ಮಂಜಣ್ಣ
ಶ್ರೀಪಾದರಾವ್ ಮಂಜುನಾಥ್
ಅತ್ಮೀಯರಾದ ಶ್ರೀಪಾದರಾವ್ ಮಂಜುನಾಥ್ ಕನ್ನಡ ಪ್ರೇಮಿ. 'ಮಂಕುತಿಮ್ಮನ ಕಗ್ಗ'ವನ್ನು ಅವರಂತೆ ಬಾಯಿಪಾಠ ಮಾಡಿಕೊಂಡಿರವವರನ್ನು ನಾನಂತೂ ಕಾಣೆ.
ಈ ಲೋಕದಲ್ಲಿ ನಾವೆಲ್ಲಾ, ನಾವಾಯಿತು ನಮ್ಮ ಬದುಕಾಯ್ತು ಎಂದಿರಬೇಕಾದರೆ, ಮತ್ತೊಬ್ಬರು ಕಷ್ಟದಲ್ಲಿರುವಾಗ ಅವರಿಗೋಸ್ಕರ ಓಡಿಯಾಡುವುದು, ತಮ್ಮದೇ ಹಣ ಖರ್ಚು ಮಾಡಿ ಸಾಹಿತ್ಯಕ ಕಾರ್ಯಕ್ರಮಗಳೇರ್ಪಡಿಸುವುದು, ಎಲ್ಲಿ ಕನ್ನಡ ಕಾರ್ಯಕ್ರಮವಿದ್ದರೂ, ಎಲ್ಲಿ ಸ್ನೇಹ ಸಂಗಮವಿದ್ದರೂ ಮೊದಲಿಗೇ ಬಂದು ಕೊನೆಯವರೆಗಿದ್ದು ಅಗತ್ಯವಿದ್ದೆಡೆ ತಮ್ಮ ಶ್ರಮದಾನ ನೀಡಿ ಎಲ್ಲರೊಳಗೊಂದಾಗಿರುವ ಈ 'ಮಂಜುತಿಮ್ಮ' ಶ್ರೀಪಾದರಾಯ ಮಂಜುನಾಥರಿಗೆ ಸಾಠಿಯುಂಟೆ.
ಆತ್ಮೀಯ ಹಿರಿಯ ಗೆಳೆಯರಾದ ಶ್ರೀಪಾದರಾವ್ ಮಂಜುನಾಥರಿಗೆ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
🎂🎉🍰🎁🍦💐😊
Happy birthday Sripada Rao Manjunath
ಕಾಮೆಂಟ್‌ಗಳು