ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಚಿನ್ ತೆಂಡೂಲ್ಕರ್


 ಭಾರತ ರತ್ನ ಸಚಿನ್ ತೆಂಡೂಲ್ಕರ್


48ನೇ  ಹುಟ್ಟು ಹಬ್ಬ ಆಚರಿಸುತ್ತಿರುವ ಸಚಿನ್ ತೆಂಡುಲ್ಕರ್ ನೆನೆದು ಮನಸ ಉಲ್ಲಾಸಗೊಳ್ಳುತ್ತದೆ.  ಬದುಕಿನಲ್ಲಿ ಮಾನವ ಅವನೇನು ಮಾಡುತ್ತಾನೋ ಅದನ್ನು ಸಂತಸದಿಂದ ಅನುಭಾವಿಸಿ ಮಾಡಿದಾಗ ಅದು ಕ್ರೀಡೆ ಎನಿಸುತ್ತದೆ.  

ಮಹಾಭಾರತದ ಕಥೆಯನ್ನೊಳಗೊಂಡಂತೆ ಮನುಷ್ಯ ಕ್ರೀಡೆಯನ್ನು ಪ್ರತಿಷ್ಠೆಯ ಸ್ಪರ್ಧೆಯಾಗಿಸಿಕೊಂಡು ಬದುಕನ್ನು ಯುದ್ಧವಾಗಿಸಿಕೊಂಡು ಅದನ್ನೇ ಕ್ರೀಡೆ ಎಂದು ಭಾವಿಸುವ ಮಟ್ಟಕ್ಕೆ ಇಳಿದುಬಿಟ್ಟ.  ಹೀಗಾಗಿ ಕ್ರೀಡೆಯಾಡುವವರು ಕ್ರೀಡಾಳುಗಳಾಗಿ ಉಳಿಯುವುದು ಅಪರೂಪವಾಗುತ್ತಿರುವ ದಿನಗಳಿವು.  ಇಂಥಹ ಯುಗದಲ್ಲಿ ತನ್ನನ್ನು ಮಾತ್ರಾ ತನ್ನ ಸ್ಪರ್ಧೆಯಾಗಿ ಪರಿಗಣಿಸಿ, ತಾನು ಆಡುವ ಕ್ರೀಡೆಯನ್ನು ಆತ್ಮೀಯವಾಗಿಸಿಕೊಂಡು, ಕ್ರೀಡೆಗೂ ಮಿಗಿಲಾಗಿ ತನ್ನನ್ನು ವ್ಯಾಪಿಸಿಕೊಂಡ ಸಚಿನ್ ತೆಂಡುಲ್ಕರ್ ಅವರ ಬಗ್ಗೆ ಹೇಳಲು ಉಳಿದಿರುವ ಮಾತುಗಳಾದರೂ ಏನಿವೆ.    ಚಿಕ್ಕವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿ  ಅಷ್ಟೊಂದು ಸುದೀರ್ಘಾವಧಿಯವರೆಗೆ ತನ್ನ ಮೊದಲಿನ ಹುಮ್ಮಸ್ಸಿನಲ್ಲೇ ಆಟವನ್ನು ಸ್ವೀಕರಿಸಿದವರು ಮುಂದೆ ಎಂದಾದರೂ ಸಾಧ್ಯ ಎಂದು ಊಹಿಸುವುದೂ ಕೂಡಾ ಕಷ್ಟ.   

ಈಗ  ತೆಂಡೂಲ್ಕರ್  ಅವರು  ಎಲ್ಲ  ರೀತಿಯ  ಕ್ರಿಕೆಟ್ನಿಂದ  ಆಟಗಾರನಾಗಿ  ನಿವೃತ್ತನಾಗಿರುವುದು  ಎಲ್ಲ ವೈಯಕ್ತಿಕ ಪ್ರದರ್ಶನಗಳಿಗೂ ಸೀಮಿತತೆ, ಕೊನೆ ಎಂಬುದಿದೆ ಎಂಬುದನ್ನು ನಮಗೆ ನೆನಪು ಮಾಡಿಕೊಡುತ್ತದೆ.   ಆದರೆ ಅವರು ಅಭಿಮಾನಿಗಳ ಹೃದಯದಾಳದಲ್ಲಿ ಬರೆದಂತಹ ದಾಖಲೆಗಳ ಮೆರುಗಿಗಂತೂ  ಎಂದೂ ಕೊನೆಯಿಲ್ಲ.  

"ಓ ಮಹಾನುಭಾವನೇ ನೀನೆಂದರೆ ನಮಗೆ ಹೆಮ್ಮೆ.  ನಿನ್ನಂತಹ ಸಾಧಕರು ನಮ್ಮ ಈ ವಿಶ್ವದಲ್ಲಿ ಎಲ್ಲ ರಂಗಗಳಲ್ಲೂ ಮೂಡಿಬರಲಿ.  ಆಗ ಎಲ್ಲಾ ಸಾಧನೆಗಳೂ ತಾನೇ ತಾನಾಗಿ ಮೂಡುತ್ತವೆ.  ದಾಖಲೆಗಳೆಂಬ ಚರಿತ್ರೆಗಳೇ ಅಳಿಸಿಹೋಗುತ್ತವೆ.  ಎಲ್ಲಾ ವಿಜಯಗಳೂ ತಾನೇ ತಾನಾಗಿ ಮಾನವನದಾಗುತ್ತವೆ."

ಎಲ್ಲೆಡೆ ಮೊಳಗುತ್ತಿರುವ ನಿಮ್ಮ ಹುಟ್ಟಿದ ಹಬ್ಬದ ಶುಭ ಹಾರೈಕೆಗಳು ಸಾರಿ ಸಾರಿ ಹೇಳುತ್ತಿವೆ ನಿಮ್ಮ ಪರಾಕ್ರಮ, ಓ ತೆಂಡುಲ್ಕರರೇ ನಿಮ್ಮ ಬದುಕಾಗಿರಲಿ ಎಂದೆಂದೂ  ಶ್ರೇಯಸ್ಕರ.

On Sachin Tendulkar's Birthday

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ