ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ. ನರಸಿಂಹಭಟ್ಟ


 ಎ. ನರಸಿಂಹ ಭಟ್ ನಮನ


ಅನುವಾದ ಕ್ಷೇತ್ರದಲ್ಲಿ ಮಹಾನ್ ಸಾಧಕರೆನಿಸಿದ್ದ ಎ. ನರಸಿಂಹ ಭಟ್ಟರು ಸಾಹಿತ್ಯ ಮತ್ತು ವೇದಾಂತಗಳ ಮಹಾನ್ ಪರಿಣಿತರಾಗಿದ್ದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

ನರಸಿಂಹ ಭಟ್ಟರು ಮೂಲತಃ ಕಾಸರಗೋಡಿನವರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಭಟ್ಟರು ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು.

ಎ. ನರಸಿಂಹ ಭಟ್ಟರು ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಕೃತಿಗಳನ್ನು  ಇಂಗ್ಲಿಷಿಗೆ ಸೊಗಸಾಗಿ ಅನುವಾದಿಸಿದ್ದಾರೆ.  ಕನ್ನಡದಲ್ಲೂ ಇವುಗಳಿಗೆ ಸರಳವಾಗಿ ಅರ್ಥವಾಗುವಂತೆ ಅದ್ಭುತ ವ್ಯಾಖ್ಯಾನಗಳನ್ನು ಪ್ರಕಟಿಸಿದ್ದರು. 

ನರಸಿಂಹಭಟ್ಟ ಅವರು ದೇವಮಾನವ ಯೇಸು, ಮಿರ್ದಾನನ ಮಂತ್ರಪುಸ್ತಕ, ದೇವಪ್ರವಾದಿ ಹಾಗೂ ಪಥರಹಿತ ಪಥ ಎಂಬ ಕೃತಿಗಳನ್ನು ಹೊರತಂದಿದ್ದರು. ಫ್ರೂಟ್ಸ್‌ ಅಂಡ್‌ ನಟ್ಸ್ ಎಂಬ ಶೀರ್ಷಿಕೆಯಲ್ಲಿ ನೂರಹದಿನೈದು ಶ್ರೇಷ್ಠ ಕವಿತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು. ನೂರು ಭಾವಗೀತೆಗಳನ್ನು  ಸಿಂಗಿಂಗ್ ಸೆಂಟಿಮೆಂಟ್ಸ್ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಅಂತೆಯೇ ಭವ್ಯ ಅನ್ಯಭಾಷಾ ಸಾಹಿತ್ಯದ ಸ್ವಾದವನ್ನು ಪಾಂಡಿತ್ಯಪೂರ್ಣವಾಗಿ ಕನ್ನಡಕ್ಕೆ ತಂದಿದ್ದರು. ಇವುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡ ಜಿಮ್ ಸ್ಟೋವಾಲ್ ಅವರ ಅಮರ ಕೃತಿ The Ultimate Giftನ ಅನುವಾದವಾದ 'ಕೊನೆಯ ಕೊಡುಗೆ' ಸೇರಿದೆ. 

ಎ. ನರಸಿಂಹ ಭಟ್ಟರಿಗೆ ಕುವೆಂಪು ಭಾಷಾ ಪ್ರಶಸ್ತಿ, ಡಿವಿಜಿ ಬಳಗ ಪ್ರತಿಷ್ಠಾನದ ಗೌರವವೂ ಸೇರಿ ಅನೇಕ ಗೌರವಗಳು ಸಂದಿದ್ದವು.

ಎ. ನರಸಿಂಹ ಭಟ್ ಅವರು 2022ರ ಫೆಬ್ರುವರಿ 19ರಂದು ನಿಧನರಾದರು. 

On Remembrance day of great scholar A. Narasimha Bhat, Kasargod

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ