ಕನ್ನಡತಿ
ಕನ್ನಡತಿ ಜಲಜಾರಾವ್
ಇವರ ಫೇಸ್ಬುಕ್ ಹೆಸರೇ ಕನ್ನಡತಿ. ಅವರ ಹೆಸರಿನ ಕೆಳಗಿರುವ ಪರಿಚಯ ಹೀಗೆ ಹೇಳುತ್ತದೆ: “ಕನ್ನಡ ನಾಡಿನ ಹೆಣ್ಣು ಮಗಳು, ಸ್ವಾಭಿಮಾನ, ಸಹೃದಯತೆ ನನ್ನ ಆಸ್ತಿ. ಪ್ರೀತಿ, ನಂಬಿಕೆ ನನ್ನ ಶಕ್ತಿ". ಇದು ಆತ್ಮೀಯರಾದ ಜಲಜಾರಾವ್ ತಮ್ಮನ್ನು ಕಂಡುಕೊಂಡಿರುವ ಪರಿ. ಇಂದು ಅವರ ಜನ್ಮದಿನ.
ಅವರನ್ನು ಭೇಟಿ ಆಗಿದ್ದೇನೆ. ಕೆಲವೊಮ್ಮೆ ದೂರವಾಣಿಯಲ್ಲಿ ಮಾತಾಡಿದ್ದೇನೆ. ಅವರ ಫೇಸ್ಬುಕ್ ಗೋಡೆ ನೋಡಿದ್ದೇನೆ. ಅವರು ಏನೇ ಹೇಳಿದರೂ ಅಲ್ಲಿರುವುದು ಕನ್ನಡದ ಭಾವ, ಕನ್ನಡದ ಭಾಷೆ ಮತ್ತು ಕನ್ನಡದ ಸಹೃದಯತೆ.
"ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎನುವೆವು" ಎಂಬ ಕವಿವಾಣಿ ಸಾರ್ಥಕ್ಯ ಪಡೆಯುವುದೇ ಇಂತಹ ಹೃದಯವಂತಿಕೆಯಿಂದ.
ಆತ್ಮೀಯರೂ, ನಮಗೆಲ್ಲ ಕನ್ನಡದ ಪ್ರೀತಿ ನಿರಂತರವಾಗಿರುವಂತೆ ಸ್ಪೂರ್ತಿದಾಯಕರೂ ಆದ ಸಹೃದಯಿ ಕನ್ನಡತಿ ಜಲಜಾರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್‌ಗಳು