ತಿರುಪ್ಪಾವೈ 28
ತಿರುಪ್ಪಾವೈ 28
ಎಲ್ಲಾ ಬುತ್ತಿಯನ್ನೂ ಹಂಚಿಕೊಳ್ಳೋಣ ಬಾ,
ಜೊತೆಯಾಗಿ ಆಡೋಣ ಬಾ
Thiruppavai 28
ಕರವೈಗಳ್ ಪಿನ್ ಶೆನ್ರು ಕಾನಂ ಶೇರ್‌ನ್ದುಣ್ಬೋಂ
ಅರಿವೊನ್ರುಮಿಲ್ಲಾದ ವಾಯ್ ಕ್ಕುಲತ್ತು ಉನ್ತನ್ನೈ
ಪ್ಪಿರವಿಪ್ಪೆರುನ್ದನೈ ಪುಣ್ಣಿಯಂ ಯಾಮುಡೈಯೋಂ ಕುರೈವೊನ್ರುಮಿಲ್ಲಾದ ಗೋವಿಂದಾ ಉನ್ತನ್ನೋಡು
ಉರವೇಲ್ ನಮ್ಮಕ್ಕಿಂಗೊಳಿಕ ಒಳಿಯಾದು
ಅರಿಯಾದ ಪಿಳ್ಳೈಹಳೋಂ ಅನ್ಬಿನಾಲೆ ಉನ್ತನ್ನೈ
ಶಿರುಪೇರಳೈತ್ತನವುಂ ಶೀರಿಯರುಳಾದೇ ಇರೈವಾ ನೀತಾರಾಯ್ ಪರೈ ಯೇಲೋರೆಂಬಾವಾಯ್
ಭಾವಾನುವಾದ 28
ಹಂಚಿ ಮೆಲ್ಲುವ ಬಾ ತಂದ ಬುತ್ತಿಯನೆಲ್ಲ ಕೊಳಲಗಾನವ ತುಂಬಿ ಹೃನ್ಮನದಿ
ಮುಗ್ಧ ಗೋವಳರ ಕುಲದೈವ ಕಲ್ಪತರು ಕಾಮಧೇನುವೆ ಸುವ್ರತನೆ ಸನಾತನನೆ ನಿನ್ನ ಸಂಕಲ್ಪದಿಂದೈದಿರುವೆಮಗಿರಲಿ ನಿನ್ನೊಡನೆ ರಾಸಕ್ರೀಡೆಯ ಬೆಳದಿಂಗಳ
ಬಾಳಸಂಪದವು
ಇರಲೆಮಗೆ ನಿನ್ನ ಮಮತೆಯ ಅನುಬಂಧ ಭೂತನಾಥೇಶ್ವರ ನಮಿತ
ಸುಚರಿತ
ನಿನ್ನನನುದಿನವು ಸಖನೆ ಪಾಲ್ಬೆಣ್ಣೆ ಕಳ್ಳನೆಂದಿಹೆವು ಅನುನಯದಿ ಮನ್ನಿಸೆಮ್ಮನು
ನೀ ಪರಿಪೂರ್ಣ ಸತ್ಯಸ್ವರೂಪ ಗೋಪಿಯರಂತೈದಿರುವ ಮುನಿಗಳನು
ಪೊರೆಯೋ
ಪಲ್ಗುಣನಿಗೊಲಿದಂತೆ ತೋರೆಮಗೆ ನಿನ್ನನಂತ ವಿಶ್ವರೂಪ ವಿಶ್ವಾತ್ಮ
ಶ್ರೀ ಹರಿಯೆ
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ಭಾವಾರ್ಥ 28
ಕೃಷ್ಣಾ, ಗೋವುಗಳನ್ನು ಮೇಯಿಸಲು ಹೋಗುವಾಗ ತಿನ್ನಲೆಂದು ತಂದಿರುವ ಎಲ್ಲಾ ಬುತ್ತಿಯನ್ನೂ ಹಂಚಿಕೊಳ್ಳೋಣ ಬಾ. ನೀನು ನಮ್ಮಗೋಪಾಲಕರ ಕುಲ ತಿಲಕ, ಕಲ್ಪತರು ಕಾಮಧೇನು. ನಮ್ಮ ಈ ಚಿಕ್ಕ ಕೋರಿಕೆಯನ್ನು ಈಡೇರಿಸು.
ನಾವು ವಿದ್ಯಾವಂತರಲ್ಲ, ಧರ್ಮವನ್ನು ತಿಳಿದವರಲ್ಲ. ಇಂತಹ ಮುಗ್ದರಾದ ನಮ್ಮ ಕುಲದಲ್ಲಿ ಜನಿಸಬಂದಿರುವ ಸಕಲ ಧರ್ಮಸಾರ ಸಂಗಮನು ನೀನು.
ಹಿಂದೊಮ್ಮೆಋಷಿಗಳಾಗಿದ್ದವರು ಗೋಪಿಯರಾಗಿ ಬಂದಿರುವ ನಮ್ಮನ್ನು ನಿನ್ನ ಮಾತಿನಂತೆ, ನಿನ್ನ ಸಂಕಲ್ಪದಂತೆ ಬಂದಿರುವ ನಮ್ಮೊಡನೆ ಆಡು ಬಾ. ನಿನ್ನೊಡನೆ ರಾಸ ಕ್ರೀಡೆಯಾಡುವ ಸೌಭಾಗ್ಯ ಸಂತಸ ನಮಗಿರಲಿ.
ಅಲ್ಲದೆ ಇನ್ನು ಮುಂದೆಯೂ ಜನ್ಮಜನ್ಮಾಂತಲಗಳಲ್ಲಿಯೂ ನಾವೂ ನಮ್ಮ ಜೀವನದಲ್ಲಿ ಸದಾಕಾಲ ನಿನ್ನ ಧ್ಯಾನದಲ್ಲಿರುವಂತೆ ನಮ್ಮನ್ನು ಅನುಗ್ರಹಿಸು.
ನಿನ್ನನ್ನು ನಾವು ಸ್ನೇಹಿತನೇ, ಗೆಳೆಯನೇ, ಪಾಲ್ಗೆಣ್ಣೆ ಕದ್ದ ಕಳ್ಳ ಎಂದು ಅನೇಕ ವಿಧಗಳಿಂದ ಕರೆದಿದ್ದೇವೆ. ಇದು ಕೇವಲ ಪ್ರೀತಿಯಿಂದ, ಆತ್ಮೀಯತೆಯಿಂದ, ಮುಗ್ಧತೆಯಿಂದ ಕರೆದಿದ್ದೆ ಆಗಿದೆ. ಆದ್ದರಿಂದ ನಾವು ತಿಳಿದೋ ತಿಳಿಯದೆಯೋ ಮುಗ್ಧತೆಯಿಂದ ಎಸಗಿರಬಹುದಾದ ಎಲ್ಲ ಅಪರಾಧಗಳನ್ನೂ ಮನ್ನಿಸು.
ನೀನು ಸಕಲ ಚರಾಚರಕ್ಕೆ ಜನಕ ಜನನಿ, ಕಿರೀಟಿಗೊಲಿದು ವಿಶ್ವರೂಪವನ್ನು ತೋರಿಸಿದಂತೆ ನಮಗೂ ಸಹ ನಿನ್ನ ವಿಶ್ವರೂಪ ದರ್ಶನವನ್ನು ಮಾಡಿಸಿ ನಮ್ಮನ್ನು ಉದ್ದರಿಸು.
ನಿನ್ನ ಕಾರುಣ್ಯ ಪೂರ್ಣ ಅನುಗ್ರಹದಿಂದ ನಮ್ಮವ್ರತವು ಈಡೇರಿ ಸಮಸ್ತಲೋಕ್ಯ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು