ಉಮಾ ಮುಕುಂದ್
ಉಮಾ ಮುಕುಂದ್
ಆಳವಾದ ಸೂಕ್ಷ್ಮಸಂವೇದನೆಗಳ ಕವಿತೆಗಳಿಂದ ಹೆಸರಾಗಿರುವ ಕವಯತ್ರಿ, ನಿತ್ಯಹಸನ್ಮುಖಿ ಮತ್ತು ಆಪ್ತ ವ್ಯಕ್ತಿತ್ವದ ಉಮಾ ಮುಕುಂದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಅಂತರಜಾಲದಲ್ಲಿ ಉಮಾ ಮುಕುಂದ್ ಅವರ ಕವಿತೆಗಳು ಪ್ರಕಟವಾದಾಗೆಲ್ಲ ಅದು ಎಲ್ಲ ವರ್ಗದ ಜನರನ್ನು ಕೈಬೀಸಿ ತನ್ನೆಡೆಗೆ ಸೆಳೆದುಕೊಳ್ಳುವ ರೀತಿ ಮಹತ್ವದ್ದು. ಅಂತೆಯೇ ಅವರ ಕವನ ಸಂಕಲನ 'ಕಡೇ ನಾಲ್ಕು ಸಾಲು' ಕೃತಿಗೆ ಒಂದು ಪ್ರತಿಕ್ರಿಯೆ ಹೇಳುತ್ತದೆ 'ನೀವು ಉಮಾ ಅವರ ಕವಿತೆಗಳ ಆಕರ್ಷಣೆಗೆ ಸಿಲುಕಿಕೊಂಡರೆ ಬಿಡಿಸಿಕೊಳ್ಳಲಾರಿರಿ ಹುಷಾರ್!'.
ಉಮಾ ಮುಕುಂದರು ತಮ್ಮ ಪತಿ ಅಪೂರ್ವ ಛಾಯಾಗ್ರಾಹಕ ಎ. ಎನ್. ಮುಕುಂದರು ಮೂಡಿಸಿರುವ, ಕನ್ನಡದ ಸಾಹಿತ್ಯವರೇಣ್ಯರ ಛಾಯಾಚಿತ್ರ ಮತ್ತು ಅಪೂರ್ವ ಮಾಹಿತಿಗಳ 'ಮುಖಮುದ್ರೆ' ಕೃತಿಯಲ್ಲಿ ಕಾಣಬರುವ ಸಾಹಿತಿಗಳ ಭಾವಮುದ್ರೆಗಳು ಮುಕುಂದರ ಛಾಯಾಗ್ರಹಣಕ್ಕೆ ಸಿಗುವಲ್ಲಿ ಮಾಡಿರುವ ಕೆಲಸ ಅದ್ಭುತ ಮತ್ತು ಅಸಾಮಾನ್ಯ.
ಉಮಾ ಮುಕುಂದರಿಗೆ 'ಕಡೇ ನಾಲ್ಕು ಸಾಲು' ಕೃತಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ' ಹಾಗೂ 'ಕಾವ್ಯ ಮಾಣಿಕ್ಯ' ಪ್ರಶಸ್ತಿಗಳು ಸಂದಿದೆ. ಅವರಲ್ಲಿ ಇನ್ನೂ ಅನೇಕ ಕವನ ಸಂಕಲನಗಳಿಗಾಗುವಷ್ಟು ಉತ್ತಮ ಕವಿತೆಗಳಿವೆ. ಅವರ ಕಾವ್ಯಾಭಿವ್ಯಕ್ತಿಯಂತೂ ಎಂದೂ ಬತ್ತದ ಬತ್ತಳಿಕೆ. ಅಂತೆಯೇ ಅವರ ಹೃದಯವಂತಿಕೆ ಕೂಡ.
ನಾವಂತೂ ಅವರ ಆತ್ಮೀಯತೆಯ ಆಕರ್ಷಣೆಗೆ ಸಿಲುಕಿದವರಾಗಿದ್ದೇವೆ.
ನಾನಂತೂ ಅವರ ಸಮಸ್ತ ಕುಟುಂಬದ ವಾತ್ಸಲ್ಯವನ್ನ, ಆತಿಥ್ಯವನ್ನ, ತುಂಬಾ ಸವಿದಿದ್ದೇನೆ.
ಈ ಆತ್ಮೀಯತೆ ಮತ್ತು ಅವರ ಕಾವ್ಯಲಹರಿಯ ಪ್ರವಹಿನಿ ನಿರಂತರವಾಗಿರಲಿ.
Photo credits: Mukunda AN and Prateek Mukunda
Happy Birthday Uma Mukund
ಕಾಮೆಂಟ್‌ಗಳು