ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾರ್ತಾಂಡ ವರ್ಮ


 ಮಾರ್ತಾಂಡ ವರ್ಮ


ಆಧುನಿಕ ಟ್ರಾವಂಕೂರು ಅಥವಾ ತಿರುವಾಂಕೂರಿನ ಇತಿಹಾಸವು ವೇನಾಡು ಸಾಮ್ರಾಜ್ಯದ ಉತ್ತರಾಧಿಕಾರತ್ವವನ್ನು ಪಡೆದಿದ್ದ ಹಾಗೂ 1729–1758ರ ಅವಧಿಯ ತನ್ನ ಆಳ್ವಿಕೆಯಲ್ಲಿ ತಿರುವಾಂಕೂರು ರಾಜ್ಯವನ್ನಾಗಿ ವಿಸ್ತರಿಸಿದ್ದ ಮಾರ್ತಾಂಡ ವರ್ಮನೊಂದಿಗೆ ಆರಂಭವಾಗುತ್ತದೆ. 

ಕನ್ಯಾಕುಮಾರಿ ಜಿಲ್ಲೆಯ ನಾಗರ್‌‌ಕೋಯಿಲ್‌‌ ಸಮೀಪದ ಪದ್ಮನಾಭಪುರಮ್, ‌‌ ನಂತರ ತಿರುವನಂತಪುರಮ್‌‌ಗೆ ರಾಜಧಾನಿಯನ್ನು ಸ್ಥಳಾಂತರಿಸುವ ಮೊದಲು ತಿರುವಾಂಕೂರು ರಾಜ್ಯದ ರಾಜಧಾನಿಯಾಗಿತ್ತು. ತಿರುವಾಂಕೂರು ಚಕ್ರಾಧಿಪತ್ಯದ ಮತ್ತೂ ಗಮನ ಸೆಳೆವ ವ್ಯಕ್ತಿಗಳಲ್ಲಿ ವೇಲು ಥಂಪಿ ದಲವಾ ಮತ್ತು ಉದಯ ಕುರುಪ್‌‌(ಪದ ಕುರುಪ್‌‌) ಸೇರಿದ್ದರು.

ಮಾರ್ತಾಂಡ ವರ್ಮ ದಕ್ಷಿಣದಲ್ಲಿನ ಕನ್ಯಾಕುಮಾರಿಯಿಂದ ಉತ್ತರದಲ್ಲಿರುವ ಇಡಪ್ಪಳ್ಳಿಯವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದ ಶಕ್ತಿಶಾಲಿ ಅರಸರಾಗಿದ್ದರು. ಅವರು ಬ್ರಿಟಿಷ್‌‌ ಈಸ್ಟ್‌ ಇಂಡಿಯಾ ಕಂಪೆನಿಯೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದರಲ್ಲದೇ ಅವರ ಸಹಾಯದಿಂದ ಎಂಟು ಮಂದಿ ಊಳಿಗಮಾನ್ಯ ಜಮೀನ್ದಾರರ ಅಧಿಕಾರವನ್ನು ಮೊಟಕುಗೊಳಿಸಿ (ಎಟ್ಟುವೀಟಿಲ್‌‌ ಪಿಲ್ಲಾಮರ್‌‌) ಹಿಂದಿನ ಅರಸ ರಾಜಾ ರಾಮ ವರ್ಮರ ಥಂಪಿ ಪುತ್ರರನ್ನು ಬೆಂಬಲಿಸಿದ ಎತ್ತಾರ ಯೋಗಮ್‌‌ನನ್ನು ಸೋಲಿಸಿದರು, ಇದಕ್ಕೆ ಕಾರಣ ತಿರುವಾಂಕೂರು ರಾಜ ಮನೆತನವು ನಾಯರ್‌‌‌ "ಮರುಮಕ್ಕಥಾಯಮ್‌‌" ವ್ಯವಸ್ಥೆಯನ್ನು ಪಾಲಿಸುತ್ತಿದ್ದುದರಿಂದ ಉತ್ತರಾಧಿಕಾರವು ಅರಸರ ಮಕ್ಕಳ ಬದಲಿಗೆ ಅವರ ಸಹೋದರಿಯ ಮಕ್ಕಳಿಗೆ ಸಿಗುತ್ತಿತ್ತು. ಆಗ ಅವಿಚ್ಛಿನ್ನವಾಗಿ ನಡೆದ ಕದನಗಳಲ್ಲಿ ಅವರು ಅತ್ತಿಂಗಲ್‌‌, ಕೊಲ್ಲಂ, ಕಾಯಮ್‌ಕುಲಮ್‌‌, ಕೊಟ್ಟಾರಾಕಾರ, ಕೊಟ್ಟಾಯಮ್‌‌, ಚಂಗನಾಸ್ಸೆರಿ, ಮೀನಾಚಿಲ್, ಪೂಂಜಾರ್‌‌ ಮತ್ತು ಅಂಬಾಲಾಪುಳ ಸೇರಿದಂತೆ ಕೊಚ್ಚಿನ್‌‌ನವರೆಗೆ ಎಲ್ಲಾ ಪ್ರದೇಶಗಳ ರಾಜರುಗಳನ್ನು ಸೋಲಿಸುತ್ತಾ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಾ ಹೋದರು. ಅವರು ತಿರುವಾಂಕೂರು–ಡಚ್ಚರುಗಳ ನಡುವೆ ನಡೆದ (1739–1753) ಯುದ್ಧದ ಅವಧಿಯಲ್ಲಿ ಡಚ್‌‌ ಈಸ್ಟ್‌‌ ಇಂಡಿಯಾ ಕಂಪೆನಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು.  ಇವುಗಳಲ್ಲಿ ಅತಿ ನಿರ್ಣಾಯಕವಾದ ಕದನವೆಂದರೆ ಕೊಲಾಚೆಲ್‌‌ನ ಕದನವಾಗಿದ್ದು (10 ಆಗಸ್ಟ್‌ 1741) ಅದರಲ್ಲಿ ಡಚ್‌‌ ಉನ್ನತ ನೌಕಾಧಿಪತಿ ಯುಸ್ಟಾಚಿಯಸ್‌‌ ಡೆ ಲೆನ್ನಾಯ್‌‌ರನ್ನು ಸೆರೆಹಿಡಿಯಲಾಗಿತ್ತು. 

ಕ್ರಿ.‍ಶ. 1750ರ ಜನವರಿ 3ರಂದು ಅವರು ತನ್ನ ಸಾಮ್ರಾಜ್ಯವನ್ನು ತಮ್ಮ ರಕ್ಷಕ ಟ್ರಿವೇಂಡ್ರಮ್‌‌ನ ಶ್ರೀ ಪದ್ಮನಾಭ ದೇವರಿಗೆ ಸಮರ್ಪಿಸಿದರು (ತ್ರಿಪ್ಪಾದಿದಾನಮ್‌‌).  ಇದಾದ ನಂತರದಿಂದ ತಿರುವಾಂಕೂರಿನ ಅರಸರುಗಳೆಲ್ಲಾ ಸಾಮ್ರಾಜ್ಯವನ್ನು ಶ್ರೀ ಪದ್ಮನಾಭ (ಪದ್ಮನಾಭದಾಸನ್‌‌) ದೇವರ ಸೇವಕರಾಗಿ ಆಳ್ವಿಕೆ ನಡೆಸಿದರು. ಡಚ್ಚರು ಮಹಾರಾಜನೊಂದಿಗೆ ಒಂದು ಶಾಂತಿ ಒಪ್ಪಂದಕ್ಕೆ 1753ರಲ್ಲಿ ಹಾಕಿದರು. ಪದಚ್ಯುತಗೊಂಡ ಅರಸರುಗಳ ಒಕ್ಕೂಟ ಮತ್ತು ಕೊಚ್ಚಿನ್‌‌ನ ರಾಜರನ್ನು ಸೋಲಿಸಿದ ಅಂಬಾಲಾಪುಝಾ (3 ಜನವರಿ 1754) ಕದನದ ನಂತರ ಮಾರ್ತಾಂಡ ವರ್ಮರು ತಮ್ಮ ಆಳ್ವಿಕೆಗಿದ್ದ ಎಲ್ಲಾ ವಿರೋಧಗಳನ್ನು ತೊಡೆದುಹಾಕಿದ್ದರು. 

ತಿರುವಾಂಕೂರು ಮತ್ತು ಕೊಚ್ಚಿನ್‌‌ ರಾಜ್ಯಗಳ ನಡುವೆ ಒಂದು ಉತ್ತರ ಗಡಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದ ಒಪ್ಪಂದಕ್ಕೆ 1757ರಲ್ಲಿ ಬರಲಾಯಿತು. ಅವರು ತೆರಿಗೆ ವ್ಯವಸ್ಥೆಯನ್ನು ಸುಸಂಘಟಿಸಿದ್ದರು ಹಾಗೂ ಅನೇಕ ನೀರಾವರಿ ಕಟ್ಟೋಣಗಳನ್ನು ಕಟ್ಟಿಸಿದ್ದರು. ಪ್ರಸಿದ್ಧ ಕೊಲಾಚೆಲ್‌‌ನ ಕದನದಲ್ಲಿ ಯುದ್ಧ ಕೈದಿಯನ್ನಾಗಿ ಸೆರೆಹಿಡಿಯಲಾಗಿದ್ದ ನೌಕಾಧಿಪತಿ ಯುಸ್ಟಾಚಿಯಸ್‌‌ ಡೆ ಲೆನ್ನಾಯ್‌‌ನನ್ನು ಹಿರಿಯ ಉನ್ನತ ನೌಕಾಧಿಪತಿ ಎಂಬ ಸ್ಥಾನಕ್ಕೆ ನೇಮಿಸಿದರಲ್ಲದೇ ಅವರು ಮದ್ದುಗುಂಡುಗಳನ್ನು ಹಾಗೂ ಫಿರಂಗಿದಳಗಳನ್ನು ಪರಿಚಯಿಸುವ ಮೂಲಕ ತಿರುವಾಂಕೂರು ಸೇನೆಯನ್ನು ಆಧುನಿಕರಿಸಿದರು. ಅಯ್ಯಪ್ಪನ್‌‌ ಮಾರ್ತಾಂಡ ಪಿಳ್ಳೈರವರು "ಸರ್ವಾಧಿಕಾರಿಕರ್‌‌" (ನಾಯರ್‌‌‌ ಪಟ್ಟಾಳಮ್‌ ಸೇನೆಯ ಅಧಿನಾಯಕ) ಆಗಿ ಸೇವೆ ಸಲ್ಲಿಸಿದ್ದರು. ಮಾರ್ತಾಂಡ ವರ್ಮರು ಚೆಂಪಕ ರಾಮನ್‌‌ ‌ನಂತಹಾ ಬಿರುದುಗಳನ್ನೂ ಹಾಗೂ ಎಟ್ಟಾರಯುಮ್‌‌ ಕೊಪ್ಪುಮ್‌‌ ನಂತಹಾ ಉಪಾಧಿಗಳನ್ನು ಪರಿಚಯಿಸಿ ಎಟ್ಟುವೀಟಿಲ್‌‌ ಪಿಲ್ಲಾಮರ್‌‌ನೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ತನ್ನ ಮೇಲಿದ್ದ ನಿಷ್ಠೆಯನ್ನು ಸಡಿಲಿಸದೇ ಇದ್ದುದಕ್ಕಾಗಿ ಜಮೀನ್ದಾರರುಗಳು ಹಾಗೂ ಆತನ ಸಂಬಂಧಿಕರುಗಳಿಗೆ ದಯಪಾಲಿಸಿದರು. ಸೇನಾಪಡೆಯ ಆತನ ಸಂಪೂರ್ಣ ಕಾಲಾವಧಿಯಲ್ಲಿ ರಾಮಯ್ಯನ್‌‌ ದಳವಾ ಎಂಬುವವನು ಸಮರ್ಥ ಮಂತ್ರಿಯಾಗಿದ್ದನು. 

Martanda Varma, great king of Travancore

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ