ತಿರುಪ್ಪಾವೈ 5
ತಿರುಪ್ಪಾವೈ
ನಿನಗೀ ಅಪ್ರಮೇಯನ ಗೊತ್ತೇನೆ?
Thiruppavai 5
ಮಾಯನೈ ಮನ್ನು ವಡಮಧುರೈ ಮೈಂದನೈ
ತುಯಪರುನೀರ್ ಯಮುನೈತ್ತುರೈವನೈ
ಅಯರ್ ಕುಲತ್ತಿನಿಲ್ ತೋನ್ರು ಮಣಿ ವಿಳಕೈ
ತಾಯೈಕ್ಕುಡಲ್ ವಿಳಕ್ಕಂ ಶೆಯ್ದು ದಾಮೋದರನೈ
ತೂಯೋಮಾಯ್ ವಂದುಂ ನಾಂ ತೂಮಲರ್ ತೂವಿತ್ತೊಳಿದು
ವಾಯಿನಾಲ್ ಪಾಡಿ ಮನತ್ತಿನಾಲ್ ಶಿಂದಿಕ್ಕ
ಪೋಯಪಳೈಯುಂ ಪುಗದರುವಾ ನಿನ್ರನವುಂ
ತೀಯನಿಲ್ ತೂಶಾಗುಂ ಶೆಪೈಲೋರೆಂಬಾವಾಯ್
ಭಾವಾನುವಾದ
ಗೊತ್ತೇನೆ ನಿನಗಿದು ಓ ಸಖಿಯೆ ಗೊತ್ತೇನು ನಿನಗಿದು
ಅಪ್ರಮೇಯನ ಈ ಪರಿಯ ಸೊಬಗು
ಗೊತ್ತೇನೆ, ಗೊತ್ತೇನೆ
ಅಚ್ಚರಿಯ ಶಿಶು ಗೋಕುಲದ ಕಣ್ಮಣಿ ನಂದಯಶೋದಾಕಂದ
ನವನೀತ ಚೋರನೆಂದೆನಿಸಿಹನು ವಸುದೇವ ದೇವಕೀ ತನಯ
ದಾಮೋದರನಾಗಿ ಸಾರಿಹನು ತಾ ಸಿಗುವೆ ಮಾತೆ ಮಮತೆಗೆಂದೆನುತ
ರಕ್ಷಿಸುತ ಯಕ್ಷರನು ಸಾರಿಹನು ಕಳೆವೆನಮಿತ ಜನ್ಮಗಳ
ಪಾಪರಾಶಿಯನೆಲ್ಲ
ಸಿಗುವೆ ನಾ ಸತತ ಚಿಂತಿಪರಿಗೆಂದೆನುತ ನಮ್ಮಯದುಶೈಲನಾಥ
ಕೃತಲಕ್ಷಣನು
ಭಾವಶುದ್ದಿಯಲಿ ಶರಣಾಗಿ ಬೇಡಿದೋಡೆ ಗರುಡಗಮನ ಗೋಪತಿಯು
ಅಕ್ರೂರವರದ ಸಲಹುವನೆಮ್ಮ ಗೋವರ್ಧನೋದ್ದಾರಿ ಕರುಣಾಂತರಂಗ
ಫಲಿಸಲಿಂತೆಲ್ಲರನುಪಮ ನೋಪಿ ತುಂಬುತೆಲ್ಲೆಡೆ
ಮಂಗಳದ ಮುಂಬೆಳಕು
ಪಾಶುರ - 5 | ಸಂಕ್ಷಿಪ್ತ ಭಾವಾರ್ಥ
ಶ್ರೀಕೃಷ್ಣನ ಲೀಲಾ ವಿನೋದಗಳನ್ನು ವೈಭವವನ್ನು ವರ್ಣಿಸುವ ಗೀತೆ ಇದು. ಶ್ರೀಕೃಷ್ಣನು ಮಾಯಾಮಯನಾದ ಅಚ್ಚರಿಯ ಶಿಶು, ಗೋವಳರ ವಂಶದಲ್ಲಿ ಬೆ ಳೆದುಬಂದ ಮಹಾಬಲಶಾಲಿ. ಮಾತೆ ಯಶೋಧೆಯ ಕೈಯಲ್ಲಿ ತಾನೇ ಮೊಸರು ಕಡೆಯುವ ಹಗ್ಗದಿಂದ ಕಟ್ಟಿಸಿಕೊಳ್ಳುವುದರ ಮೂಲಕ ಜಗತ್ತಿಗೇ ಸಾರಿಸಾರಿ ಹೇಳುತ್ತಿದ್ದಾನೆ. ನಾನು ಮಾತೆ ಮಮತೆಗೆ, ಭಕ್ತರಿಗೆ ಮತ್ತು ಮಾತೃ ಪ್ರೇಮದಿಂದ ನನ್ನನ್ನು ನೋಡುವವರಿಗೆ ಮಾತ್ರ ಸಿಗುತ್ತೇನೆ.
ಆದ್ದರಿಂದ ಇಂತಹ ಅಕ್ರೂರವರದನಾದ ಸಹಸ್ರ ನಾಮಗಳಿಂದ ಸ್ತೋತ್ರ ಮಾಡಿಸಿಕೊಳ್ಳುವ ಶ್ರೀಹರಿಯಲ್ಲಿ ಭಾವಶುದ್ದಿಯಿಂದ ಶರಣಾಗಿ ಬೇಡೋಣ. ಈ ನಮ್ಮ ಶರಣಾಗತವತ್ಸಲ, ಕಾರುಣ್ಯಸಿಂಧು ನಮ್ಮ ಯದುಕುಲ ನಂದನ, ವಸುದೇವ ದೇವಕೀ ತನಯ, ಭಕ್ತಿಯಮುನೆಯಲ್ಲಿ ಮಿಂದು ಪಾಡಿ ನಲಿದಲ್ಲಿ ಕರುಣೆಯಿಂದ ನಮ್ಮನ್ನು ಉದ್ದರಿಸುತ್ತಾನೆ. ಇದರಿಂದ ನಮ್ಮ ವ್ರತವೂ ಈಡೇರಿ ಸಮಸ್ತ ಲೋಕಕ್ಕೆ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು