ಶಂಕರ ಕಡಕುಂಟ್ಲಾ
ಶಂಕರ ಕಡಕುಂಟ್ಲಾ
ಶಂಕರ ಕಡಕುಂಟ್ಲಾ ಕಲಾವಿದರಾಗಿ ಹೆಸರಾಗಿದ್ದಾರೆ.
ಶಂಕರ ಕಡಕುಂಟ್ಲಾ 1978ರ ಜುಲೈ 22ರಂದು ಜನಿಸಿದರು. ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಆರ್ಟ್ ಮಾಸ್ಟರ್ ಡಿಪ್ಲೋಮಾ, ಗ್ರಾಜುಯೇಟ್ ಡಿಪ್ಲೂಮಾ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬ್ಯಾಚಲರ್ ಅಫ್ ಫೈನ್ ಆರ್ಟ್ಸ್ ಪದವಿ ಗಳಿಸಿದ್ದಾರೆ.
ಶಂಕರ ಕಡಕುಂಟ್ಲಾ ಅವರ ಕಲಾಕೃತಿಗಳು ದೇಶದೆಲ್ಲೆಡೆಯ ಕಲಾಮಹೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ್ದು, ಅನೇಕ ಕಲಾಪ್ರೇಮಿಗಳ ಸಂಗ್ರಹಗಳಲ್ಲಿ ಸೇರಿವೆ.
ಶಂಕರ ಕಡಕುಂಟ್ಲಾ ಅವರಿಗೆ ಸಂಸ್ಕೃತಿ ಸಂಭ್ರಮ ಪುರಸ್ಕಾರ, ಗಂಗೂಬಾಯಿ ಹಾನಗಲ್ ಪ್ರತಿಷ್ಠಾನ ಕಲಾ ಪುರಸ್ಕಾರ, 2010ರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಶಂಕರ ಕಡಕುಂಟ್ಲಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shankar Kadakuntla
ಕಾಮೆಂಟ್ಗಳು