ಮನೋಹರ್ ಆಚಾರ್ಯ
ಕೆ. ಮನೋಹರ್ ಆಚಾರ್ಯ
ಇಂದು ನಮ್ಮ ನಡುವಿನ ಪ್ರಖ್ಯಾತ ಕಲಾವಿದರಾದ ಕೆ. ಮನೋಹರ್ ಅಚಾರ್ಯರ ಜನ್ಮದಿನ.
ಮನೋಹರ್ ಅಚಾರ್ಯರು ಜನಿಸಿದ್ದು 1957 ವರ್ಷದ ಜೂನ್ 5 ರಂದು.
ಮನೋಹರ್ ಆಚಾರ್ಯರ ಚಿತ್ರಗಳು ಪತ್ರಿಕೆಗಳಲ್ಲಿ ಅದರಲ್ಲೂ ವಿಶೇಷವಾಗಿ ಪ್ರಜಾವಾಣಿ, ಸುಧಾ, ಮಯೂರಗಳಲ್ಲಿ ಓದುಗರನ್ನು ಅಪಾರವಾಗಿ ಆಕರ್ಷಿಸಿದೆ. ಚಿತ್ರಕಲೆಯ ವಿಭಿನ್ನ ನೆಲೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಹೊಮ್ಮಿಸಿರುವ ಇವರಿಗೆ ಕಲೆಯ ಮೇಲೆ ಅಪಾರ ಪ್ರೀತಿ. ನಿರಂತರ ಓದು ಕೂಡ ಇವರ ಕಲೆಗೆ ಹೊಸ ಹೊಳಹುಗಳನ್ನು ಒದಗಿಸಿ, ಕುಂಚದ ಕ್ರಿಯಾಶೀಲತೆಯ ವ್ಯಾಪ್ತಿಗಳನ್ನು ವಿಸ್ತರಿಸಿದೆ.
ಗ್ರಾಫಿಕ್ ಸೃಜನೆ, ಕಲಾತ್ಮಕ ಛಾಯಾಗ್ರಹಣಗಳಲ್ಲಿ ಸದಾ ಪ್ರಯೋಗಶೀಲರಾದ ಮನೋಹರ್ ಆಚಾರ್ಯ ಅವರು ಕ್ಯಾಲಿಗ್ರಫಿ, ಟೈಪೋಗ್ರಫಿ, ಸೈನ್ಸ್ ಫಿಕ್ಷನ್, ವ್ಯಂಗ್ಯಚಿತ್ರ ಕಲೆ, ವಾಟರ್ ಕಲರ್, ಪೇಂಟಿಂಗ್, ಅಮೂರ್ತ ಕಲಾಕೃತಿ ರಚನೆ ಹೀಗೆ ಬಹುಮುಖಿ ನೆಲೆಗಳಲ್ಲಿ ಸಾಧಕರು. ಮನೋಹರ ಆಚಾರ್ಯರ ಚಿತ್ರಗಳು ಅನೇಕ ಗ್ರಂಥಗಳಿಗೆ ಶೋಭಿತ ಕವಚಗಳಾಗಿಯೂ ರಾರಾಜಿಸಿವೆ.
ತಮ್ಮ ಕಲಾಭಿವ್ಯಕ್ತಿಯ ಎಲ್ಲ ನೆಲೆಗಳಲ್ಲೂ ವಿವಿದೆಡೆಗಳಲ್ಲಿ ತಮ್ಮ ಕಲಾಪ್ರದರ್ಶನಗಳನ್ನು ಏರ್ಪಡಿಸಿ ಕಲಾಭಿಮಾನಿಗಳು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮನೋಹರ್ ಅಚಾರ್ಯ ಅವರು ಎಂಎಜೆಡ್ ಫೌಂಡೇಷನ್ (ವಿಷುಅಲ್ ಪ್ಲಾಂಟೇಷನ್ ಮತ್ತು ರಿಸರ್ಚ್ ಸೆಂಟರ್) ಸ್ಥಾಪಿಸಿ ಕಲಾವಲಯದಲ್ಲಿ ಉನ್ನತ ಸಾಧನೆಗಳತ್ತ ಧಾಪುಗಾಲು ಹಾಕಿದ್ದಾರೆ.
ಫೇಸ್ಬುಕ್ ವಲಯದಲ್ಲಿ ನಮ್ಮ ಗೆಳೆಯರೂ ಆಗಿರುವ ಮನೋಹರ್ ಆಚಾರ್ಯರಿಗೆ ಹುಟ್ಟುಹಬ್ಬದ ಆತ್ಮೀಯ ಶುಭಹಾರೈಕೆಗಳು.
On the birth day of artiste and our friend Manohar Acharya
ಕಾಮೆಂಟ್ಗಳು