ಸಿ. ಕನಕರಾಜು
ಸಿ. ಕನಕರಾಜು
ಲೋಕದಲ್ಲಿ ಶ್ರೇಷ್ಠತೆಗೆ ಕೊರತೆ ಇಲ್ಲ. ಶ್ರೇಷ್ಠತೆಯನ್ನು ಕಂಡುಕೊಂಡವರು ಕಡಿಮೆ. ಅದರ ಸವಿಯನ್ನು ಆಸ್ವಾದಿಸಿ ಅದರ ಪರಿಚಾರಿಕೆ ಮಾಡುವವರಂತೂ ವಿರಳರಲ್ಲಿ ವಿರಳರು. ಅಂತಹ ವಿರಳ ಕನಕ ನಮ್ಮ ಸಿ. ಕನಕರಾಜು.
ಡಿವಿಜಿ ಎಂದರೆ ಶ್ರೇಷ್ಠತೆಗೊಂದು ಮಾನದಂಡ. ಈ ಶ್ರೇಷ್ಠತೆಯ ಸ್ಮರಣೆಗಾಗಿ ಡಿವಿಜಿ ಬಳಗ ಪ್ರತಿಷ್ಠಾನ ಕಟ್ಟಿ ಶ್ರೇಷ್ಠರಿಂದ ಉಪನ್ಯಾಸ, ಮಾನಸೋಲ್ಲಾಸ ಶಿಬಿರಗಳು, ಪುಸ್ತಕ ಪ್ರಕಟಣೆ, ನಿಜ ಸಾಧಕರಿಗೆ ಗೌರವ ಸನ್ಮಾನ, ನಿರಂತರ ಸದ್ವಿಚಾರ ಪ್ರಸರಣಗಳಲ್ಲಿ ಸಿ. ಕನಕರಾಜು ತಮ್ಮ ಪತ್ನಿಯವರೊಂದಿಗೆ ತೊಡಗಿಕೊಂಡಿದ್ದಾರೆ.
ಕಾರ್ಪೊರೇಷನ್ ಬ್ಯಾಂಕಿನ ಸಿಬ್ಬಂದಿ ತರಬೇತಿ ವಿಭಾಗದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಕನಕ ರಾಜು ಅವರು ನಾಡಿನ ಅನೇಕ ಕಡೆಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ವಿಶ್ವದೆಲ್ಲೆಡೆಯ ಮನಸ್ಸುಗಳಲ್ಲಿ ಸದ್ವಿಚಾರ ಸಂಪತ್ತನ್ನು ಅರಳಿಸುತ್ತಿದ್ದಾರೆ.
ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಕನಕರಾಜು ಮತ್ತು ಅವರ ಕುಟುಂಬದವರ ಬದುಕು ಸಕಲ ಸೌಭಾಗ್ಯಗಳಿಂದ ತುಂಬಿರಲಿ. ಇಂತಹ ಸುಜ್ಞಾನ ಪರಿಚಾರಿಕೆ ನಡೆಸುವ ಕನಕರಾಜು ಅಂತಹ ಕನಕ ಸಂಪತ್ತು ನಮ್ಮ ಬಾಳನ್ನು ಹೆಚ್ಚು ಹೆಚ್ಚು ಶ್ರೀಮಂತಗೊಳಿಸುತ್ತಿರಲಿ. ನಮಸ್ಕಾರ.
On the birthday of Kanaka Raju C Sir
ಕಾಮೆಂಟ್‌ಗಳು