ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸರ್ವಮಂಗಳಾ




 ಸರ್ವಮಂಗಳಾ


ಡಾ. ಸರ್ವಮಂಗಳಾ ಶಾಸ್ತ್ರಿ ಬಹುಮುಖಿ ಚಟುವಟಿಕೆಗಳ ಕೇಂದ್ರಬಿಂದು.

ಸರ್ವಮಂಗಳಾ ಅವರ ಜನ್ಮದಿನ ಫೆಬ್ರವರಿ 1.  ಮಡಿಕೇರಿಯಲ್ಲಿ ಜನಿಸಿದ ಅವರು ಪದವಿ, ಕನ್ನಡ ಎಂ. ಎ, ಶಿಕ್ಷಣ ತರಬೇತಿ ಮುಂತಾದವುಗಳನ್ನು ಉನ್ನತ ಸಾಧನೆಗಳೊಂದಿಗೆ ಪಡೆದಿರುವುದಲ್ಲದೆ "ಪಾ. ವೆಂ. ಆಚಾರ್ಯರ ಬದುಕು ಬರಹ - ಒಂದು ಅಧ್ಯಯನ" ಮಹಾಪ್ರಬಂಧವನ್ನು ಡಾ. ಶ್ಯಾಮಸುಂದರ ಬಿದರಕುಂದಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದ್ದಾರೆ. ಯೋಗ ವಿಜ್ಞಾನದಲ್ಲೂ ಸ್ನಾತಕ ಸಾಧನೆ ಮಾಡಿದ್ದಾರೆ 

ಮಡಿಕೇರಿಯಲ್ಲಿ ಕಾಲೇಜು ಅಧ್ಯಾಪನ ನಡೆಸಿ ವಿವಾಹದ ನಂತರ ಚೆನೈನಲ್ಲಿ ಕೆಲಕಾಲವಿದ್ದು ಮುಂದೆ ಹುಬ್ಬಳ್ಳಿಯಲ್ಲಿ ವಾಸವಿರುವ ಡಾ. ಸರ್ವಮಂಗಳಾ ಅಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಸರ್ವಮಂಗಳಾ ಅವರು ಅನೇಕ ರೀತಿಯ ಬರಹಗಳಲ್ಲಿ ತೊಡಗಿದ್ದಾರೆ.  ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರತಿನಿಧಿಯಾಗಿದ್ದಾರೆ.  ಪಾ. ವೆಂ. ಆಚಾರ್ಯರ ಕುರಿತಾಗಿ ಇವರು ಮಾಡಿರುವ ಸಂಶೋಧನಾ ಕೃತಿ ಕನ್ನಡ ಸಾಹಿತ್ಯಲೋಕಕ್ಕೆ ಸಂದಿರುವ ಮಹತ್ವದ ಕೊಡುಗೆ. ಕಾಂತಾವರ ಕನ್ನಡ ಸಂಘದಿಂದ ಮೂಡಿಬಂದಿರುವ  ಮಾರ್ಪಳ್ಳಿ ಹರಿದಾಸರಾವ್ ಮತ್ತು ಶ್ರೇಷ್ಠ ಪ್ರಕಾಶನ ಸಂಸ್ಥೆ 'ಸಾಹಿತ್ಯ ಭಂಡಾರ'  ಇವರ ಮತ್ತೆರಡು ಕೃತಿಗಳು.  ಅನೇಕ ಮಹತ್ವದ ಕೃತಿಗಳಲ್ಲಿ ಇವರ ಬರಹಗಳು ಮೂಡಿಬಂದಿವೆ. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಅನೇಕ ಸಾಹಿತ್ಯ ಸಂಸ್ಕೃತಿ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಣೆ - ಸಂಯೋಜನೆಗಳನ್ನು ಮಾಡುತ್ತಿದ್ದಾರೆ.  ತಮ್ಮ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿನ ಯುವ ಮತ್ತು ಮಕ್ಕಳ ತಂಡಗಳನ್ನು ಅನೇಕ ರಂಗರೂಪಕಗಳಿಗೆ ನಿರ್ದೇಶಿಸಿ ರಾಜ್ಯದ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.  ಹಿಂದೂ ಸೇವಾ ಪ್ರತಿಷ್ಠಾನದ ವಿವಿಧ ವಲಯಗಳ ಕಾರ್ಯಗಳ ಸಂಘಟಕರಾಗಿ, ಯೋಗ, ಫಿಸಿಯೋ ಥೆರಪಿ, ಸಮಾಜ ಸೇವೆ ಮುಂತಾದ ಸಮಾಜ ಮುಖಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ಬಹುಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಾರ ಓದು, ಛಾಯಾಗ್ರಹಣ, ಪ್ರಕೃತಿ ಪ್ರೇಮ ಮುಂತಾದವು ಇವರ ಬಹುಮುಖಿ ಆಸಕ್ತಿಗಳಲ್ಲಿ ಸೇರಿವೆ.  

ನನ್ನ ಬರಹ ಮತ್ತು ಕನ್ನಡ ಸಂಪದದ ಕೆಲಸಗಳಿಗೂ ಸರ್ವಮಂಗಳಾ ಅವರ ಸಹಕಾರ ಅಪಾರ.

ಆತ್ಮೀಯರೂ, ನಿರಂತರ ಸಕ್ರಿಯರೂ ಆದ ಸರ್ವಮಂಗಳಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr. Sarvamangala Shastry

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ