ತಿರುಪ್ಪಾವೈ19
ತಿರುಪ್ಪಾವೈ
ಸುತ್ತಲೂ ಕತ್ತಲೆಯಿದ್ದರೂ ನಿನ್ನ ಮನೆ ಭಕ್ತಿಯ ಬೆಳಕಿಂದ ಪ್ರಕಾಶಮಾನ
Thiruppavai 19
ಕುತ್ತು ವಿಳಕ್ಕೆರಿಯ ಕ್ಕೋಟ್ಟುಕ್ಕಾಲ್ ಕಟ್ಟಿಲ್ ಮೇಲ್
ಮೆತ್ತೆನ್ರ ಪಂಚಶಯನತ್ತಿನ್ ಮೇಲೇರಿ
ಕೊತ್ತಲರ್ ಪೂಜ್ಞ್ಗಳಲ್ ನಪ್ಪಿನ್ನೈ ಕೊಂಗೈಮೇಲ್
ವೈತ್ತುಕ್ಕಿಡಂದ ಮಲರ್ ಮಾರ್ರ್ಬಾವಾಯ್ ತಿರವಾಯ್
ಮೆತ್ತಡಂ ಕಣ್ಣಿನಾಯ್ ನೀ ಯುನ್ಮಣಾಲನೈ
ಎತ್ತನೈಪೋದುಂ ತುಯಿಲೆಳ ವೋಟ್ಟಾಯ್ ಕಾಣ್
ಯೆತ್ತನೈ ಯೇಲುಂ ಪಿರಿವಾತ್ತ ಕಿಲ್ಲಾಯಾಲ್
ತತ್ತುವಮನ್ರು ಕಳವೇಲೋರೆಂಬಾವಾಯ್
ಭಾವಾನುವಾದ
ನಿನ್ನನಗಲಿರಲಾರ ಶ್ರೀರಂಗರಂಗ ಲೋಕಸಾಗರ ಚೆಲುವಚೆನ್ನಿಗ ಚತುರಾತ್ಮ ಬಂಧಿ ನಿನ್ನನುಪಮ ಭಕುತಿಯ ಸೆರೆಯಲ್ಲಿ ಸರ್ವವಾಗೀಶ್ವರೇಶ್ವರನು
ನಿಗಮಾನುತ ಚರಿತನನು ತೋರೆಮಗೆ ನುಡಿಸು ಬಾ ವಿಮಲೆ
ಮಾರ್ಗಶಿರ ನೋಂಪಿಯ ಜೊತೆಗೂಡಿ ಸಲಹೆಮ್ಮಶ್ರೀರಮಣಿ
ಮರೆಯದಿರಮ್ಮ ಬಂದಿಹೆವು ಮಾಧವನ ಮಧುಸೂದನನ ದರ್ಶನಕೆ
ಕಾಲ್ಪೆರಳ ಬಾಯೊಳಿಟ್ಟು ನಲಿದ ಅಪ್ರಮೇಯನ ಸುಂದರನ ಲೀಲಾವತಾರಿಯ ದರ್ಶನವ ನೀಡೆಮಗೆ ನೀ ಮುಕ್ತಿದಾಯಕಿಯೇ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ಸಂಕ್ಷಿಪ್ತ ಭಾವಾರ್ಥ
ಮತ್ತೆ ಮುಂದುವರಿಯುತ್ತಾ ಪ್ರಾರ್ಥಿಸುತ್ತಿದ್ದಾಳೆ, ಅಮ್ಮಾ ನೀಳಾದೇವಿ, ನೀನು ಚೆಲುವ ಚೆನ್ನಿಗನ ಮನದನ್ನೆ ಸುತ್ತಲೆಲ್ಲೆಡೆಯಲ್ಲೂ ಕತ್ತಲು ಆವರಿಸಿದ್ದರೂ ಸಹ ನಿನ್ನರಮನೆಯಲ್ಲಿ ಭಕ್ತಿಯ ಪ್ರಭಾವಲಯದಿಂದಾಗಿ ಸದಾಕಾಲ ಪ್ರಕಾಶಮಾನವಾಗಿ ಕಂಗೊಳಿಸುತ್ತಿದೆ.
ನಿನ್ನ ಅನುಪಮ ಭಕ್ತಿ ಅಪ್ಪುಗೆಯಲ್ಲಿ ಶ್ರೀಕೃಷ್ಣನನ್ನು ಸದಾ ಬಂಧಿಯನ್ನಾಗಿಸಿಕೊಂಡಿರುವೆ. ಸ್ವಲ್ಪ ವೇಳೆಯಾದರೂ ನಮಗಾಗಿ ನೀನು ಆತನ ದರ್ಶನವನ್ನು ನಮಗೆ ಮಾಡಿಸಬಾರದೆ?
ನಾವುಗಳು ಇಹದಲ್ಲಿ ಭೋಗ ಭಾಗ್ಯಗಳ ಕಾಮನೆಗಳನ್ನು ತ್ಯಜಿಸಿ ತದೇಕಚಿತ್ತದಿಂದ ಮಾರ್ಗಶಿರಮಾಸದಲ್ಲಿ ಭಕ್ತಿಯಮುನೆಯಲ್ಲಿ ಮಿಂದು ಹರಿನಾಮ ಸ್ಮರಣೆ ಮಾಡುತ್ತಾ ಹಾಲು ಮೆಾಸರು ಬೆಣ್ಣೆ ತುಪ್ಪಗಳೇನನ್ನೂ ಆಶಿಸದೇ ಕೇವಲ ಭಕ್ತಿ ರಸಪಾನದಿಂದ ಬಂದಿದ್ದೇವೆ. ನೀನು ನಮಗೊಲಿದು ಕೃಷ್ಣೆಯಣ್ಣನ ದರ್ಶನವನ್ನು ಕೊಡಿಸಿ ನಮ್ಮನ್ನುದ್ದರಿಸು.
ಶ್ರೀಕೃಷ್ಣನ ದರ್ಶನಭಾಗ್ಯದಿಂದ ನಮ್ಮ ಈ ಮಾರ್ಗಶಿರ ಮಾಸದ ವ್ರತವು ಈಡೇರಿ, ಸಮಸ್ತಲೋಕಕ್ಕೂ ಮಂಗಳ ಉಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು