ತಿರುಪ್ಪಾವೈ20
ತಿರುಪ್ಪಾವೈ 20
ನಿಮ್ಮದರ್ಶನ ನೀಡಿ ನಮ್ಮನ್ನುದ್ಧರಿಸಬೇಕು
Thiruppavai 20
ಮುಪ್ಪತ್ತು ಮೂವರಮರಕ್ಕು ಮುನ್ ಶೆನ್ರು
ಕಪ್ಪಂ ತವಿರ್ಕುಂ ಕಲಿಯೇ ತುಯಿಲೆಳಾಯ್
ಶೆಪ್ಪಮುಡೈಯಾಯ್ ತಿರಲುಡೈಯಾಯ್ ಶೆತ್ತಾರ್ಕ್ಕು
ವೆಪ್ಪಂಕೊಡುಕ್ಕುಂ ವಿಮಲಾ ತುಯಿಲೆಳಾಯ್
ಶೆಪ್ಪನ್ನಮೆನ್ ಮುಲೈಚ್ಚಿವ್ವಾಯ್ ಶಿರುಮರುಂಗುಲ್
ನಪ್ಪಿನ್ದೈನಂಗಾಯ್ ತಿರುವೇ ತುಯಿಲೆಳಾಮ್
ಉಕ್ಕಮುಂ ತಟ್ಟೊಳಿಯುಂ ತನ್ದುನ್ ಮಣಾಳನೈ
ಇಪ್ಪೋದೇ ಎಮ್ಮೈ ನೀರಾಟ್ಟು ಎಲೋರೆಂಬಾವಾಯ್
ಭಾವಾನುವಾದ 20
ನಿಲುವೆ ನೀನಗ್ರದಲಿ ಸಲಹೆ ಭಕುತರನು ಕಾವ ಗದುಗಿನ ವೀರ
ನಾರಾಯಣನೆ
ಸಹಸ್ರ ಬಾಹುವೆ ಸಹಸ್ರಾಕ್ಷ ಸುರಲೋಕ ರಕ್ಷಕನೆ ಸರ್ವವಿಜ್ಞಯೀ
ಯೋಗನಿದ್ರೆಯ ತಿಳಿದೆದ್ದು ಬಾ ವನಮಾಲಿ ಯದುಶೈಲನಾಥ ನಿಜಭಕ್ತಿರಸ ಕ್ಷೀರಾಂಬುಧಿ ಸ್ಥನಭಾರೆ ಕಮಲೆ ಕೋಮಲೆ ನೀಳೆ ನಿರ್ಮಲೆ
ಬೇಗೆದ್ದು ಬಾರಮ್ಮ
ಸ್ತುತಿಸಿ ಬಂದಿಹೆವಮ್ಮ ಕ್ಷೀರಸಾಗರ ತನಯೆ ಶ್ರೀ ಮಹಾಲಕ್ಷ್ಮೀ
ಮಂಗಳದ ಮಾರ್ಗಶಿರ ನೋಂಪಿಯೊಳ್ ಬಂದಿಹೆವು ಭಕುತಿಯಲಿ
ಕಲಶ ಕನ್ನಡಿ ಸಹಿತ ಸುಂದರನ ನೆಳ್ಚರಿಸಿ ಸಲಹೆಮ್ಮಕಾರುಣ್ಯ ನಿಧಿಯೇ
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ತಿರುಪ್ಪಾವೈ 20
ಸಂಕ್ಷಿಪ್ತ ಭಾವಾರ್ಥ
ಹೀಗೆ ನಾನಾ ಪರಿಯಿಂದ ನೀಳಾದೇವಿಯನ್ನು ಪ್ರಾರ್ಥಿಸಿ, ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತಿದ್ದಾಳೆ ಈ ಪಾಶುರದಲ್ಲಿ.
ಅಮ್ಮಾಶ್ರೀ ಮಹಾಲಕ್ಷ್ಮೀ ನೀನು ಜಗನ್ಮಾತೆ ಮಹಾಶಕ್ತಿಮಯಿ, ತ್ರಿಪುರ ಸುಂದರಿ ನೀನು ಕೋಟಿ ದೇವತೆಗಳಿಗೆ ಒಡೆಯನಾದ ದಯಾಮಯನಾದ ಬಲಭದ್ರನ ಸೋದರ, ಭಕ್ತರ ಭಕ್ತ, ಅರಿಭಯಂಕರ ವಿಶ್ವವಂದಿತ ಚರಣ, ಕರಿರಾಜ ವರದ, ಭಕ್ತ ಭವದೀಯ ಮುಚುಕುಂದ ವರದ, ಲೀಲಾ ವಿನೋದ ಇಂತೆಲ್ಲಾ ಪರಿಯಲ್ಲಿ ಹಾಡಿ ಹೊಗಳಿಸಿಕೊಳ್ಳುವ ಆ ನೀಲಮೇಘ ಶ್ಯಾಮನನ್ನು ನಿನ್ನ ಹೃತ್ಕಮಲದಲ್ಲಿಟ್ಟುಕೊಂಡಿರುವ ಮಹಿಮಾವಂತಳು ನೀನು. ನಿನ್ನನ್ನು ಸ್ವಾಮಿಯು ಸದಾಕಾಲ ಆಶ್ರಯಿಸಿರುತ್ತಾನೆ ನಿನ್ನ ಭಕ್ತಿಗೆ ಬಂಧಿಯಾಗಿ.
ಆದ್ದರಿಂದ ಅಮ್ಮಾ ನೀನೂ ಸಹ ನಮ್ಮನ್ನು ಕರುಣಾಕಟಾಕ್ಷದಿಂದ ಈಕ್ಷಿಸಿ ನಮಗೆ ನಿಮ್ಮದರ್ಶನ ನೀಡಿ ನಮ್ಮನ್ನುದ್ಧರಿಸಬೇಕು.
ಶ್ರೀಕೃಷ್ಣನ ದರ್ಶನದಿಂದ ನಮ್ಮವ್ರತವೂ ಈಡೇರಿ, ಸಮಸ್ತ ಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು