಅಂಕಿತ ಜನಿಸಿದ್ದು 2010ರ ಫೆಬ್ರವರಿ 20ರಂದು. ತಂದೆ ಜಯರಾಮ್ Jayarama Ankitha ಸ್ವಯಂ ಉದ್ಯೋಗಸ್ಥರು. ತಾಯಿ ಪ್ರೇಮಾ.
ಮಗುವಾಗಿದ್ದಾಗಲೇ ಅಂಕಿತಾಳ ಉತ್ಸಾಹ, ಪ್ರತಿಭೆ, ಲಕ್ಷಣತೆಯ ಆಕರ್ಷಣೆ ಮತ್ತ ಪಟ ಪಟನೆ ಆಡುವ ಸ್ಪಷ್ಟ ಮುದ್ದು ಮಾತುಗಳು ಕಲಾಲೋಕದ ಕಣ್ಣಿಗೆ ಬಿದ್ದೊಡನೆ ಅಭಿನಯಕ್ಕಾಗಿನ ಬೇಡಿಕೆಗಳು ನಿರಂತರವಾಗಿ ಬರಲಾರಂಭಿಸಿತು.
ಮೊದಲು 'ಕ್ರೀಂ ಬಿಸ್ಕೆಟ್ ವೆಬ್' ಸರಣಿಯಲ್ಲಿ ಮೂಡಿದ ಅಂಕಿತಳ ಪ್ರತಿಭೆ, ಕಿರಿಕ್ ಕೀರ್ತಿ ಅವರ 'ಸಿಲಿಂಡರ್ ಸತೀಶ್' ಮೂಲಕ ಚಲನಚಿತ್ರ ಲೋಕಕ್ಕೆ ಪರಿಚಯವಾಯ್ತು. ನಂತರದಲ್ಲಿ ಶ್ರೀಮುರಳಿ ಅವರೊಂದಿಗೆ 'ಭರಾಟೆ', ಜಗ್ಗೇಶ್ ಅವರೊಂದಿಗೆ 'ಕಾಳಿದಾಸ ಕನ್ನಡ ಮೇಷ್ಟ್ರು' ಮತ್ತು ಸತೀಶ್ ನೀನಾಸಂ ಜೊತೆಗಿನ 'ಬ್ರಹ್ಮಚಾರಿ' ಚಿತ್ರಗಳು ಬಿಡುಗಡೆ ಆಗಿವೆ. ಕಿರುತೆರೆಯಲ್ಲಿಯೂ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಟಿಸಿದ ಅಂಕಿತ, ಟಿವಿ 9 ವಾಹಿನಿಯ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಯಶಸ್ವೀ ನಿರ್ವಹಣೆ ಕೂಡಾ ಮಾಡಿದ್ದಾಳೆ. 'ಕಾಗದ' ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.
ಶಾಂತಿನಿಕೇತನ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಾ, ಓದಿನಲ್ಲೂ ಮುಂದಿರುವ ಅಂಕಿತ, ತನ್ನ ರಜಾ ದಿನಗಳಲ್ಲಿ ಮಾತ್ರಾ ಅಭಿನಯಿಸುತ್ತಾ ಶಾಲೆಯಲ್ಲಿನ ಶಿಕ್ಷಕ ವರ್ಗದವರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ. ಯೋಗ, ಚಿತ್ರಕಲೆ, ಸೈಕಲ್ ಸವಾರಿ , ಈಜು, ಕಿಡ್ ಮಾಡಲಿಂಗ್ ಮತ್ತು ಸಂಗೀತದ ಆಸ್ವಾದನೆ ಅಂಕಿತಾಳ ಇತರ ಹವ್ಯಾಸಗಳು.
ಅಂಕಿತಾಗೆ ನಿರಂತರವಾಗಿ ಹರಿದು ಬರುತ್ತಿರುವ ಅಭಿನಯಕ್ಕಾಗಿನ ಅವಕಾಶಗಳಲ್ಲಿ ತಯಾರಾಗಿರುವ ಮತ್ತು ತಯಾರಿಯ ವಿವಿಧ ಹಂತಗಳಲ್ಲಿರುವ ಅನೇಕ ಚಿತ್ರಗಳಿವೆ.
ಅಂಕಿತ ಮೇಲೆ ತಂದೆ ತಾಯಿಯರಲ್ಲಿ ತುಂಬಿರುವ ಕನ್ನಡ ಪರ ಚಟುವಟಿಕೆಗಳಲ್ಲಿ ಜೊತೆಗೂಡುವ ಅಭಿಮಾನ ಸಹಜವಾಗಿ ಮೈಗೂಡಿದೆ. ತಾನು ಚೆನ್ನಾಗಿ ಓದಿ ಡಾಕ್ಟರ್ ಆಗಿ ಬಡ ಜನರ ಸೇವೆ ಮಾಡುವಂತಹ ಕನಸುಗಳು ಪುಟಾಣಿ ಅಂಕಿತಳಲ್ಲಿ ಅರಳಿವೆ.
ಶುಭ್ರಮನಕ್ಕೆ ಸಾಧ್ಯವಿಲ್ಲದಾದರೂ ಏನಿದೆ. ಅಂಕಿತ ಮನದಲ್ಲಿ ಅರಳುತ್ತಿರುವ ಅಸಂಖ್ಯ ಆಶಯಗಳೂ ನೆರವೇರಲಿ. ಬೆಳೆಯುತ್ತಿರುವ ಆಕೆಯ ಮನಕ್ಕೆ ಉಲ್ಲಾಸಕರ ಪೋಷಣೆ ದೊರಕುತ್ತಿರಲಿ. ಆಕೆಯಲ್ಲಿರುವ ಕಲಾ ಪ್ರತಿಭೆಗಳು ನಿರೀಕ್ಷೆಗಳ ಒತ್ತಡಕ್ಕೆ ಸಿಲುಕದೆ ನಿತ್ಯ ಉಲ್ಲಾಸಕರವಾಗಿರಲಿ. ಅಂಕಿತ ತನ್ನ ಬಾಲ್ಯದ ಸವಿಯನ್ನು ಕೂಡಾ ಕಳೆದುಕೊಳ್ಳದೆ, ನಲಿ ನಲಿಯುತ್ತಾ ಸಹಜತೆಯಲ್ಲಿ ತನ್ನ ಸುಗಮ ದಾರಿಯ ಉತ್ತಮ ಭವಿತವ್ಯವನ್ನು ತಾನೇ ರೂಪಿಸಿಕೊಳ್ಳುವಂತ ಉತ್ತಮ ವಾತಾವರಣದ ಭವಿತವ್ಯ ಆಕೆಗೆ ಲಭಿಸುತ್ತಿರಲಿ.
ಅಂಕಿತಾಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು
Anita
ನಿಮ್ಮ ಈ ಅಭಿಮಾನದ ಬರಹಕ್ಕೆ ಹುಟ್ಟು ಹಬ್ಬದ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಎಂದೆಂದೂ ಸದಾ ಚಿರಋಣಿ ಧನ್ಯೋಸ್ಮಿ, ಶ್ರೀಧರ್ ಸರ್
ಪ್ರತ್ಯುತ್ತರಅಳಿಸಿ🌹💓💐🙏🤝🏻