ಕೆ. ಎನ್. ಭಗವಾನ್
ಕೆ. ಎನ್. ಭಗವಾನ್
ಕೆ.ಎನ್. ಭಗವಾನ್ ಅವರು ನಾಡಿನ ಹಿರಿಯ ಬರಹಗಾರರಾಗಿ ಖ್ಯಾತರಾಗಿದ್ದಾರೆ.
ಭಗವಾನ್ ಅವರು 1942ರ ಜೂನ್ 9ರಂದು ಜನಿಸಿದರು. ಇವರ ಊರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶವಾರ. ತಂದೆ ಸಂಜೀವರಾವ್. ತಾಯಿ ವೆಂಕಟಲಕ್ಷ್ಮಮ್ಮ. ಇವರ ಶಾಲಾ ವಿದ್ಯಾಭ್ಯಾಸ ಮಧುಗಿರಿಯಲ್ಲಿ ಹಾಗೂ ಕಾಲೇಜು ವಿದ್ಯಾಭ್ಯಾಸ ತುಮಕೂರಿನಲ್ಲಿ ನಡೆಯಿತು. ಎಲೆಕ್ಟಿಕಲ್ ಇಂಜಿನಿಯರಿಂಗ್ ಡಿಪ್ಲೋಮ ಓದಿದ ಇವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಗಳಿಸಿದರು. ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಎ.ಎಂ.ಎಇ.ಎಸ್.ಐ ಪದವಿ ಹಾಗೂ ಹಿಂದಿ ರಾಷ್ಟ್ರ ಭಾಷಾ ಪದವಿಗಳನ್ನೂ ಗಳಿಸಿದರು.
ಭಗವಾನ್ ಅವರು ಮೊದಲಿಗೆ ಮೈಸೂರು ರಾಜ್ಯ ವಿದ್ಯುಚ್ಚಕ್ತಿ ಮಂಡಲಿಯಲ್ಲಿ ಸೂಪರವೈಸರ್ ಆಗಿ 2 ವರ್ಷ ಭದ್ರಾವತಿಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಹೆಚ್.ಎ.ಎಲ್ ನಲ್ಲಿ 36 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸೀನಿಯರ್ ಮೇನೇಜರ್ ಆಗಿ ನಿವೃತ್ತರಾದರು. ವೃತ್ತಿ ಜೀವನದಲ್ಲಿ ಎರಡು ಬಾರಿ ಇಂಗ್ಲೆಂಡಿಗೆ (1984, 1999ರಲ್ಲಿ) ಭೇಟಿ ನೀಡಿದ್ದ ಭಗವಾನ್ ಅವರು ಲಂಡನ್, ಸೌಥಾಂಪ್ಟನ್, ಡೆರ್ಬಿ, ಬ್ರಿಸ್ಟಲ್, ಈಸ್ಟ್ ಕಿಲ್ ಬ್ರೈಟ್ ಮುಂತಾದ ಸ್ಥಳಗಳನ್ನು ಸಂದರ್ಶಿಸಿದ್ದರು.
ಭಗವಾನ್ ಅವರು ಸಾಹಿತ್ಯ ಕ್ಷೇತ್ರದ ಬಹುಪ್ರಕಾರಗಳಲ್ಲಿ ಅನುಪಮ ಕೃಷಿ ಮಾಡಿರುವ ವಿವರಗಳು ಇಂತಿವೆ:
ಕಥಾ ಸಂಕಲನಗಳು: ಕಥಾ ಚೈತ್ರ, ಆಷಾಢದ ಮಳೆ, ಆಕಾಶಬುಟ್ಟಿ ಮತ್ತು ಏಣಿ, ನೀಲ ನಕ್ಷತ್ರ, ನಾಲ್ಕು
ದಶಕದ ಕಥೆಗಳು, ಸಂಜೆ ಐದರ ಮಳೆ, ಅಂಗಳದ ಡೇರೆ ಹೂ.
ಪ್ರಬಂಧ ಸಂಕಲನಗಳು: ಕಾರ್ಖಾನೆ ಚಿತ್ರಗಳು, ಸ್ವಲ್ಪ ಪೆನ್ ಕೊಡ್ತೀರಾ?, ಪೋಡಿಯಂ ಎಂಬ ನುಡಿಕಟ್ಟೆ, ವೃತ್ತಿಬದುಕಿನ ಪ್ರಸಂಗಗಳು, ನಾಳೆಗಳನ್ನು ನಂಬಬಹುದೇ?
ವ್ಯಕ್ತಿ ಚಿತ್ರಗಳು: ವಿದ್ಯಾನಿಧಿ ಡಾ.ವಿ.ಕೃ.ಗೋಕಾಕ್, ದಿವಾನ್ ಮಿರ್ಝಾ ಇಸ್ಮಾಯಿಲ್, ಛಾಯಾಗ್ರಾಹಕ ವಿಕೆಮೂರ್ತಿ, ಶ್ರೀಕೃಷ್ಣದೇವರಾಯ, ನಾಟಕರತ್ನ ಗುಬ್ಬಿ ವೀರಣ್ಣ, ಯದುರಾಯ,.ಗುಬ್ಬಿ ವೀರಣ್ಣ, ಟಿಪಿಕಲ್ ಕೈಲಾಸಂ.
ತಂತ್ರಜ್ಞಾನ: ಕಂಪನ ಮತ್ತು ಶಬ್ದಮಾಪನ.
ಇಂಗ್ಲಿಷಿನಿಂದ ಕನ್ನಡಕ್ಕೆ: ಯಂತ್ರಜ್ಞ (Machinist), ಸಂಪೂರ್ಣ ಪರಿವರ್ತನೆ (Lean manufacturing), ರಾಷ್ಟ್ರೀಯ ಜಲನೀತಿ ಚೌಕಟ್ಟು (National water policy frame work).
ಮಾಹಿತಿ: ಉದ್ಯಮ ಕರ್ನಾಟಕ
ನಾಟಕ: ಯದು ವಿಜಯ
ಕವನ ಸಂಕಲನ: ಮನದಿಂದ ಮುಗಿಲಿಗೆ
ಕಾಮಸೂತ್ರ: ಶೃಂಗಾರ ಮಿಲನ
ಪ್ರವಾಸ ಸಂಕಲನ: ಕಂಡಷ್ಟು ಜಗತ್ತು, ಅಬುಬೆಟ್ಟದಿಂದ. ಆಂಬರ್ ಕೋಟೆಯವರೆಗೆ
ಪುಸ್ತಕ ವಿಮರ್ಶೆ: ನನ್ನ ಓದಿನ ಪರೀಕ್ಷೆ
ಗ್ರಾಮೀಣ ಬದುಕು: ನೆನಪಿನ ನನ್ನೂರು
ಸಂಪಾದಿತ: ಕೋಲ್ಮಿಂಚು, ಕವಿಶೈಲ, ಕಲಾ ಸಂಪನ್ನ
ಕ್ವಿಜ್: ಕನ್ನಡ ಪ್ರಶ್ನೋತ್ತರ ಪದವಿಹಾರ
ಚಲನಚಿತ್ರ: ಚಂದನವನದಲ್ಲೊಂದು ಚಾರಣ, ಮೂರು ನಕ್ಷತ್ರಗಳು ( ಸಿನೆಮಾ ತಾರೆಯರ ಕುರಿತಾದ ಕೃತಿ)
ಆತ್ಮಕಥೆ: ತೆರೆದ ಬದುಕಿನ ಪುಟಗಳು, ಬದುಕುಮೆಲುಕು
ಕಾದಂಬರಿ: ಸಂಪಾಜೆ ಮೆಸ್
ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ( ಕನ್ನಡದಿಂದ ಹಿಂದಿಗೆ ಅನುವಾದ)
ಭಗವಾನ್ ಅವರಿಗೆ ಅನೇಕ ಬಹುಮಾನ ಮತ್ತು ಪ್ರಶಸ್ತಿ ಗೌರವಗಳು ಸಂದಿದ್ದು ವಿವರಗಳು ಇಂತಿವೆ:
ಪ್ರಜಾವಾಣಿ: ದೀಪಾವಳಿ ಕಥಾಸ್ಪರ್ಧೆ - 1966 (2ನೇ ಬಹುಮಾನ);
ಕರ್ಮವೀರ: ದೀಪಾವಳಿ ಕಥಾಸ್ಪರ್ಧೆ - 1994 (2ನೇ ಬಹುಮಾನ);
ವಿಕ್ರಮ: ವಿಜಯದಶಮಿ ಕಥಾಸ್ಪರ್ಧೆ - 2004 (3ನೇ ಬಹುಮಾನ);
ಕನ್ನಡ ಪ್ರಭ: ಅಂಕಿತ ಯುಗಾದಿ ಪ್ರಬಂಧ ಸ್ಪರ್ಧೆ-2012 (2ನೇ ಬಹುಮಾನ);
ಗೊರೂರು ಸಾಹಿತ್ಯ ಪ್ರಶಸ್ತಿ: ಪ್ರಬ೦ಧ-2003 (ಕಾರ್ಖಾನೆ ಚಿತ್ರಗಳು);
ರಾಮ್ ಜಾಧವ್ ಗ್ರಂಥ ಪ್ರಶಸ್ತಿ-2011 (ಉದ್ಯಮ ಕರ್ನಾಟಕ);
ಕನ್ನಡ ಸಾಹಿತ್ಯ ಪರಿಷತ್ತು: ನಾಟಕ ದತ್ತಿ ಪ್ರಶಸ್ತಿ-2011 (ಯದು ವಿಜಯ);
ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು: ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ 2018;
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರವಾಸ ಸಾಹಿತ್ಯ ದತ್ತಿ ಪ್ರಶಸ್ತಿ (ಅಬೂ ಬೆಟ್ಟದಿಂದ ಅಂಬರ್ ಕೋಟೆಯವರೆಗೆ 2024).
ಹಿರಿಯ ಸಾಧಕರೂ, ಆತ್ಮೀಯರೂ ಆದ ಕೆ.ಎನ್. ಭಗವಾನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bhagavan Narayan Sir

ಕಾಮೆಂಟ್‌ಗಳು