ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾ ನಂ ಚಂದ್ರಶೇಖರ್

ರಾ ನಂ ಚಂದ್ರಶೇಖರ್

ರಾ ನಂ ಚಂದ್ರಶೇಖರ್ ಕಳೆದ ಸುಮಾರು 5 ದಶಕಗಳಿಂದ ಕನ್ನಡದ ಕೆಲಸದಲ್ಲಿ ನಿಷ್ಠಾವಂತ ಸೇವೆಯಲ್ಲಿ  ತೊಡಗಿರುವ ನಿಸ್ವಾರ್ಥ ಸೇನಾನಿ.  ಅವರು ಕನ್ನಡ ಪರವಾದ ಎಲ್ಲ ಹೋರಾಟಗಳಲ್ಲಿ, ಸಕ್ರಿಯವಾಗಿ ಪಾಲ್ಗೊಂಡಿದ್ದು, ಸದಾ ಕಾಲ ತಮ್ಮ ಕನ್ನಡ ಪರವಾದ ಕಾಳಜಿಯ ಕಿಚ್ಚನ್ನು ಕಾಪಾಡಿಕೊಂಡು ಬಂದಿರುವ ಅಪೂರ್ವ ಜೀವಿ.  ಕನ್ನಡ ಶಕ್ತಿ ಕೇಂದ್ರದೊಂದಿಗೆ ವಿವಿಧ ತಲೆಮಾರುಗಳ ಕೊಂಡಿಯಾಗಿ ನಿರಂತರವಾಗಿ ಸಾಗಿಬಂದಿರುವ ಕನ್ನಡದ ಪ್ರೀತಿಯ ಸಹೃದಯಿ.

ರಾನಂ ಅವರು ಕನ್ನಡ, ಕನ್ನಡಿಗ, ಕರ್ನಾಟಕದ ಕುರಿತಾದ ನೆಲೆ, ಜನ ಜೀವನ, ಉದ್ಯೋಗ, ಸಂಸ್ಕೃತಿ, ಹೋರಾಟ, ಹೊಸ ದಿಕ್ಕಿನಲ್ಲಿ ಬದುಕಿನ ನಿಟ್ಟಿನಲ್ಲಿ ಕನ್ನಡದ  ಅಳವಡಿಕೆ, ಇವುಗಳ ಕುರಿತಾಗಿ ಬಹುರೂಪಿಯಾದ ಕೃತಿಗಳನ್ನು ನಾಡಿಗಾಗಿ ಸಂಪಾದನೆ ಮಾಡಿಕೊಟ್ಟಿದ್ದಾರೆ. 

37 ವರ್ಷಗಳ ಎಚ್ಎಎಲ್ ಸಂಸ್ಥೆಗಾಗಿ ಸೇವೆ ಸಲ್ಲಿಸಿ ತಮ್ಮ ಬದುಕನ್ನು ನಡೆಸಿದ ರಾನಂ, ತಮ್ಮ ಕನ್ನಡದ ಸೇವೆಗಾಗಿ ಎಲ್ಲೂ ಎಂದೂ ಏನನ್ನೂ ಸ್ವೀಕರಿಸಿದೆ, ಸಂತರಂತ ಸ್ವಭಾವದ ಸಹೃದಯಿ.

ಸುಮಾರು 45 ವರ್ಷಗಳ ಹಿಂದೆ ಚಿದಾನಂದಮೂರ್ತಿ ಅವರ ಜೊತೆಗೆ ಪರಿಚಯವಾದ ರಾನಂ ಅವರ ಆಪ್ತತೆಯ ಭಾಗ್ಯ ಈಗಲೂ ನನಗೆ ಮುಂದುವರೆದಿದೆ.  

ಆತ್ಮೀಯರಾದ ಅಪ್ರತಿಮ ಕನ್ನಡ ಕಳಕಳಿಯ ರಾ ನಂ ಚಂದ್ರಶೇಖರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.
 
Ra Nam Chandrashekar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!