ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎನ್. ಶೇಷಗಿರಿ


 ಎಂ. ಎನ್. ಶೇಷಗಿರಿ


ಎಂ. ಎನ್. ಶೇಷಗಿರಿ ಸುಗಮ ಸಂಗೀತ ಲೋಕದಲ್ಲಿ ಹೆಸರಾಗಿದ್ದವರು. 

ಶೇಷಗಿರಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ 1930ರ ಫೆಬ್ರವರಿ 23ರಂದು ಜನಿಸಿದರು. ತಂದೆ ನಿಂಗಪ್ಪ.  ತಾಯಿ ಗಂಗಮ್ಮ. ಓದಿದ್ದು ಮುಲ್ಕಿ ಪರೀಕ್ಷೆ ಮತ್ತು ಕನ್ನಡ ಜಾಣ ಪರೀಕ್ಷೆ. ಮುಂಬಯಿಯಲ್ಲಿ ಇಂಟರ್ ಮೀಡಿಯೆಟ್ ಡ್ರಾಯಿಂಗ್ ಹಾಗೂ ಗಂಧರ್ವ ಮಹಾವಿದ್ಯಾಲಯದಿಂದ  ಉನ್ನತ ಹಂತದವರೆಗಿನ ಸಂಗೀತ ಪದವಿ ಪಡೆದರು.  ಬಡಗಿತನ, ಕರಕುಶಲ, ಮಣ್ಣಿನ ಮೂರ್ತಿಗಳ ರಚನೆ, ಚಿತ್ರಕಲೆ, ಭಜನೆ, ಸಂಗೀತ ಇವೆಲ್ಲ ಕಲೆಗಳೂ ಇವರ ಮನೆತನಕ್ಕೆ ಬಂದ ಬಳುವಳಿಯಾಗಿತ್ತು. ಹೊಸರಿತ್ತಿಯ ನೀಲಕಂಠ ಬುವಾ, ರಾಮಬುವಾ ಮಕೋಳ ಇವರ ವಂಶ ಪರಂಪರೆಯಲ್ಲಿ ಬಂದವರು. 

ಶೇಷಗಿರಿ 1951ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಸಂಗೀತ ಶಿಕ್ಷಕರಾಗಿ ಬಡ್ತಿ ಪಡೆದು 1988ರಲ್ಲಿ ನಿವೃತ್ತರಾದರು.  ಶಾಲಾ ಶಿಕ್ಷಕರಾಗಿ ಸಂಗೀತ ಶಿಕ್ಷಣ ನೀಡಿದರು. ಆಕಾಶವಾಣಿ ಧಾರವಾಡ ಕೇಂದ್ರದ ಕಲಾವಿದರಾದರು. ದೂರದರ್ಶನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಹಲವಾರು ಧ್ವನಿಸುರಳಿಗಳಿಗೆ ಧ್ವನಿಯಾದರು. ಕವನ ರಚಿಸಿ ರಾಗ ಸಂಯೋಜಿಸಿದ್ದರ ಜೊತೆಗೆ ಸಂಗೀತ ಶಾಸ್ತ್ರದ  ಕುರಿತು ಹಲವಾರು ಪುಸ್ತಕಗಳ ರಚನೆ ಮಾಡಿದರು. ಸಂಗೀತ ಪ್ರಾತ್ಯಕ್ಷಿಕೆ ನೀಡಿದರು. 
ಖ್ಯಾತ ಹಾಡುಗಾರ್ತಿ ಸಂಗೀತ ಕಟ್ಟಿ ಇವರ ಶಿಷ್ಯವರ್ಗದಲ್ಲಿದ್ದರು. 

ಬೆಳಗಾವಿಯ ಲಿಂಗರಾಜ ಜಯಂತಿ, ಮುರುಘರಾಜೇಂದ್ರಮಠ, ಲಯನ್ಸ್ ಕ್ಲಬ್, ಕಾಗಿನೆಲೆ ಕನಕ ಗುರುಪೀಠ, ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತಿನ ಸಮ್ಮೇಳನ, ಪುಟ್ಟರಾಜ ಗವಾಯಿ ಕ್ಷೇತ್ರ ಸೇರಿದಂತೆ ಇವರ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆದವು.  

ಶೇಷಗಿರಿ ಅವರಿಗೆ ಟಾಗೋರ್ ಶತಮಾನೋತ್ಸವ ಗೌರವ, ಕನಕದಾಸರ ೪ನೇ ಶತಮಾನೋತ್ಸವ ಗೌರವ, ಸಂತ ಶಿಶುನಾಳ ಪ್ರಶಸ್ತಿ, ಸಂಗೀತ ಸುಧಾಕರ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಶೇಷಗಿರಿ ಅವರು 2005ರ ಫೆಬ್ರವರಿ 15ರಂದು ನಿಧನರಾದರು.

On the birth anniversary of musician M. N. Sheshagiri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ