ತಿರುಪ್ಪಾವೈ 6
ತಿರುಪ್ಪಾವೈ - ಎಂತಹ ಕರುಣಾಮಯಿ ಆ ನಂದನ ಗೊತ್ತೇ?
Thiruppavai 6
ಪುಳ್ಳುಂ ಶಿಲಂಬಿನಕಾಣ್ ಪುಳ್ಳರೈಯನ್ ಕೋಯಿಲಿಲ್
ವೆಳ್ಳೈ ವಿಳಿಶಂಗಿನ್ ಪೇರರವಂ ಕೇಟ್ಟಿಲೈಯೋ ಪಿಳ್ಳಾಯ್ ಯೆಳುಂದಿರಾಯ್ ಪೇಯ್‍ಮುಲೈ ನಂಜುಂಡು
ಕಳ್ಳಚ್ಚಕಟಂ ಕಲಕ್ಕಳಿಯ ಕಾಲೋಚ್ಚೆ ವೆಳ್ಳತ್ತರವಿಲ್ ತುಯಿಲಮರನ್ದ ವಿತ್ತಿನೈ ಉಳ್ಳತ್ತುಕ್ಕೊಂಡು ಮುನಿವರ್ಗಳುಂ ಯೋಗಿಗಳುಂ
ಮೆಳ್ಳವೆಳುಂದು ಅರಿಯೆನ್ದ ಪೇರರವಂ
ಉಳ್ಳಂ ಪುಗುಂದು ಕುಳಿರೆನ್ದೇಲೋರೆಂಬಾವಾಯ್
ಭಾವಾನುವಾದ
ವೇದಘೋಷಗಳೊಡನೆ ನವಿಲು ಕೋಗಿಲೆಗಳಾ ಸುಪ್ರಭಾತಧ್ವನಿ
ಮಾರ್ಧನಿಸಿ ಪಾಂಚಜನ್ಯದ ನಾದದಲೋಂಕಾರ ತಾನಾಗಿ ಮುಗಿಲಮುಟ್ಟಿಹುದು
ಸರ್ವದೃಗ್ವಾಸನ ಕೀರ್ತನೆ ಎಚ್ಚರಾಗದೇ
ಸಖಿ ತಾಯ್ತನವನಿತ್ತ ಮೊಲೆಯುಂಡು ಶಕಟನಿಗಾಯ್ತು ಮೋಕ್ಷ
ಶತೃಮಿತ್ರರೆಲ್ಲರನು ಸಲಹುವೆನೆಂದವಗೆ ಸೀಮಾತೀತನಿಗೆ ನಮಿಸಿಹರು ಎಚ್ಚರಾಗೆನ್ನಾತ್ಮಸಖಿ ಮುಕ್ತಿಮಾರ್ಗವ ಕೋರಿ ಸ್ತುತಿಸೋಣ
ಜ್ಞಾನಗಮ್ಯನನು
ಒಲವ ನೋಂಪಿಂಗೆ ತಾನೊಲಿದು ವರವೀವ ಚೆಲುವ ಚೆನ್ನಿಗ ತಪ್ಪದೆಲೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ಸಂಕ್ಷಿಪ್ತ ಭಾವಾರ್ಥ
ಎಂತಹ ಕರುಣಾಮಯಿ ನಮ್ಮಾನಂದನ ಗೊತ್ತೇ?ಉಣಿಸಲೆಂದು ಬಂದ ಪೂತನಿಗೆ ತಾಯ್ತನದ ಆನಂದವನ್ನು ನೀಡಿ ಸ್ಥನ್ಯಪಾನ ಮಾಡಿ, ಮುಕ್ತಿಯನ್ನು ಇತ್ತವನು. ಸಂಹರಿಸಲು ಬಂದ ಶಕಟನನ್ನು ತನ್ನ ಪುಟ್ಟ ಪಾದಗಳಿಂದ ಒದ್ದು ಕೆಡವಿ, ಆತನಿಗೆ ಮೋಕ್ಷವನ್ನು ಕರುಣಿಸಿದ ಕರುಣಾಮಯಿ. ಭಕ್ತನಾದ ಕರಿರಾಜ ನಾರಾಯಣ ಎಂದು ಕೂಗಿದಾಗ ಪಕ್ಷಿವಾಹನನಾಗಿ ಬಂದು ರಕ್ಷಿಸಿದನು. ಅಣ್ಣನ ಬೆದರಿಕೆಗಳಿಂದ ನೊಂದ ರುಕ್ಮಿಣಿಯು ಹೇ ಕೃಷ್ಣಾ ಎಂದು ಕೂಗಿದಾಗ ರಥವನ್ನೇರಿ ಬಂದು ರುಕ್ಕಣಿಯನ್ನು ಕೈಪಿಡಿದು ರಕ್ಷಿಸಿದನು. ಇಂತಹ ಪರಮನ ಅಡಿದಾವರೆಗಳಲ್ಲಿ ಮೂಡಣದ ಹೊಂಬೆಳಕ ಸಿರಿಯುದಿಸುವ ಸುಮುಹೂರ್ತದಲ್ಲಿ ವೇದಘೋಷಗಳು ದೇವಾಲಯಗಳಲ್ಲಿ ಅಲೆಯಾಗಿ ಪ್ರತಿಧ್ವನಿಸಿ, ಬ್ರಹ್ಮಾಂಡಕ್ಕೆಲ್ಲಾ ವ್ಯಾಪಿಸಿ, ಆನಂದವನ್ನು ಉಂಟುಮಾಡುವ ಸುಮುಹೂರ್ತದಲ್ಲಿ, ಪಾಂಚಜನ್ಯದ ಧ್ವನಿಯು ಓಂಕಾರವಾಗಿ ತರಂಗತರಂಗಗಳಲ್ಲಿ ತೇಲಿ ತೇಲಿ ಬರುತ್ತಿರುವ ವೇಳೆಯಲ್ಲಿ ಶಿರಬಾಗಿ ನಮಿಸೋಣ.ಮಂಗಳದ ಮಾರ್ಗಶಿರ ಮಾಸದ ಶುಭ ವೇಳೆಯಲ್ಲಿ ಭಕ್ತಿಯಿಂದ ನಮಿಸಿ ಪ್ರಾರ್ಥಿಸಿದರೆ ತಪ್ಪದೇ ನಮ್ಮನ್ನು ಉದ್ದರಿಸುತ್ತಾನೆ, ನಮ್ಮ ಸುಧಾಮಹತೃತ್ಕಮಲವಾಸ, ರುಕ್ಮಿಣೀ ರಮಣ. ಇದರಿಂದ ನಮ್ಮ ವ್ರತವೂ ಈಡೇರಿ ಸಕಲ ಲೋಕಕ್ಕೂ ಮಂಗಳ ಉಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು