ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ13


 ತಿರುಪ್ಪಾವೈ 

ನರಹರಿಯ ರೂಪವೆಲ್ಲವೂ ಪರಮನಾಡುವ ಲೀಲೆ 
Thiruppavai 13

ಪುಳ್ಳಿನ್‌ವಾಯ್ ಕೀಂಡಾನೈ ಪ್ಲೋಪ್ಲಾವರಕ್ಕನೈ
ಕಿಳ್ಳಿಕ್ಕಳ್ಳೆನ್ಡಾನೈ ಕೀರ್ತಿಮೈ ಪಾಡಿಪ್ಲೋಯ್ 
ಪಿಳ್ಳೈ ಕಳೆಲ್ಲಾರುಂ ಪಾವೈಕ್ಕಳಂ ಪುಕ್ಕಾರ್ ವೆಳ್ಳಿಯೆಳುನ್ಡು ವಿಯಾಳಮುರಂಗಿತ್ತು ಪುಳ್ಳುಂ ಶಿಲುಮ್ಬಿನಕಾಣ್ ಪೋದರಿಕ್ಕಣ್ಣಿನಾಯ್ 
ಕ್ಕುಳ್ಳಕ್ಕುಳಿರ ಕ್ಕುಡೈನ್ದು ನೀರಾಡಾದೇ
ಪಳ್ಳಿಕ್ಕಿಡತ್ತಿಯೋ ಪಾವಾಯ್ ನೀ ನನ್ನಾಳಾಲ್ 
ಕಳ್ಳನ್ತರಿನ್ದು ಕಲನ್ನೇಲೋರೆಂಬಾವಾಯ್

ಭಾವಾನುವಾದ 

ಶಕಟಚಕಟರ ಕೊಂದ ಬಲಭೀಮ ದುರಾದರ್ಶ ಗೋಕುಲಾನಂದಕಂದ 
ಕೋಸಲೆಯ ಕಂದ ದಶಕಂಠಮರ್ಧನ ಇನಕುಲ ಸೋಮನಾ
ವರಾಹ ವಾಮನನ ನರಹರಿಯ ರೂಪವೆಲ್ಲವೀ ಪರಮನಾಡುವ ಲೀಲೆ
ಎಂದೆನುತ 
ಪರಿಪರಿಯ ಗುಣಗಾನದಿಂದೈದಿಹರು ಯಮುನೆಯೆಡೆಗೆಲ್ಲ ಸಖಿಯರು
ನೋಂಪಿಗೆಮ್ಮ ಮನವನನುಗೊಳಿಸಿ ತೋರುಬಾ ನಿಜಭಕ್ತಿ ಜ್ಞಾನ ಸರಿದಾರಿ ತೋರೆಮಗೆ ಮುಕ್ತಿ ಸಾಮ್ರಾಜ್ಯ ಸಾಗರಕೆ ಸರಿದಾರಿ ಓ ಮಂಗಳಾಂಗಿ 
ಅನಂತಜಿತನ ಸಿರಿಪಾದ ದರ್ಶನಕೆ ನೀನೆಮಗೆ ದೀವಿಗೆಯಾಗು ಬಾ
ಸಖಿಯೇ 
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು

ತಿರುಪ್ಪಾವೈ ಗೀತ ಮಾಲೆ
ಪಾಶುರ - 13 
ಸಂಕ್ಷಿಪ್ತ ಭಾವಾರ್ಥ

ಭಕ್ತವೃಂದವನ್ನೇ ಜೊತೆಯಲ್ಲಿ ಕರೆದುಕೊಂಡು ಹೋದಲ್ಲಿ ಶ್ರೀಹರಿಯ ಕೃಪೆ ಶ್ರೀಘ್ರವೇ ಪ್ರಾಪ್ತಿಯಾಗುತ್ತದೆ ಎಂದು ಗೋದೆ ಇಲ್ಲಿ ನಮಗೆ ಪಾಶುರಗಳಲ್ಲಿ ಗೆಳತಿಯರನ್ನು ಎಚ್ಚರಿಸುವದರ ಮೂಲಕ ತಿಳಿಸುತ್ತಿದ್ದಾಳೆ. ಈ ಪಾಶುರದಲ್ಲಿ ಮತ್ತೊಬ್ಬ ಸಖಿಯ ಒಲವನ್ನು ಪಡೆಯಲಿಚ್ಚಿಸಿದ್ದಾಳೆ.

ನೋಡಮ್ಮ ಸಖಿ ನಿನ್ನ ಮುದ್ದು ಕೃಷ್ಣ ಐದು ವರ್ಷದ ಬಾಲಕನಾಗಿರುವಾಗಲೇ ಬಕಾಸುರನ ಬಾಯನ್ನು ಸೀಳಿದ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ವ್ರತಧಾರಿ ಈತ. ಹಿಂದಿನನೇಕ ಅವತಾರಗಳಲ್ಲಿಯೂ ಧರ್ಮರಕ್ಷಣೆ ಮಾಡಿದ ಚಕ್ರಧಾರಿ.

ಕೋದಂಡಧರನಾಗಿ ರಾವಣಾಸುರನನ್ನು ಲೀಲಾಜಾಲವಾಗಿ ಕೊಂದವನೂ ಇವನೇ.

ಯುಗಯುಗಗಳಲ್ಲಿ ಭುವಿಗಿಳಿದು ಬಂದ ಧರ್ಮರಕ್ಷಕ ಆ ಕ್ಷೀರಸಸಾಗರ ಶಯನ ಈ ನಂದನಂದನ. ಈತನ ಲೀಲಾವಿನೋದಗಳನ್ನು ವರ್ಣಿಸಲು ಆದಿಶೇಷನಿಗೂ ಸಹ ಸಾಧ್ಯವಿಲ್ಲ.

ಇಂತಹ ಪರಮನ ಭಕ್ತ ಶ್ರೇಷ್ಟಳು ನೀನು. ಬೇಗೆದ್ದು ಬಾ. ನಮಗೆ ಭಕ್ತಿಯ ಮಾರ್ಗದರ್ಶನ ನೀಡುವುದರ ಮೂಲಕ ನಮ್ಮನ್ನು ಉದ್ಧರಿಸು.

ಭಕ್ತಶ್ರೇಷ್ಠಳಾದ ನೀನೇ ಮುಕ್ತಿಮಾರ್ಗವನ್ನು ತೋರಿಸಲು ಸಮರ್ಥಳು. ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳ ಉಂಟಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ