ಕುಮಾರ ನಿಜಗುಣ
ಕುಮಾರ ನಿಜಗುಣ
ಶ್ರೀ ಕುಮಾರ ನಿಜಗುಣ ಸ್ವಾಮೀಜಿ ಕನ್ನಡ ಸಾಹಿತ್ಯ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಹೆಸರಾದವರು. ನಿಜಗುಣ ಶಿವಯೋಗಿಗಳ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ.
ಕುಮಾರ ನಿಜಗುಣ ಅವರು 1933ರ ಜೂನ್ 15ರಂದು ಕೊಳ್ಳೆಗಾಲದ ಮುಳ್ಳೂರು ಗ್ರಾಮದ ಪರುವಪ್ಪ ಮತ್ತು ಪುಟ್ಟಮಲ್ಲಮ್ಮ ದಂಪತಿಗಳಿಗೆ ಕಿರಿಯ ಪುತ್ರರಾಗಿ ಜನಿಸಿದರು.
ಕುಮಾರ ನಿಜಗುಣ ಸ್ವಾಮೀಜಿಗಳಾದ ಪಿ.ಬಸವಣ್ಣನವರು ವೃತ್ತಿಯಿಂದ ವಕೀಲರಾಗಿ, ಸಂಸಾರಿಯಾಗಿ ಸಾಂಸಾರಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ-ಅನುಭವಗಳ ನಂತರ 1981ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಕುಮಾರ ನಿಜಗುಣ ಸ್ವಾಮೀಜಿ ಅವರು
ಆಧ್ಯಾತ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ನಿಜಗುಣ ಕ್ಷೇತ್ರವಾದ ಚಿಲಕವಾಡಿ ಅಥವಾ ಶಂಭುಲಿಂಗನ ಕ್ಷೇತ್ರದಲ್ಲಿ ಜನಸೇವೆ, ಸಾಹಿತ್ಯ ಸೇವೆ ಕೈಗೊಂಡಿದ್ದರು. ಚಿಲಕವಾಡಿಯಲ್ಲಿ ಶ್ರೀ ನಿಜಗುಣಾನುಭವ ಮಂಟಪ ನಿರ್ಮಿಸಿದ್ದರು.
ಕುಮಾರ ನಿಜಗುಣ ಸ್ವಾಮೀಜಿ ಅವರು, ಛಂದಸ್ಸಿನ ವಿಷಯದಲ್ಲಿ ಆಳ ಅಧ್ಯಯನ ಮಾಡಿದ್ದರು. ಹಲವು ಛಂದೋ ಆವಿಷ್ಕಾರಗಳನ್ನೂ ಮಾಡಿದ್ದರು. ಕನ್ನಡ ಮೇರು ಸಾಹಿತಿಗಳೊಂದಿಗೆ ಒಡನಾಟವನ್ನೂ ಹೊಂದಿದ್ದರು.
ಕುಮಾರ ನಿಜಗುಣ ಸ್ವಾಮೀಜಿ ಅವರು ಬೋಳು ಬಸವನ ಬೊಂತೆ, ಪಾರ್ವತಿ ಪ್ರಣಯ ಕಲಹ, ತ್ರಿಷಷ್ಟೀ ಪುರಾತನ ಸ್ತೋತ್ರ, ಶ್ರೀ ಶಿವಕುಮಾರ ಚರಿತಂ, ನಿರೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದರು.
ಕುಮಾರ ನಿಜಗುಣ ಸ್ವಾಮೀಜಿ ಅವರು 2021ರ ಜುಲೈ 20ರಂದು ನಿಧನರಾದರು.
On the birth anniversary of Sri Kumara Niaguna Swamiji
ಕಾಮೆಂಟ್‌ಗಳು