ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಕ್ರಂ ಕಿರ್ಲೋಸ್ಕರ್


 ವಿಕ್ರಮ್ ಎಸ್ ಕಿರ್ಲೋಸ್ಕರ್


ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ವೈಸ್ ಚೇರ್ಮನ್ ಮತ್ತು ಭಾರತೀಯ ಕೈಗಾರಿಕಾ ರಂಗದ ಮಹತ್ವದ ಸಾಧಕರೆನಿಸಿದ್ದ ವಿಕ್ರಮ್ ಎಸ್ ಕಿರ್ಲೋಸ್ಕರ್ ಅವರು 2022 ನವೆಂಬರ್ 22ರಂದು ನಿಧನರಾಗಿದ್ದಾರೆ. 

ಉದ್ಯಮದಲ್ಲಿ "ಪ್ಯಾಷನೇಟ್ ಇಂಜಿನಿಯರ್" ಎಂದು ಹೆಸರಾಗಿದ್ದ ವಿಕ್ರಮ್ ಕಿರ್ಲೋಸ್ಕರ್ ಅವರು ಪ್ರಸಿದ್ಧ ಟೊಯೋಟಾ ಸಂಸ್ಥೆ ಜೊತೆ ಪಾಲುದಾರಿಕೆ ಸಾಧಿಸಿ, ಅದರಿಂದ ಕೈಗಾರಿಕಾ ಅಭಿವೃದ್ಧಿಯ ಲಾಭವನ್ನು ಭಾರತಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕದಲ್ಲಿ ವಾಹನ ತಯಾರಿಕಾ ಉದ್ಯಮವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದ ಅವರಿಗೆ "ಸುವರ್ಣ ಕರ್ನಾಟಕ" ಪ್ರಶಸ್ತಿ ಸಂದಿತ್ತು.

ಕಿರ್ಲೋಸ್ಕರ್ ಅವರು 1980ರ ದಶಕದಲ್ಲಿ ಸರ್ಕಾರದ ಡೆವಲಪ್‌ಮೆಂಟ್ ಕೌನ್ಸಿಲ್ ಫಾರ್ ಮೆಷಿನ್ ಟೂಲ್ಸ್‌ನಲ್ಲಿ ಸೇವೆ ಸಲ್ಲಿಸಿದರು.  ಅವರು ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. 2013-15ರ ಅವಧಿಯಲ್ಲಿ ಅವರು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2019 ಮತ್ತು 2020ರ ನಡುವೆ, ಅವರು ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಸ್ಥಾನ ಹೊಂದಿದ್ದರು. ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾ ವ್ಯಾಸಂಗ ನಡೆಸಿದ್ದರು.

ಮೆಟಲರ್ಜಿಕಲ್ ಇಂಡಸ್ಟ್ರೀಸ್‌ನಲ್ಲಿ ಕಾರ್ಪೊರೇಟ್ ನಾಯಕತ್ವದಲ್ಲಿ ಅವರ ಶ್ರೇಷ್ಠತೆಗಾಗಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟಲ್ಸ್ (IIM)ನ ಜೆ ಆರ್ ಡಿ ಟಾಟಾ ಪ್ರಶಸ್ತಿ 2020 ಅನ್ನು ಸಹ ಗಳಿಸಿದ್ದರು.

ವಿಕ್ರಮ್ ಎಸ್ ಕಿರ್ಲೋಸ್ಕರ್ ಅವರು ಕೈಗಾರಿಕಾ ಉತ್ಪನ್ನಗಳಿಂದಾಗುವ ಹವಾಮಾನ ಪರಿಣಾಮಗಳ ಬಗ್ಗೆ ಕಾಳಜಿ ಹೊಂದಿದ್ದರು.  ಅವರ ಆಶ್ರಯದಲ್ಲಿ, ಟೊಯೊಟಾ ಕಿರ್ಲೋಸ್ಕರ್ ಭಾರತದಲ್ಲಿ 2035ರ ವೇಳೆಗೆ ಇಂಗಾಲದ ತಟಸ್ಥತೆಯ ಗುರಿಯನ್ನು ಹೊಂದಿತ್ತು.  ನವೆಂಬರ್ 25 ರಂದು ಟೊಯೋಟಾ ಇನ್ನೋವಾದ ಹೈಬ್ರಿಡ್ ಆವೃತ್ತಿಯಾದ ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದ್ದರು

ವಿಕ್ರಮ್ ಎಸ್ ಕಿರ್ಲೋಸ್ಕರ್ ಅವರು ಪತ್ನಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಪುತ್ರಿ ಮಾನಸಿ ಕಿರ್ಲೋಸ್ಕರ್ ಅವರನ್ನು ಅಗಲಿದ್ದಾರೆ.

Respects to departed soul Vikram Kiroloskar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ