ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಚ್ಛೇಂದ್ರಿಪಾಲ್

 ಬಛೇಂದ್ರಿ ಪಾಲ್


ಬಛೇಂದ್ರಿ ಪಾಲ್ ಎವರೆಸ್ಟ್ ಶಿಖರವನ್ನು ಏರಿದ ಪ್ರಪ್ರಥಮ ಭಾರತೀಯ ಮಹಿಳೆ. 

ಬಛೇಂದ್ರಿ ಪಾಲ್ ಉತ್ತರಾಂಚಲದ ಉತ್ತರ ಕಾಶಿಯ ಬೆಟ್ಟ ಗುಡ್ಡಗಳಲ್ಲಿರುವ ನಾಕೂರಿ ಎಂಬ ಪುಟ್ಟ ಗ್ರಾಮದಲ್ಲಿ 1954ರ ಮೇ 24ರಂದು ಜನಿಸಿದರು.   ಈಕೆ ಬಾಲ್ಯದಲ್ಲಿಯೇ ಪರ್ವತಾರೋಹಣದ ಗೀಳು ಬೆಳೆಸಿಕೊಂಡರು. 'ನೆಹರು ಪರ್ವತಾರೋಹಣ ಸಂಸ್ಥೆ'ಯಲ್ಲಿ ತರಬೇತಿ ಪಡೆಯುವಾಗಲೇ ಅಲ್ಲಿನ ಶಿಕ್ಷಕರು ಈಕೆಯ ಸಾಮರ್ಥ್ಯವನ್ನು ಗುರುತಿಸಿದ್ದರು. ಬಛೇಂದ್ರಿ ಪಾಲ್  ಡೆಹ್ರಾಡೂನಿನನಲ್ಲಿ ಎಂ. ಎ, ಬಿ.ಎಡ್ ಪದವಿಗಳನ್ನೂ ಗಳಿಸಿದರು. 

ಮುಂದೆ ಪರ್ವತಾರೋಹಣದಲ್ಲಿ ಉನ್ನತ ತರಬೇತಿ ಪಡೆದ ಬಛೇಂದ್ರಿ ಪಾಲ್, ಹಲವಾರು ಶಿಖರಗಳನ್ನು ಯಶಸ್ವಿಯಾಗಿ ಏರಿದರು. 1984ರ ಮೇ 23ರಂದು ಎವರೆಸ್ಟ್ ಶಿಖರವನ್ನೇರಿದ ವಿಕ್ರಮಗೈದರು. ಆನಂತರ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್‍ ಸ್ಥಾಪಿಸಿ ಹಲವು ಪರ್ವತಾರೋಹಣ ಹಾಗೂ ಚಾರಣ ಕಾರ್ಯಕ್ರಮಗಳನ್ನು ನಡೆಸುತ್ತಾ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. 

ಮುಂದೆ ಬಛೇಂದ್ರಿ ಪಾಲ್  1993ರಲ್ಲಿ ಮಹಿಳೆಯರ ಸದಸ್ಯರನ್ನು ಮಾತ್ರಾ ಒಳಗೊಂಡಿದ್ದ ಇಂಡೋ ನೇಪಾಲೀಸ್ ಉಮನ್ಸ್ ಮೌಂಟ್ ಎವರೆಸ್ಟ್ ಎಕ್ಸ್ಪೆಡಿಷನ್, 1994ರ ದ ಗ್ರೇಟ್ ಇಂಡಿಯನ್ ಉಮನ್ಸ್ ರಾಫ್ಟಿಂಗ್ ವೋಯೇಜ್, 1997ರ ಫರ್ಸ್ಟ್ ಇಂಡಿಯನ್ ಉಮನ್ ಟ್ರಾನ್ಸ್ ಹಿಮಾಲಯನ್ ಎಕ್ಸ್ಪೆಡಿಷನ್ ಮುಂತಾದ ಯಶಸ್ವೀ ಸಾಹಸಗಳ ನೇತೃತ್ವ ವಹಿಸಿದ್ದರು.

ಬಛೇಂದ್ರಿ ಪಾಲ್  2013ರಲ್ಲಿ ಪರ್ವತ ಪ್ರದೇಶಗಳಲ್ಲಿ ಮಳೆ ನದಿ ಪ್ರವಾಹಗಳ ಸಂಕಷ್ಟ ಸಮಯದಲ್ಲಿ ಅಪಾರ ಸಮಾಜಸೇವಾ ಕಾರ್ಯಗಳಲ್ಲಿಯೂ ಶ್ರಮದಾನ ನೀಡಿದರು.

ತಮ್ಮ ಸಾಧನೆಗಳ ಫಲವಾಗಿ ಭಾರತ ಪರ್ವತಾರೋಹಣ ಸಂಸ್ಥೆಯ ಚಿನ್ನದ ಪದಕ ಪುರಸ್ಕೃತರಾದ  ಬಛೇಂದ್ರಿ ಪಾಲ್  ಅವರಿಗೆ ಭಾರತ ಸರ್ಕಾರ, ಪದ್ಮಶ್ರೀ, ಪದ್ಮಭೂಷಣ  ಮತ್ತು ಅರ್ಜುನ ಪ್ರಶಸ್ತಿ  ಮುಂತಾದ ಗೌರವಗಳನ್ನು ನೀಡಿದೆ.


On the birthday of great mountaineer Bachendri Pal 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ