ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿತ್ರಾ ಶೆಣೈ


 ಚಿತ್ರಾ ಶೆಣೈ 


ಚಿತ್ರಾ ಶೆಣೈ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಕಂಡುಬರುವ ಪ್ರಮುಖ ಕಲಾವಿದೆ.  ಇಷ್ಟು ಸುದೀರ್ಘ ಕಾಲದಿಂದ ಹಲವು ನೂರು ಚಿತ್ರಗಳು ಮತ್ತು ಕಿರುತೆರೆಯ ಕಥಾನಕಗಳಲ್ಲಿ ಇದ್ದರೂ ತಮ್ಮ ಉತ್ಸಾಹ ಮತ್ತು ಕಾಂತಿಯನ್ನು ಉಳಿಸಿಕೊಂಡಿರುವ ತೇಜಸ್ವಿ ಕಲಾವಿದೆ.

ಚಿತ್ರಾ 1978ರ ಜುಲೈ 24ರಂದು ಹಾಸನದಲ್ಲಿ ಜನಿಸಿದರು.  ತಂದೆ ಎಂ. ಕೆ. ವಿನಾಯಕ್.  ತಾಯಿ ಸರಸ್ವತಿ.  ಚಿತ್ರಾ ಅವರು ಹೋಮ್ ಸೈನ್ಸ್ ಪದವೀಧರೆ.  ಕಿರುತೆರೆ ಕಾರ್ಯಕ್ರಮ ನಿರ್ಮಾಣ ಕ್ಷೇತ್ರದಲ್ಲಿ ಹೆಸರಾಗಿರುವ ಗುರುದಾಸ್ ಶೆಣೈ ಇವರ ಪತಿ.  ಈ ದಂಪತಿಗಳು ದಕ್ಷಿಣ್ ವಿಡಿಯೋಟೆಕ್ ಮತ್ತು ಗುಡ್ ಕಂಪನಿ ಪ್ರೊಡಕ್ಷನ್ಸ್ ಎಂಬ ಕಿರುತೆರೆ ನಿರ್ಮಾಣ ಸಂಸ್ಥೆಗಳನ್ನೂ ನಿರ್ವಹಿಸುತ್ತಿದ್ದಾರೆ.

ಓದುವ ದಿನಗಳಲ್ಲೇ ಚಲನಚಿತ್ರದಲ್ಲಿ ನಟಿಸಿದ ಚಿತ್ರಾ ಶೆಣೈ, ಮುಂದೆ ನಟಿಸಿದ ಧಾರಾವಾಹಿಗಳು ಮತ್ತು ಚಲನಚಿತ್ರಗಳು ಹಲವು ನೂರು.  ಒಂದು ರೀತಿಯಲ್ಲಿ ಈಕೆ ಚಿತ್ರರಂಗದ 'ಯುವಕಿ ತಾಯಿ'.  ಕನ್ನಡದ ಬಹುತೇಕ ನಟ ನಟಿಯರಿಗೆ ಇವರು ಕಳೆದ ಎರಡು ದಶಕಗಳಲ್ಲಿ ತಾಯಿಯಾಗಿ ನಟಿಸಿದ್ದಾರೆ.  ಅವರ ತೆರೆಯ ಮೇಲಿನ ಉಪಸ್ಥಿತಿ ಆಕರ್ಷಕವೆನಿಸುವಂತದ್ದು.

ಕನ್ನಡವಲ್ಲದೆ ತುಳು, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರ ಮತ್ತು ಕಿರುತೆರೆಯ ಲೋಕದಲ್ಲೂ ಇವರಿಗೆ ಬೇಡಿಕೆ ಇದೆ.

ಹಸನ್ಮುಖಿ ಕಲಾವಿದೆ ಚಿತ್ರಾ ಶೆಣೈ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

On the birthday of smiling face Chitra Shenoy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ