ಎಂ. ಆರ್. ದತ್ತಾತ್ರಿ
ಎಂ. ಆರ್. ದತ್ತಾತ್ರಿ
ಎಂ. ಆರ್. ದತ್ತಾತ್ರಿ ಕನ್ನಡ ಬರಹಲೋಕದಲ್ಲಿ ಕಂಗೊಳಿಸುತ್ತಿರುವ ವಿಶಿಷ್ಟ ಪ್ರತಿಭೆ.
ದತ್ತಾತ್ರಿ ಅವರ ಜನ್ಮದಿನ ಆಗಸ್ಟ್ 24. ಮೂಲತಃ ಚಿಕ್ಕಮಗಳೂರಿನವರಾದ ದತ್ತಾತ್ರಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ, ಬೆಂಗಳೂರು, ಸ್ಯಾನ್‌ಫ್ರಾನ್ಸಿಸ್ಕೊ, ಲಾಸ್ ಏಂಜಲೀಸ್ ಹೀಗೆ ಹಲವೆಡೆ ವೃತ್ತಿಮಾಡಿ ಪ್ರಸಕ್ತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗ ವೃತ್ತಿಯ ಜೊತೆ ಜೊತೆಗೆ ಸಾಫ್ಟ್ ಅಂತರಂಗದಿಂದ ಕೂಡಿದ ಸಾಹಿತ್ಯ ಪ್ರವೃತ್ತಿಯನ್ನು ವಿಸ್ತೃತಗೊಳಿಸುತ್ತಾ ಸಾಗಿದ್ದಾರೆ.
ಎಂ.ಆರ್. ದತ್ತಾತ್ರಿ ಅಂಕಣಕಾರರಾಗಿ, ಕವಿಯಾಗಿ, ಕಾದಂಬರಿಕಾರರಾಗಿ ಮತ್ತು ಹಲವು ವಿಷಯಗಳ ವಿಶಿಷ್ಟ ಚಿಂತಕರಾಗಿ ತಮ್ಮ ಬರವಣಿಗೆಯನ್ನು ಮೂಡಿಸುತ್ತಾ ಬಂದಿದ್ದಾರೆ. ದತ್ತಾತ್ರಿ ಅವರ ಪ್ರಕಟಿತ ಕೃತಿಗಳಲ್ಲಿ 'ಅಲೆಮಾರಿ ಕನಸುಗಳು' ಎಂಬ ಕಾವ್ಯ ಸಂಕಲನ; 'ಪೂರ್ವ ಪಶ್ಚಿಮ' ಎಂಬ ಅಂಕಣ ಬರಹಗಳ ಸಂಕಲನ; 'ಮಥಿಸಿದಷ್ಟೂ ಮಾತು' ಎಂಬ ತ್ರಿವೇಣಿ ಶ್ರೀನಿವಾಸ್ ರಾವ್ ಅವರೊಡನೆ ಸಂಪಾದಿಸಿದ ಕೃತಿ; 'ಮುಸುಕು ಬೆಟ್ಟದ ದಾರಿ', 'ದ್ವೀಪವ ಬಯಸಿ', ‘ಒಂದೊಂದು ತಲೆಗೂ ಒಂದೊಂದು ಬೆಲೆ', 'ತಾರಾಬಾಯಿಯ ಪತ್ರ', 'ಸರ್ಪಭ್ರಮೆ' ಎಂಬ ಕಾದಂಬರಿಗಳು ಸೇರಿವೆ. 'ತಾರಾಬಾಯಿಯ ಪತ್ರ' ತೆಲುಗು ಭಾಷೆಗೆ ತರ್ಜುಮೆಗೊಂಡಿದೆ.
ಎಂ.ಆರ್. ದತ್ತಾತ್ರಿ ಅವರ ಪೂರ್ವ ಪಶ್ಚಿಮ ಸಂಕಲನಕ್ಕೆ ಡಾ. ಹಾ.ಮಾ. ನಾಯಕ ಪ್ರಶಸ್ತಿ, 'ದ್ವೀಪವ ಬಯಸಿ' ಕಾದಂಬರಿಗೆ ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ, ‘ತಾರಾಬಾಯಿಯ ಪತ್ರ’ ಕಾದಂಬರಿಗೆ ಮಾಸ್ತಿ ಪ್ರಶಸ್ತಿ, ಹಾಗೂ ಸಾಹಿತ್ಯ ಪ್ರತಿಭೆಗೆ ಸಲ್ಲುವ ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
ಎಂ. ಆರ್. ದತ್ತಾತ್ರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕಶುಭಹಾರೈಕೆಗಳು.
Happy birthday M R Dattathri Sir 🌷🙏🌷
ಕಾಮೆಂಟ್‌ಗಳು