ಕೆ. ಎಸ್. ನಾಗರಾಜ್
ಕೆ. ಎಸ್. ನಾಗರಾಜ್
ಫಿಲಂ ಫೋಟೋಗ್ರಫಿ ಯುಗದಲ್ಲಿನ ಹವ್ಯಾಸಿ ಛಾಯಾಗ್ರಾಹಕರೂ, ನಮ್ಮೆಲ್ಲರ ಆತ್ಮೀಯ ಹಿರಿಯರೂ ಆದ ಕೆ. ಎಸ್. ನಾಗರಾಜ್ ಅವರ ಜನ್ಮದಿನವಿದು. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ ಬಿಇಎಂಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ ನಿವೃತ್ತರಾದ ನಾಗರಾಜರಿಗೆ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳ ಕುರಿತಾಗಿ ಇರುವ ವಿಸ್ತೃತವಾದ ತಿಳಿವು ಬೆರಗು ಹುಟ್ಟಿಸುವಂತದ್ದು. ಫಿಲಂ ರೋಲ್ಗಳನ್ನು ಬಳಸಿ ಛಾಯಾಗ್ರಹಣ ಮಾಡುತ್ತಿದ್ದ ಕಾಲದಲ್ಲಿನ ಉತ್ತಮ ಛಾಯಾಗ್ರಾಹಕರಾಗಿದ್ದ ನಾಗರಾಜ್ ಅವರ ಬಳಿ ಅಪಾರ ನೆಗೆಟೀವ್ ಚಿತ್ರಗಳ ಗಣಿಯೇ ಇದೆ. ಅಂದಿನ ದಿನಗಳಲ್ಲಿ ಅವರ ಚಿತ್ರಗಳು ಮತ್ತು ಪ್ರವಾಸಿ ಲೇಖನಗಳು ಪತ್ರಿಕೆಗಳಲ್ಲಿ ರಾರಾಜಿಸುತ್ತಿದ್ದವು. ತಂತ್ರಜ್ಞಾನ ಬದಲಾದಾಗ ಶೇಖರಿಸಿದ ವಸ್ತುಗಳಿಗೆ ಉಪಯೋಗ ಇಲ್ಲದೆ ಹೋಗಬಹುದು. ಆದರೆ, ಗಳಿಸಿದ ಜ್ಞಾನ, ಅನುಭವ ಮತ್ತು ಅವುಗಳ ನೆನಪಿನ ಮೆಲುಕು ಎಂದೂ ಮರೆಯಾಗದ ಅಮೂಲ್ಯ ನಿಧಿ ಎಂದು ನಾಗರಾಜ್ ಅವರ ಮಾತು, ಹಸನ್ಮುಖ ಮತ್ತು ಉತ್ಸಾಹ ತುಂಬಿದ ಕಂಗಳು ಬಹಳಷ್ಟು ಹೇಳುತ್ತವೆ. ನಾಗರಾಜ್ ಸಾರ್, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಿಮ್ಮ ಆಶೀರ್ವಾದಪೂರ್ವಕ ಸ್ನೇಹಭಾಗ್ಯ ನಮಗೆಂದೆಂದೂ ಇರಲಿ.
🎂🎉🍰🎁🍦💐😊
Happy birthday Nagaraj Ks Sir 🌷🙏🌷
ಕಾಮೆಂಟ್‌ಗಳು