ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಣ್ಣದ ಹಬ್ಬ


 ಬಣ್ಣದ ಹಬ್ಬ


ಬಣ್ಣದ ಹಬ್ಬ - ಹೋಳಿ ಹಬ್ಬ ವರ್ಣರಂಜಿತ ಭಾರತೀಯ ಸಂಸ್ಕೃತಿಯ ವಿಶಿಷ್ಟ ಹಬ್ಬ.  ಇದಕ್ಕೆ ಕಾಮನ ಹಬ್ಬ ಎಂದೂ ಹೆಸರು.  ಕೆಟ್ಟದ್ದರ ಸಂಹಾರವಾಗಲು ಭಕ್ತಿಯ ಆಸ್ವಾದನೆ ಇರಬೇಕು, ಸೌಂದರ್ಯದ ಅಪೇಕ್ಷೆ ಬೇಕು, ಸ್ನೇಹ - ಸೌಹಾರ್ದತೆ - ಪ್ರೀತಿ - ಪ್ರೇಮಗಳ ಸಂಮಿಲನ ಇರಬೇಕು, ತ್ಯಾಗ ಮನೋಭಾವವಿರಬೇಕು, ಧೈರ್ಯವೂ ಬೇಕು, ಪರಮಾತ್ಮನ ಅನುಗ್ರಹವೂ ಬೇಕು.  ಹೀಗೆ ಕೆಟ್ಟದ್ದರ ಅಂತ್ಯದಲ್ಲಿ ಪರಮಾತ್ಮನ ಕೃಪೆ ಹೊರಹೊಮ್ಮಿದಾಗ ಬದುಕು ವರ್ಣರಂಜಿತ ಸೊಬಗು ಕಾಣುತ್ತದೆ.  

ಹೋಳಿ ಹಬ್ಬದ ತಾರಕಾಸುರನ ಕತೆ, ದೇವತೆಗಳ ಪರಮಾತ್ಮನ ಸಹಾಯದ ಯಾಚನೆ, ರತಿ-ಮನ್ಮಥರ ಪ್ರೀತಿ-ಪ್ರೇಮ-ಧೈರ್ಯ ಭಕ್ತಿಗಳ ಫಲ, ಕಾಮನು ದಹಿತಗೊಂಡು ಪ್ರೇಮ ಮಾತ್ರ ಶಾಶ್ವತವಾಗಿ ಉಳಿದುಕೊಂಡ ರೀತಿ, ತಾರಕಾಸುರನ ಸಂಹಾರವನ್ನು ಲೋಕ ವರ್ಣರಂಜಿತವಾಗಿ ಸಡಗರಿಸಿದ ರೀತಿ ಇವೆಲ್ಲವೂ ಈ ಆಚರಣೆಯ ಅಂತಃಸತ್ವದಲ್ಲಿ ಅಡಗಿರುವುದನ್ನು ಕಾಣಬಹುದು.

ನಮ್ಮೆಲ್ಲರ ಬದುಕು ಸಂತಸಕರವಾಗಿ ಸೊಗಸು - ಸೌಂದರ್ಯಗಳ ವರ್ಣ ಸೊಬಗಿನಲ್ಲಿ ಮೀಯಲಿ ಎಂದು ಆಶಿಸೋಣ.  

ಎಲ್ಲರಿಗೂ ಬಣ್ಣಗಳ ಹಬ್ಬ ಶುಭತರಲಿ. ಬದುಕು - ಪ್ರಪಂಚ ಸೌಂದರ್ಯದಿಂದ ನಲಿಯಲಿ.  ಬದುಕಿನಲ್ಲಿ ನಲಿವಿಲ್ಲದೆ ಬಳಲುತ್ತಿರುವವರಿಗೆ ಒಳಿತಾಗಲಿ ಎಂಬ ಭಾವ ಕೂಡಾ ನಮ್ಮ ಪ್ರಾರ್ಥನೆಯಲ್ಲಿ ಜೊತೆಗೂಡಲಿ.


Holi, Holy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ