ಭಾನುಮತಿ
ಬಿ. ಭಾನುಮತಿ
ಬಿ. ಭಾನುಮತಿ ಮಹಾನ್ ನೃತ್ಯ ಕಲಾವಿದೆ. ಇಂದು ಅವರ ಸಂಸ್ಮರಣೆ ದಿನ.
ಭಾನುಮತಿ ಐದು ವರ್ಷಗಳ ಬಾಲ್ಯದಲ್ಲಿದ್ದಾಗಲೇ ಪುಣೆಯ ಖ್ಯಾತ ನೃತ್ಯಗುರು ರೋಹಿಣಿಭಾಟೆಯವರಿಂದ ಕಥಕ್ ಶಾಸ್ತ್ರೀಯ ನೃತ್ಯ ಕಲಿಕೆಯನ್ನು ಆರಂಭಿಸಿದರು. ಇವರ ತಾಯಿ ಇಸೈಮಣಿಎಲ್.ಆರ್. ಲಕ್ಷ್ಮೀ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದರು. ತಂದೆ ಡಾ. ಸಿ. ಎಸ್. ಬಾಲಕೃಷ್ಣನ್ ಸಂಗೀತ ಪೋಷಕರಾಗಿದ್ದರು.
ಭಾನುಮತಿ ಅವರು ಭರತನಾಟ್ಯದ ಉನ್ನತ ಶಿಕ್ಷಣವನ್ನು ಮದ್ರಾಸಿನ ಪದ್ಮಶ್ರೀ ಕೆ.ಎನ್. ದಂಡಾಯುಧಪಾಣಿ ಪಿಳ್ಳೈಯವರಿಂದ ಪಡೆದರು. ಭರತನಾಟ್ಯದಲ್ಲಿ ಹೆಸರಾದ ಶ್ರೀಮತಿ ಕಮಲಾಲಕ್ಷ್ಮಣನ್ ಅವರ ಶಿಷ್ಯೆಯಾಗುವ ಅದೃಷ್ಟವೂ ಭಾನುಮತಿಯವರಿಗೆ ಸಂದಿತು.
ಭಾನುಮತಿ ಅವರು ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮ ಮತ್ತು ಪದ್ಮಭೂಷಣ ಕಲಾನಿಧಿನಾರಾಯಣನ್ ಅವರುಗಳಿಂದ ನೇರವಾಗಿ ಅವರವರ ನಾಟ್ಯ ವೈಶಿಷ್ಟ್ಯಗಳನ್ನು ಅರಿತರು. ಮುಂದೆಕೆಲವು ದಶಕಗಳಿಂದ ಕರ್ನಾಟಕದಲ್ಲಿ ನೆಲೆಸಿದ ಭಾನುಮತಿಯವರು ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಮಟ್ಟದಲ್ಲಿ ನಾಡಿಗೆ ಕೀರ್ತಿ ತಂದರು. ಘುಂಘ್ರು ಪೆಸ್ಟಿವಲ್, ಉಸ್ತಾದಅಲ್ಲಾವುದ್ದೀನ್ ಖಾನ್ ಮಹೋತ್ಸವ, ನಾಟ್ಯಾಂಜಲಿ, ಹರಿದಾಸ್ ನೃತ್ಯೋತ್ಸವ ಪಾರಂಗತಉತ್ಸವಗಳಲ್ಲಿ ಪಾಲ್ಗೊಂಡರು.
ಭಾನುಮತಿ ಅವರ 'ಭರತಾಂಜಲಿ' ಸಮೂಹ ನೃತ್ಯ ಪ್ರಯೋಗ ತನ್ನ ಕಲಾತ್ಮಕ ಪ್ರತ್ಯೇಕತೆ ಮತ್ತುಕಲ್ಪನಾತ್ಮಕ ನೃತ್ಯ ವೈಖರಿಯಿಂದ ಭಾರತ ಮತ್ತು ವಿದೇಶಗಳಲ್ಲಿ ನೂರಾರು ಪ್ರದರ್ಶನಗಳನ್ನುಕಂಡಿತು. ಆಧ್ಯಾತ್ಮಿಕತೆ, ಭಕ್ತಿ, ಆರಾಧನಾ ಭಾವ ಇವರ ನೃತ್ಯದ ವೈಶಿಷ್ಟ್ಯ.
ಭಾನುಮತಿ ಅವರು 1974ರಿಂದ ಬೆಂಗಳೂರಿನ 'ನೃತ್ಯ ಕಲಾ ಮಂದಿರಂ' ಶಾಲೆಯ ಮೂಲಕನೂರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದರು.
ಭಾರತ ಸರ್ಕಾರದಿಂದ ಸಮೂಹ ನೃತ್ಯ ಸಂಯೋಜನೆಗಾಗಿ ಭಾನುಮತಿ ಅವರಿಗೆ ಫೆಲೋಶಿಪ್ಸಂದಿತು. ಬಿ. ಭಾನುಮತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಬಿ. ಭಾನುಮತಿ ಅವರು 2021ರ ಮೇ 24ರಂದು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.
On Remembrance Day of great dancer B. Bhanumathi
ಕಾಮೆಂಟ್‌ಗಳು