ದಾಕ್ಷಾಯಿಣಿ ದಾಚಿ
ದಾಕ್ಷಾಯಿಣಿ ದಾಚಿ
"ಹೂ ಮನಸಿನ ಒಡನಾಡಿಗಳೇ" ಎಂಬ ಸಂಬೋಧನೆಯಿಂದಲೇ ತಮ್ಮ ಬರಹಗಳನ್ನು ಮೂಡಿಸುವ ದಾಕ್ಷಾಯಿಣಿ ಅಪೂರ್ವ ಪ್ರಕೃತಿ ಪ್ರೇಮಿ. ತಮ್ಮ ಸುತ್ತಮುತ್ತಲಿನ ಆವರಣದಲ್ಲಿ ಸುಂದರ ಹೂದೋಟದ ಕೈಂಕರ್ಯ ಮಾಡುತ್ತಾ, ತಮ್ಮ ಆವರಣವನ್ನೇ ಹೂದೋಟದಂತೆ ಮಾಡಿಕೊಂಡು ಸುಂದರ ಬದುಕಾಗಿ ಕಾಣುವ ವಿಶಿಷ್ಟ ಸಹೃದಯಿ ಈಕೆ. ಅಂತೆಯೇ ಅವರಿಗೆ ಜನರನ್ನೂ ಹೂ ಮನಸಿನ ಒಡನಾಡಿಗಳ ಹಾಗೆ ಕಾಣುವ ಹೃದಯವಂತಿಕೆ ಸಿದ್ಧಿಸಿದೆ.
ತನ್ನ ಪರಿಸರದ ಹೂ ಗಿಡಗಳನ್ನು ಅಚ್ಚುಕಟ್ಟಾಗಿ ಆಪ್ತತೆಯಿಂದ ಪರಿಚಯಿಸುವ ದಾಕ್ಷಾಯಿಣಿ ಅವರ ಬರಹಗಳೆಲ್ಲ ಒಂದು ದಿನ ಪುಸ್ತಕ ರೂಪದಲ್ಲೂ ಬಂದು ಅನೇಕ ಮನ ಮನೆಗಳಲ್ಲೂ ಪರಿಮಳ ತುಂಬಿದರೆ ಅಚ್ಚರಿಯಿಲ್ಲ ಅನಿಸುತ್ತದೆ.
ಹೂಗಳ ಜೊತೆ ಇದ್ದಾಗ ಹೂವೇ ಆಗುವ, ಮಕ್ಕಳ ಜೊತೆ ಇದ್ದಾಗ ಮಗುವೇ ಆಗುವ, ಆಡುವ ಮಾತಿನಲ್ಲಿ ತಾನೇ ಭಾವವಾಗುವ, ಸ್ನೇಹದಲ್ಲಿ ಸ್ನೇಹವೇ ಆಗುವ, ಪ್ರೀತಿಯಿದ್ದೆಡೆ ತಾನೇ ಪ್ರೀತಿ ಆಗುವ ಅಧ್ಯಾತ್ಮ ಎಲ್ಲರಿಗೂ ದಕ್ಕುವಂತದ್ದಲ್ಲ. ಅದು ನಮ್ಮ ದಾಚಿಗೆ ಸಿದ್ಧಿಸಿದೆ. ಈಕೆ ಯೋಗ ಪ್ರವೀಣೆ. ಅನೇಕರಿಗೆ ಯೋಗ ವ್ಯಾಯಾಮ ಮಾರ್ಗದರ್ಶಿ ಕೂಡ.
ಹೂ ಮನಸಿನ ದಾಕ್ಷಾಯಿಣಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Dakshayini Dachi 🌷🌷🌷
ಕಾಮೆಂಟ್ಗಳು