ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುರೇಖಾ


 ಸುರೇಖಾ

ಲೇಖನ: ಎನ್.ಎಸ್.ಶ್ರೀಧರ ಮೂರ್ತಿ
On Remembrance Day of actress Surekha

ಸುರೇಖಾ ಕನ್ನಡ  ಚಿತ್ರರಂಗದ  ಕಲಾವಿದೆಯಾಗಿ ಮತ್ತು ನೃತ್ಯ ಕಲಾವಿದರಾಗಿ ಹೆಸರಾಗಿದ್ದವರು.   ಇಂದು ಅವರ ಸಂಸ್ಮರಣೆ ದಿನ. 

ಸುರೇಖಾ ಮೂಲತ: ಭರತ ನಾಟ್ಯ ಮತ್ತು ಕೂಚುಪುಡಿ ನೃತ್ಯಗಾರ್ತಿ.  ಅವರು ಈ ಮೂಲಕವೇ ಚಿತ್ರರಂಗವನ್ನು ಪ್ರವೇಶಿಸಿದರು. ಭಾರತದಲ್ಲೆಡೆ ಮಾತ್ರವಲ್ಲದೆ ಲಂಡನ್, ಪ್ಯಾರಿಸ್, ಮಾಸ್ಕೋ, ತಾಷ್ಕಂಟ್ ಸೇರಿದಂತೆ ಹಲವು ವಿದೇಶಿ ತಾಣಗಲ್ಲಿಯೂ ಅವರು ನೃತ್ಯ ಪ್ರದರ್ಶನ ನೀಡಿ ಮನ್ನಣೆ ಪಡೆದಿದ್ದರು. ಜಾಗತಿಕವಾಗಿ ಕೂಡ ಅವರಿಗೆ ಹಲವು ಅಭಿಮಾನಿಗಳಿದ್ದಾರೆ. 

ಡಾ.ರಾಜ್ ಕುಮಾರ್ ಅವರ ಅಭಿನಯದ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ   ಸುರೇಖಾ ಅವರು ಅಪರೇಷನ್ ಜಾಕ್ ಪಾಟ್ , ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮೊದಲಾದ ಚಿತ್ರಗಳ ವಿಶಿಷ್ಟ ಪಾತ್ರಗಳ ಮೂಲಕ ಗಮನ ಸೆಳೆದವರು. ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಅಲೆಮನೆ, ನಾಗರ ಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ ಮೊದಲಾದವು ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡ ಚಿತ್ರಗಳು. ಒಟ್ಟು 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ಸುರೇಖಾ  ‘ಮಾಯಾ ಮನುಷ್ಯ’  ಮತ್ತು ‘ನಾನು ಬಾಳಬೇಕು’  ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ  ಅಭಿನಯಿಸಿದ್ದರು. ಕೆ.ಬಾಲಚಂದರ್ ಅವರ ‘ನಾನು ಅವನಿಲ್ಲೈ’ ಚಿತ್ರದಲ್ಲಿ ನಾಯಕಿಯಾಗಿ ಅವರು ನೀಡಿದ ಅಭಿನಯ ಅವಿಸ್ಮರಣೀಯ. 

ಸುರೇಖಾ 2021ರ ಜೂನ್ 5ರಂದು ನಿಧನರಾದರು.  ಸುರೇಖಾ ಅವರಿಗೆ 2021 ವರ್ಷದ  ಫೆಬ್ರವರಿ 13ರಂದು  ಅವರಿಗೆ  ಪ್ರತಿಷ್ಟಿತ  ಎಸ್.ಪಿ.ವರದರಾಜ್  ಪ್ರಶಸ್ತಿ  ನೀಡಿ  ಗೌರವಿಸಲಾಗಿತ್ತು. 

ಲೇಖನ: ಎನ್.ಎಸ್.ಶ್ರೀಧರ ಮೂರ್ತಿ Sreedhara Murthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ