ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮೀ ಸೆಹಗಲ್


 ಲಕ್ಷ್ಮೀ ಸೆಹಗಲ್


ಲಕ್ಷ್ಮೀ ಸೆಹಗಲ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಮಹಿಳೆ. 97 ವರ್ಷ ಬದುಕಿದ್ದು 2012ರ ಜುಲೈ 23ರಂದು ನಿಧನರಾದ ಅವರ ಸಂಸ್ಮರಣಾ ದಿನವಿದು.  ಅಷ್ಟೊಂದು ಓದಿ ಸುಖದಿಂದಿದ್ದ ಆ ಜೀವ ದೇಶಕ್ಕಾಗಿ ದುಡಿದು ಕಷ್ಟಗಳನ್ನನುಭವಿಸಲು ಮುಂದಾಯಿತು.

ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ 1914ರ ಅಕ್ಟೊಬರ್ 24ರಂದು ತಮಿಳುನಾಡಿನಲ್ಲಿ ಜನಿಸಿದರು. 

ಲಕ್ಷ್ಮೀ ಅವರು ವೈದ್ಯಕೀಯ ಪದವಿ ಪಡೆದವರಾಗಿದ್ದರು.  ಭಾರತ ರಾಷ್ಟ್ರೀಯ ಸೇನೆಯ ಮಹಿಳಾ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಅವರು, ರಾಣಿ ಜಾನ್ಸಿ ರೆಜಿಮೆಂಟಿನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಪಡೆದಿದ್ದರು.  

ಸ್ವಾತಂತ್ರ್ಯಾನಂತರದಲ್ಲಿ ಕಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ಮೂಲಕ ರಾಜ್ಯಸಭೆಯನ್ನು ಪ್ರವೇಶಿಸಿದ್ದ ಲಕ್ಷ್ಮಿ ಸೆಹಗಾಲ್, ಆ ಪಕ್ಷದ ಮುಖೇನ  ಅಬ್ದುಲ್ ಕಲಾಂ ಅವರ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸಾಂಕೇತಿಕ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.   

1998ರ ವರ್ಷದಲ್ಲಿ ಲಕ್ಷ್ಮೀ ಸೆಹಗಾಲ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.  

ಲಕ್ಹ್ಮೀ ಸೆಹಗಲ್ ಅವರು 2012ರ ಜುಲೈ 23ರಂದು ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು.

On the death anniversary of Freedom fighter Captain Laxmi Sehgal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ