ಸ್ತ್ರೀ
ಸ್ತ್ರೀ
ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -
ಹಸಿರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -
ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ -
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?
ಸಾಹಿತ್ಯ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ
(ಇಲ್ಲಿನ ಹಿನ್ನೆಲೆ ಚಿತ್ರದ ಬಗ್ಗೆ: ಈ ಚಿತ್ರದ ಹೆಸರು "The Glow of Hope" ಎಂದು. ಇದನ್ನು ರಚಿಸಿದವರು ಎಸ್. ಎಲ್. ಹಲದಂಕರ್. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿದೆ. ಈ ಚಿತ್ರದ ಮೂಲ ಪ್ರತಿ ನೀಡುವ ಅನುಭವ ವಿಶೇಷವಾದದ್ದು.)
ಕಾಮೆಂಟ್‌ಗಳು